Advertisement

ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ 29ನೇ ವಾರ್ಷಿಕ ಮಹಾಸಭೆ

03:07 PM Jan 19, 2021 | Team Udayavani |

ನವಿಮುಂಬಯಿ: ನವಿ ಮುಂಬಯಿಯ ಏಕೈಕ ಪ್ರತಿಷ್ಠಿತ ಕಲಾಸಂಸ್ಥೆ ರಂಗಭೂಮಿ ಫೈನ್‌ಆರ್ಟ್ಸ್ ಇದರ 29ನೇ ವಾರ್ಷಿಕ
ಮಹಾಸಭೆಯು ಜ. 20ರಂದು ಬೆಳಗ್ಗೆ 10ರಿಂದ ಶ್ರೀ ಶನೀಶ್ವರ ಮಂದಿರ ನೆರುಲ್‌ ಇದರ ಕಿರು ಸಭಾಗೃಹದಲ್ಲಿ ಸಂಸ್ಥೆಯ ಅಧ್ಯಕ್ಷ ತಾರಾನಾಥ್‌ ಶೆಟ್ಟಿ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಸಭೆಯಲ್ಲಿ ಕಳೆದ ಮಹಾಸಭೆಯ ಮುಖ್ಯಾಂಶಗಳು, ವರ್ಷದ ವಾರ್ಷಿಕ ವರದಿ ಮತ್ತು 2019-2020ನೇ ಸಾಲಿನ ಲೆಕ್ಕಪತ್ರ ಮಂಡನೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಿ ಸದಸ್ಯರಿಂದ ಮಂಜೂರು ಪಡೆಯಲಾಯಿತು. 2020-21ನೇ ಸಾಲಿನ ಲೆಕ್ಕ ಪರಿಶೋಧಕರಾಗಿ ಎಂ. ಆರ್‌. ಅಮಿನ್‌ ಚಾರ್ಟೆಡ್‌ ಅಕೌಂಟ್ಸ್ ಇವರನ್ನು ಸರ್ವಾನುಮತದಿಂದ ನೇಮಿಸಲಾಯಿತು.

ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆಯಲ್ಲಿ ಸಂಸ್ಥೆಯ ಪೂರ್ವ ನಿರ್ಧಾರದಂತೆ ಉಪಾಧ್ಯಕ್ಷ ಸ್ಥಾನದಲ್ಲಿ ಸೇವೆ ಸಲ್ಲಿಸಿರುವ ಜಗದೀಶ್‌ ಶೆಟ್ಟಿ ಪನ್ವೇಲ್‌ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿಗೆ ಬೇಕಾಗಿರುವ ಉಳಿದ 17 ಮಂದಿ ಸದಸ್ಯರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿ ರಚನೆ ಸರ್ವಸದಸ್ಯರ ಅನುಮತಿಯ ಮೇರೆಗೆ ಸಂಸ್ಥೆಯ 5 ಮಂದಿ ಸದಸ್ಯರ ಸಲಹಾ ಸಮಿತಿಯನ್ನು
ರಚಿಸಲಾಗಿದ್ದು, ಮಾಜಿ ನಗರ ಸೇವಕ, ನೆರೂಲ್‌ ಶ್ರೀ ಶನಿ ಮಂದಿರದ ಗೌರವ ಅಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ, ಶನಿ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ, ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್‌ ಟ್ರಸ್ಟ್‌ ಇದರ ಮಾಜಿ ಕಾರ್ಯಾಧ್ಯಕ್ಷ ಅನಿಲ್‌ ಕೆ. ಹೆಗ್ಡೆ ಮತ್ತು ನೆರೂಲ್‌ ಶ್ರೀ ಶನಿ ಮಂದಿರದ ಕೋಶಾಧಿಕಾರಿ ವಿಶ್ವನಾಥ್‌ ಕೆ. ಪೂಜಾರಿ, ಜತೆ ಕೋಶಾಧಿಕಾರಿ ಅದ್ಯಪಾಡಿಗುತ್ತು
ಕರುಣಾಕರ ಎಸ್‌. ಆಳ್ವ ಅವರನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ:ವಾಲ್ಕೇಶ್ವರ ಶ್ರೀ ಕಾಶೀ ಮಠ : ಜ. 21ಕ್ಕೆ ಶ್ರೀಮದ್‌ ಸುಧೀಂದ್ರ ತೀರ್ಥ ಸಾಮೀಜಿಯವರ ಪುಣ್ಯತಿಥಿ

Advertisement

ಶ್ರೀ ಶನೀಶ್ವರ ಮಂದಿರ ನೆರುಲ್‌ ಇದರ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ, ಗೌರವಾಧ್ಯಕ್ಷ ಸಂತೋಷ್‌ ಶೆಟ್ಟಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಚಂದ್ರಹಾಸ್‌ ಶೆಟ್ಟಿ ದೆಪ್ಪುಣಿಗುತ್ತು, ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾಗಿ ಪ್ರಭಾಕರ ಹೆಗ್ಡೆ ಆಯ್ಕೆ
ಜ. 15ರಂದು ನಡೆದ ಆಡಳಿತ ಮಂಡಳಿಯ ಜಂಟಿ ಸಭೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಜಗದೀಶ್‌ ಶೆಟ್ಟಿ ಪನ್ವೇಲ್‌ ಅವರಿಗೆ ನಿಕಟಪೂರ್ವ ಅಧ್ಯಕ್ಷ ತಾರಾನಾಥ್‌ ಶೆಟ್ಟಿ ಪುತ್ತೂರು ಅವರು ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಉಪಾಧ್ಯಕ್ಷರಾಗಿ ಪ್ರಭಾಕರ ಎಸ್‌. ಹೆಗ್ಡೆ ಅವರನ್ನು ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next