ರಾಣಿಬೆನ್ನೂರ: ತಾಲೂಕಿನ ಗಂಗಾಜಲ ತಾಂಡಾ ಬಳಿ ಮೆಡ್ಲೇರಿ ರಸ್ತೆಯಲ್ಲಿರುವ ಕೃಷ್ಣಮೃಗ ಅಭಯಾರಣ್ಯ ರಾಜ್ಯದಲ್ಲಿಯೇ ಪ್ರಸಿದ್ಧಿ ಹೊಂದಿದೆ. ಈ ಕೃಷ್ಣಮೃಗ ಅಭಯಾರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದ ಸಫಾರಿ ಕೈಗೊಳ್ಳಲು ಒಂದು ಸುಸಜ್ಜಿತ ವಾಹನದ ವ್ಯವಸ್ಥೆ ಮಾಡಿದ್ದು, ಪ್ರವಾಸಿಗರು ಕೃಷ್ಣಮೃಗಗಳನ್ನು ಸಮೀಪದಿಂದ ನೋಡಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ.
Advertisement
ಕೃಷ್ಣಮೃಗ ಅಭಯಾರಣ್ಯವನ್ನು ವಿಶೇಷ ಪ್ರವಾಸಿ ತಾಣ ಮಾಡಲು ಚಿಂತನೆ ನಡೆದಿದೆ. ಇದುವರೆಗೂ ಅಭಯಾರಣ್ಯ ಪ್ರದೇಶದಲ್ಲಿ ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಸಫಾರಿ ವಾಹನದ ವ್ಯವಸ್ಥೆ ಮಾಡಿರುವುದರಿಂದ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಸಫಾರಿ ವಾಹನ ಜತೆ ಇಲಾಖೆ ಸಿಬ್ಬಂದಿ ವೀಕ್ಷಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ.
Related Articles
Advertisement
ನೀಲಗಿರಿ ಮರಗಳ ತೆರವಿಗೆ ಚಿಂತನೆ: ಅಭಯಾರಣ್ಯದಲ್ಲಿ ಸುಮಾರು 30 ವರ್ಷಗಳ ಹಿಂದೆ ಗೇಟ್ ಇಂಡಿಯನ್ ಬಸ್ಟರ್ಡ್ (ಎರಲಡ್ಡು) ಪಕ್ಷಿಗಳಿದ್ದವು. ಆದರೆ ನಂತರದ ದಿನಗಳಲ್ಲಿ ಬೆಳೆದ ನೀಲಗಿರಿ ಮರಗಳಿಂದ ಅವು ಇಲ್ಲಿಂದ ಕಣ್ಮರೆಯಾಗಿವೆ. ಇದಲ್ಲದೆ ಕೃಷ್ಣಮೃಗಗಳು ಸ್ವತ್ಛಂದವಾಗಿ ಅರಣ್ಯ ಪ್ರದೇಶದಲ್ಲಿ ವಿಹರಿಸಲು ನೀಲಗಿರಿ ಮರಗಳು ಅಡ್ಡಿಯಾಗಿವೆ. ಆದ್ದರಿಂದ ಈಗಿರುವ ನೀಲಗಿರಿ ಮರಗಳನ್ನು ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ತೆರವುಗೊಳಿಸಲು ಯೋಜನೆ ರೂಪಿಸಲಾಗಿದೆ.ಮುಂದಿನ ದಿನಗಳಲ್ಲಿ ಅಭಯಾರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ಕೈಗೊಳ್ಳಲಾಗಿದೆ.
ವೀಕ್ಷಣೆಗೆ ಸಕಾಲ: ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಅಭಯಾರಣ್ಯದಲ್ಲಿ ಕೃಷ್ಣಮೃಗ ಹಾಗೂಇತರೆ ಪ್ರಾಣಿಗಳನ್ನು ನೋಡಲು ಸಕಾಲವಾಗಿದೆ. ಬೆಳಿಗ್ಗೆ 6 ರಿಂದ 9ರವರೆಗೆ ಹಾಗೂ ಸಂಜೆ 4 ರಿಂದ 6 ರವರೆಗೆ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.
ಸಿಬ್ಬಂದಿ ವೀಕ್ಷಕರಿಗೆ ಮಾರ್ಗದರ್ಶನ ನೀಡುತ್ತಾರೆ.
ತೀಶ ಪೂಜಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ರಾಣಿಬೆನ್ನೂರ ಕೃಷ್ಣಮೃಗ ಅಭಯಾರಣ್ಯದ ಅಭಿವೃದ್ಧಿಗೆ ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಿದೆ. ನನ್ನ ಅನುದಾನದಲ್ಲಿ 50 ಲಕ್ಷ ರೂ. ನೀಡಿದ್ದು ಪ್ರವಾಸಿಗರಿಗಾಗಿ ಸಫಾರಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು.
ಪ್ರಕಾಶ ಕೋಳಿವಾಡ, ಶಾಸಕರು, ರಾಣಿಬೆನ್ನೂರ. ■ ಮಂಜುನಾಥ ಎಚ್. ಕುಂಬಳೂರ