Advertisement

Hema Malini ವಿರುದ್ಧ ಕೀಳು ಮಟ್ಟದ ಟೀಕೆ: ಸುರ್ಜೆವಾಲಾ ವಿರುದ್ಧ ಬಿಜೆಪಿ ಆಕ್ರೋಶ

05:52 PM Apr 04, 2024 | Team Udayavani |

ಹೊಸದಿಲ್ಲಿ: ಪ್ರಖ್ಯಾತ ನಟಿ ಮತ್ತು ಮಥುರಾ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ “ಕೀಳು ಮಟ್ಟದ”ವಿವಾದಾತ್ಮಕ ಟೀಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೇವಾಲಾ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ”ಇದು ರಾಹುಲ್ ಗಾಂಧಿ ಅವರ ಕಾಂಗ್ರೆಸ್ ಪಕ್ಷದ ಸ್ತ್ರೀದ್ವೇಷ ಮತ್ತು ಮಹಿಳೆಯರ ಕುರಿತು ಇರುವ ಅಸಹ್ಯಕರ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ” ಎಂದು ಹೇಳಿದೆ.

Advertisement

ಟೇಕೆಗಳ ಬಳಿಕ ಸುರ್ಜೇವಾಲಾ ಅವರು ತಮ್ಮ ಭಾಷಣದ ಆಯ್ದ ಭಾಗಗಳನ್ನು ಮಾತ್ರ ಬಿಜೆಪಿ ಐಟಿ ಸೆಲ್ ಹಂಚಿಕೊಂಡಿದೆ ಎಂದು ಹೇಳಿದ್ದು, “ಸತ್ಯ  ತಿರುಚುವ ಮತ್ತು ಸುಳ್ಳನ್ನು ಹರಡುವ” ಅಭ್ಯಾಸವನ್ನು ಹೊಂದಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಹಿಮಾಚಲದಲ್ಲಿ ಇದನ್ನು “50 ಕೋಟಿ ಗರ್ಲ್ ಫ್ರೆಂಡ್” ಎಂದು ಏಕೆ ಕರೆಯಲಾಯಿತು? ಸಂಸದೆಯರನ್ನು ಸಂಸತ್ತಿನಲ್ಲಿ “ಶೂರ್ಪನಖಾ” ಎಂದು ಏಕೆ ಕರೆಯಲಾಯಿತು?, ಮಹಿಳಾ ಮುಖ್ಯಮಂತ್ರಿಯನ್ನು ಅಸಭ್ಯ ರೀತಿಯಲ್ಲಿ ಟ್ರೋಲ್ ಮಾಡಿದ್ದು ಏಕೆ?, “ಕಾಂಗ್ರೆಸ್‌ನ ವಿಧವೆ” ಎಂದು ಹೇಳುವುದು ಸರಿಯೇ?, ಕಾಂಗ್ರೆಸ್‌ನ ಉನ್ನತ ನಾಯಕತ್ವವನ್ನು “ಜೆರ್ಸಿ ಹಸು” ಎಂದು ಕರೆಯುವುದು ಸರಿಯೇ?, ಹಿಮಾಚಲದಲ್ಲಿ ಇದನ್ನು “50 ಕೋಟಿ ಗರ್ಲ್ ಫ್ರೆಂಡ್” ಎಂದು ಏಕೆ ಕರೆಯಲಾಯಿತು?” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹರಿಯಾಣ ಮಹಿಳಾ ಸಮಿತಿಯು ಸುರ್ಜೆವಾಲಾ ಅವರ ಹೇಳಿಕೆಗಳ ಮೇಲೆ ಏಪ್ರಿಲ್ 9 ಕ್ಕೆ ಅನ್ವಯವಾಗುವಂತೆ ಸಮನ್ಸ್ ನೀಡಿದೆ. ಹೇಮಾ ಮಾಲಿನಿಯವರು ಹೇಳಿಕೆಯ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿ ನಮ್ಮ ಪಕ್ಷವು ಇದನ್ನು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ‘ಇದು ಹೇಮಾ ಮಾಲಿನಿಯವರಿಗೆ ಮಾತ್ರವಲ್ಲ, ಸಾಮಾನ್ಯ ಮಹಿಳೆಯರಿಗೂ ಅವಮಾನಕರವಾಗಿದೆ” ಎಂದು ಎಕ್ಸ್‌ನಲ್ಲಿ ದಿನಾಂಕವಿಲ್ಲದ ವೀಡಿಯೋವನ್ನು ಹಂಚಿಕೊಂಡ ನಂತರ ಸುರ್ಜೇವಾಲಾ ಅವರು ಬಿಜೆಪಿಯಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ ಹೇಮಾ ಮಾಲಿನಿ ಬಗ್ಗೆ ಸುರ್ಜೆವಾಲಾ ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ.

Advertisement

”ಪ್ರೀತಿಯ ಅಂಗಡಿ ತೆರೆಯುವ ಮಾತು ಕೇಳಿ ಬಂದಿತ್ತು ಆದರೆ ಕಾಂಗ್ರೆಸ್ ದ್ವೇಷದ ಅಂಗಡಿ ತೆರೆದಿದೆ. ಮಹಿಳೆಯರ ಬಗ್ಗೆ ಕೀಳುಮಟ್ಟದ ದೃಷ್ಟಿಕೋನ ಹೊಂದಿರುವ ಕಾಂಗ್ರೆಸ್ ನಾಯಕರು ಅನಿವಾರ್ಯ ಸೋಲಿನ ಹತಾಶೆಯಲ್ಲಿ ದಿನದಿಂದ ದಿನಕ್ಕೆ ತಮ್ಮ ಚಾರಿತ್ರ್ಯ ಹದಗೆಡಿಸಿಕೊಳ್ಳು ತ್ತಿದ್ದಾರೆ” ಎಂದು ನಟಿ ಮತ್ತು ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next