Advertisement

Ranchi Test: ರಾಹುಲ್‌ ಫಿಟ್‌, ಬುಮ್ರಾಗೆ ರೆಸ್ಟ್‌ ?

10:59 PM Feb 19, 2024 | Team Udayavani |

ರಾಜ್‌ಕೋಟ್‌: ಇಂಗ್ಲೆಂಡ್‌ ವಿರುದ್ಧ ರಾಂಚಿಯಲ್ಲಿ ಆಡಲಾಗುವ 4ನೇ ಟೆಸ್ಟ್‌ ಪಂದ್ಯಕ್ಕಾಗಿ ಪ್ರಧಾನ ವೇಗಿ ಹಾಗೂ ಉಪನಾಯಕನೂ ಆಗಿರುವ ಜಸ್‌ಪ್ರೀತ್‌ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹಾಗೆಯೇ ಚೇತರಿಸಿಕೊಂಡು ಫಿಟ್‌ನೆಸ್‌ಗೆ ಮರಳಿ ರುವ ಕೆ.ಎಲ್‌. ರಾಹುಲ್‌ ತಂಡಕ್ಕೆ ವಾಪ ಸಾಗುವ ನಿರೀಕ್ಷೆಯೂ ದಟ್ಟವಾಗಿದೆ. ಬುಮ್ರಾ ಈ ಸರಣಿಯಲ್ಲಿ ಸರ್ವಾಧಿಕ 17 ವಿಕೆಟ್‌ ಉರುಳಿಸಿದ್ದಾರೆ.

Advertisement

ದ್ವಿತೀಯ ಟೆಸ್ಟ್‌ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸತತವಾಗಿ ಆಡುತ್ತಲೇ ಬಂದಿರುವುದರಿಂದ, ಒತ್ತಡ ದಿಂದ ಮುಕ್ತರಾಗಲು ಇವರಿಗೊಂದು ಬ್ರೇಕ್‌ ಕೊಡಬೇಕೆಂದು ಬಿಸಿಸಿಐ ಯೋಚಿಸುತ್ತಿದೆ. ಈ ಸರಣಿಯ 3 ಟೆಸ್ಟ್‌ಗಳಲ್ಲಿ ಬುಮ್ರಾ 80.5 ಓವರ್‌ ಎಸೆದಿದ್ದಾರೆ.

ವಿಶಾಖಪಟ್ಟಣದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಅವರಿಗೂ ವಿಶ್ರಾಂತಿ ನೀಡಲಾಗಿತ್ತು. ಬಳಿಕ ರಾಜ್‌ಕೋಟ್‌ ಟೆಸ್ಟ್‌ಗೆ ಮರಳಿದ್ದರು.

ರಾಂಚಿಯಲ್ಲಿ ಬುಮ್ರಾ ಸ್ಥಾನ ತುಂಬುವ ವೇಗಿ ಯಾರೆಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ಬುಮ್ರಾ ಅವರಷ್ಟು ಅನುಭವಿ ವೇಗಿಗಳಾÂರೂ ತಂಡದಲ್ಲಿಲ್ಲ. ಹೀಗಾಗಿ ಸಿರಾಜ್‌ಗೆ ಜತೆ ನೀಡಲು ಮುಕೇಶ್‌ ಕುಮಾರ್‌ ಅಥವಾ ಆಕಾಶ್‌ ದೀಪ್‌ ಅವರೇ ಬರಬೇಕಾಗುತ್ತದೆ.
ಭಾರತ ತಂಡ ಮಂಗಳವಾರ ರಾಂಚಿಗೆ ಪಯಣಿಸಲಿದೆ. ಆದರೆ ಬುಮ್ರಾ ಅಹ್ಮದಾಬಾದ್‌ಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಪಾಟಿದಾರ್‌ಗೆ ನಷ್ಟ
ತೊಡೆ ಸಂದು ನೋವಿನಿಂದಾಗಿ 2ನೇ ಹಾಗೂ 3ನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ಕೆ.ಎಲ್‌. ರಾಹುಲ್‌ ಕಳೆದ ವಾರವೇ ಶೇ. 90ರಷ್ಟು ಫಿಟ್‌ನೆಸ್‌ ಹೊಂದಿದ್ದರು; ಹೀಗಾಗಿ ರಾಂಚಿ ಟೆಸ್ಟ್‌ಗೆ ಲಭ್ಯರಾಗುತ್ತಾರೆ ಎಂದು ತಿಳಿದು ಬಂದಿದೆ. ರಾಹುಲ್‌ ಒಳಬಂದರೆ ರಜತ್‌ ಪಾಟಿದಾರ್‌ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇಲ್ಲವಾದರೂ ಪಾಟಿದಾರ್‌ ಸ್ಥಾನಕ್ಕೆ ಸಂಚಕಾರ ಎದು ರಾಗಿತ್ತು. ಅವರು ಅವಕಾಶವನ್ನು ಬಳಸಿಕೊಳ್ಳಲು ವಿಫ‌ಲರಾಗಿದ್ದರು. ರಾಂಚಿಯಲ್ಲಿ ಪಾಟಿದಾರ್‌ ಬದಲು ದೇವದತ್ತ ಪಡಿಕ್ಕಲ್‌ ಆಡಬಹುದೆಂದು ನಿರೀಕ್ಷಿಸಲಾಗಿತ್ತು. ಈಗ ರಾಹುಲ್‌ ವಾಪಸಾಗುವುದರಿಂದ ಪಡಿಕ್ಕಲ್‌ಗೆ ಅವಕಾಶ ಕಷ್ಟ. ಅವರನ್ನು ಮರಳಿ ರಣಜಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next