Advertisement

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

01:38 PM Aug 19, 2022 | Team Udayavani |

ಮುಂಬೈ: ಜುಲೈ 22ರಂದು ಬಿಡುಗಡೆಯಾಗಿದ್ದ ರಣಬೀರ್ ಕಪೂರ್, ಸಂಜಯ್ ದತ್ ಮತ್ತು ವಾಣಿ ಕಪೂರ್ ನಟನೆಯ ಬಾಲಿವುಡ್ ನ ಶಂಷೇರಾ ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿಯೂ ವೀಕ್ಷಿಸಬಹುದಾಗಿದೆ.

Advertisement

ಇದನ್ನೂ ಓದಿ:ಕೊಡಗಿನಲ್ಲಿ ಬಿಜೆಪಿಯವರು ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಕೆಟ್ಟ ಸಂಸ್ಕಾರ

ಆದಿತ್ಯ ಛೋಪ್ರಾ ನಿರ್ಮಾಣದ ಶಂಷೇರಾ ಸಿನಿಮಾವನ್ನು ಕರಣ್ ಮಲ್ಹೋತ್ರಾ ನಿರ್ದೇಶಿಸಿದ್ದರು. ಇದೀಗ ಶಂಷೇರಾ ಹಿಂದಿ ಅವತರಿಣಿಕೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿ ಪ್ರಿಯರಿಗೆ ಲಭ್ಯವಿದೆ ಎಂದು ವರದಿ ತಿಳಿಸಿದೆ.

ನಾಲ್ಕು ವರ್ಷಗಳ ಬಳಿಕ ಮತ್ತೆ ನಟಿಸಿದ್ದ ರಣಬೀರ್ ಕಪೂರ್ ಶಂಷೇರಾ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿತ್ತು. ಯಶ್ ರಾಜ್ ಫಿಲ್ಮ್ಸ್ (ವೈಆರ್ ಎಫ್) ಜತೆಗಿನ ಒಪ್ಪಂದದ ಪ್ರಕಾರ ಈವರೆಗೆ ಅಮೆಜಾನ್ ಪ್ರೈಮ್ ವಿಡಿಯೋ ನಾಲ್ಕು ಚಿತ್ರಗಳನ್ನು ಪ್ರಸಾರ ಮಾಡಿದಂತಾಗಿದೆ.

ಈಗಾಗಲೇ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಾಣಗೊಂಡಿದ್ದ ಬಂಟಿ ಔರ್ ಬಬ್ಲಿ-2, ಜಯೇಶ್ ಭಾಯ್ ಜೋರ್ದಾರ್ ಮತ್ತು ಸಾಮ್ರಾಟ್ ಪ್ರಥ್ವಿರಾಜ್ ಸಿನಿಮಾ ಅಮೆಜಾನ್ ಪ್ರೈಮ್ ಪ್ರಸಾರ ಮಾಡಿದ್ದು, ಇದೀಗ ಶಂಷೇರಾ ನಾಲ್ಕನೆ ಚಿತ್ರವಾಗಿದೆ ಎಂದು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next