Advertisement

ರಣಜಿ: ಮುಂಬಯಿಗೆ ಸೋಲು

12:14 AM Dec 31, 2022 | Team Udayavani |

ಮುಂಬಯಿ : ವರ್ಷಾಂತ್ಯದ ಪಂದ್ಯದಲ್ಲಿ “ರಣಜಿ ಕಿಂಗ್‌’ ಮುಂಬಯಿ ಯನ್ನು ಸೌರಾಷ್ಟ್ರ 48 ರನ್ನುಗಳಿಂದ ಮಣಿಸಿ ಸಂಭ್ರಮಿಸಿದೆ.

Advertisement

ಗೆಲುವಿಗೆ 280 ರನ್ನುಗಳ ಗುರಿ ಪಡೆದ ಮುಂಬಯಿ, ಪಂದ್ಯದ ಅಂತಿಮ ದಿನವಾದ ಶುಕ್ರವಾರ 231ಕ್ಕೆ ಸರ್ವಪತನ ಕಂಡಿತು. ಸ್ಪಿನ್ನರ್‌ಗಳಾದ ಯುವ್ರಾಜ್‌ಸಿನ್‌ ದೋಡಿಯ ಮತ್ತು ಪಾರ್ಥ್ ಭಟ್‌ ತಲಾ 4 ವಿಕೆಟ್‌ ಉಡಾಯಿಸಿ ಮುಂಬಯಿಯನ್ನು ಸೋಲಿನ ಸುಳಿಗೆ ತಳ್ಳಿದರು.

ಪೃಥ್ವಿ ಶಾ (68), ಸೂರ್ಯಕುಮಾರ್‌ ಯಾದವ್‌ (38), ನಾಯಕ ಅಜಿಂಕ್ಯ ರಹಾನೆ (16) ಮೊದಲಾದ ಘಟಾನು ಘಟಿ ಬ್ಯಾಟರ್‌ಗಳನ್ನೂ ಹೊಂದಿಯೂ ಮುಂಬಯಿ ಪರಾಭವಗೊಂಡಿತು.

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-289 ಮತ್ತು 220. ಮುಂಬಯಿ-230 ಮತ್ತು 231 (ಶಾ 68, ಸೂರ್ಯಕುಮಾರ್‌ 38, ಮುಲಾನಿ 34, ಸಫ‌ìರಾಜ್‌ 20, ರಹಾನೆ 16, ಪಾರ್ಥ್ ಭಟ್‌ 56ಕ್ಕೆ 4, ಯುವ್ರಾಜ್‌ಸಿನ್‌ 86ಕ್ಕೆ 4, ಧರ್ಮೇಂದ್ರಸಿನ್ಹ ಜಡೇಜ 84ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next