Advertisement
ಪಟ್ಟಣದ ಸಮೀಪದ ಪ್ರಸಾದಿಹಳ್ಳಿ ಬಳಿ ಪ್ರಾರಂಭವಾಗಿರುವ ದ್ವಾರ ಸಮುದ್ರ ಕೆರೆಗೆ ನೀರು ಹರಿಸುವ ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
ಕಾಮಗಾರಿ ಚುರುಕಿಗೆ ಸೂಚನೆ: ಈಗಾಗಲೆ ಕಾಮಗಾರಿ ಪ್ರಾರಂಭವಾಗಿ 2 ತಿಂಗಳು ಕಳೆದಿವೆ. ಸುಮಾರು 40ರಿಂದ 50 ಮೀಟರ್ ಸುರಂಗ ಕೊರೆದಿದ್ದು, ಮೊದಲ ಹಂತದಲ್ಲಿ ಕಾಮಗಾ ರಿ ವೇಳೆ ಜೇಡಿ ಹಾಗೂ ಸಡಿಲ ಮಣ್ಣು ಸಿಗುತ್ತಿದ್ದು ಕಾಮಗಾರಿ ನಿಧಾನವಾಗಿದೆ. 100 ಮೀ.ಹೋದ ನಂತರದಲ್ಲಿ ಕಾಮಗಾರಿ ಚುರುಕುಗೊಳ್ಳುತ್ತದೆ ಎಂದು ಮುಖ್ಯ ಎಂಜೀನಿಯರ್ ಮಾಹಿತಿ ನೀಡಿದರು.
ನಿಗದಿತ ಸಮಯದಲ್ಲಿಯೇ ಕಾಮಗಾರಿ ಪೂರ್ಣಗೊಂಡು ದ್ವಾರಸಮುದ್ರ ಕೆರೆಗೆ ನೀರು ಹರಿಸಬೇಕು. ಹೀಗಾಗಿ ಯಾವುದೇ ಕಾರಣ ಹೇಳದೇ ಕಾಮಗಾರಿ ಚುರುಕುಗೊಳಿಸಬೇಕು. ನಾಲ್ಕು ಕಡೆ ಸುರಂಗ ಮಾರ್ಗ ಕೊರೆಯುವ ಕೆಲಸ ಶೀರ್ಘದಲ್ಲಿ ಪ್ರಾರಂಭಿಸಬೇಕು. ಮಳೆಗಾಲ, ಚಳಿಗಾಲದ ಕಾರಣ ಹೇಳದೇ ಭೂಮಿಯ ಮೇಲ್ಭಾಗದ ಕಾಮಗಾರಿ ಹಾಗೂ ಸುರಂಗದ ಕಾಮಗಾರಿ ಕೆಲಸ ನಿರಂತರವಾಗಿ ಸಾಗಬೇಕು ಎಂದು ಅಧಿಕಾರಿಗಳಿಗೆ ಹಾಗೂ ಕೆಲಸಗಾರರಿಗೆ ಸೂಚಿಸಿದರು.
ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣ: ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಕಾಮಗಾರಿಯನ್ನು 24 ತಿಂಗಳಲ್ಲಿ ಮುಗಿಸಿ ಬೇಲೂರಿನ ಯಗಚಿ ನದಿಯಿಂದ ವಿಶ್ವಪ್ರಸಿದ್ಧ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿರುವ ದ್ವಾರಸಮುದ್ರ ಕೆರೆಗೆ ನೀರು ಹರಿಸುವ ಕಾರ್ಯ ಪೂರ್ಣಗೊಳಿಸಬೇಕು. ಈ ಕಾಮಗಾರಿ ಪೂರ್ಣಗೊಂಡರೆ ಸುಮಾರು ಸಾವಿರಾರು ಹೆಕ್ಟೇರ್ ಜಮೀನಿಗೆ ನೀರು ಹರಿಸಿದಂತಾಗುತ್ತದೆ. ಜತೆಗೆ ಸಾವಿರಾ ರು ಕೊಳವೆ ಬಾಗಳಲ್ಲಿ ಅಂತರ್ಜಲ ಹೆಚ್ಚಿ ಲಕ್ಷಾಂತರ ರೈತರ ಬದುಕು ಹಸನಾಗುತ್ತದೆ. ಹೀಗಾಗಿ ನಿಗದಿತ ಕಾಲಮಾನದಲ್ಲಿಯೇ ಕಾಮಗಾರಿ ಮುಗಿಸಿದರೆ ರೈತರಿಗೆ ನಾನು ಕೊಟ್ಟ ಭರವಸೆ ಉಳಿಸಿಕೊಂಡಂತಾಗುತ್ತದೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ರಣಘಟ್ಟ ಕಾಮಗಾರಿಗೆ ವೀಕ್ಷಣೆಗೆ ಬರುತ್ತಿದ್ದೇನೆ ಎಂದು ಸುದ್ದಿ ಮಾಧ್ಯಮದವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ್, ಸೊಪ್ಪಿನಹಳ್ಳಿ ಶಿವಣ್ಣ, ಮಹೇಶ್, ದಿಲೀಪ್, ಕಾಂತರಾಜ್ , ಈಶ್ವರ್, ಪ್ರೇಮಣ್ಣ ಮುಂತಾದವರು ಹಾಜರಿದ್ದರು.
ಮಾಜಿ ಸಿಎಂ ಎಚ್‌ಡಿಕೆ, ಬಿಎಸ್‌ವೈ ಕೊಡುಗೆ ಸ್ಮರಣೆ : ಚುನಾವಣೆಗೂ ಮೊದಲು ನಾನು ರಣಘಟ್ಟ ಯೋಜನೆ ಜಾರಿ ಬಗ್ಗೆ ಮಾತು ಕೊಟ್ಟಿದ್ದೆ. ಹಾಗೆ ಶಾಸಕನಾದ ಮೂರೇ ತಿಂಗಳಲ್ಲಿ ಸರ್ಕಾರದ ಗಮನ ಸೆಳೆದು, ಒತ್ತಡ ಹೇರಿದಕ್ಕೆ ಯೋಜನೆಗೆ ಮಾಜಿ ಸಿಎಂ ಕುಮಾರಸ್ವಾಮಿ 120 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿರಿಸಿದರು. ಯಡಿಯೂರಪ್ಪನವರು ಅನುಮೋದನೆ ದೊರಕಿಸಿಕೊಟ್ಟರು. ಅದರ ಪ್ರತಿಫಲ ಇಂದು ರಣಘಟ್ಟ ಯೋಜನೆ ಕಾಮಗಾರಿ ಆರಂಭವಾಗಿದೆ. ಶೀಘ್ರದಲ್ಲೇ ಜನತೆ ಈ ಯೋಜನೆ ಲಾಭ ಪಡೆಯಲಿದ್ದಾರೆ. – ಕೆ.ಎಸ್.ಲಿಂಗೇಶ್ ಬೇಲೂರು ಶಾಸಕ