Advertisement

ಇಂದಿನಿಂದ ರಮ್ಜಾನ್‌ ಉಪವಾಸ

12:13 AM May 06, 2019 | sudhir |

ಉಡುಪಿ/ಮಂಗಳೂರು: ಕೇರಳದ ಕೋಯಿಕ್ಕೋಡ್‌ ಕಾಪಾಡ್‌ನ‌ಲ್ಲಿ ಚಂದ್ರದರ್ಶನವಾಗಿ ರುವುದರಿಂದ ರಮ್ಜಾನ್‌ ತಿಂಗಳ ಉಪವಾಸವು ಮೇ 6 ಸೋಮವಾರದಿಂದ ಆರಂಭಗೊಳ್ಳಲಿದೆ ಎಂದು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲಾ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್‌ ಬೇಕಲ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ ಘೋಷಿಸಿದ್ದಾರೆ.

Advertisement

ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ಉಪವಾಸದಿಂದ ಸಾಧ್ಯವಾಗಲಿ. ರಮ್ಜಾನ್‌ ಎಂಬುದು ಹಸಿವು, ದಾಹ, ಭಾವನೆಗಳನ್ನು ಅರಿತುಕೊಳ್ಳುವ ತಿಂಗಳಾಗಿದ್ದು, ಸೌಹಾರ್ದ ಮತ್ತು ಧರ್ಮಸಹಿಷ್ಣುತೆಗೆ ಈ ತಿಂಗಳು ಒತ್ತು ನೀಡುತ್ತದೆ. ಈ ತಿಂಗಳಲ್ಲಿ ಉಪವಾಸಿಯಾಗುವ ಮೂಲಕ ಮುಸ್ಲಿಮರು ಸ್ವಧರ್ಮವನ್ನು ಅರಿತುಕೊಳ್ಳಲು ಮತ್ತು ಇತರ ಧರ್ಮೀಯರೊಂದಿಗೆ ಸೌಹಾರ್ದ ಸಂಬಂಧ ಗಟ್ಟಿಗೊಳಿಸಲು ಪ್ರಯತ್ನಿಸಬೇಕು.

ರಮ್ಜಾನ್‌ ಸ್ವಶುದ್ಧೀಕರಣದ ತಿಂಗಳು. ನೈತಿಕ ಮತ್ತು ಮಾನಸಿಕವಾಗಿ ಶುದ್ಧೀಕರಣಗೊಳ್ಳುವ ತಿಂಗಳಾಗಿ ಮುಸ್ಲಿಮರು ಈ ತಿಂಗಳನ್ನು ಸ್ವೀಕರಿ
ಸಲಿ ಎಂದು ಖಾಝಿ ಅವರು ತಮ್ಮ ಸಂದೇಶ ದಲ್ಲಿ ತಿಳಿಸಿದ್ದಾರೆ.

ಇನ್ನು ಕೆಲವು ವರ್ಷ ಬೇಸಗೆಯಲ್ಲಿ
ಮುಸ್ಲಿಮರು ಚಾಂದ್ರಮಾನ ತಿಂಗಳ ಲೆಕ್ಕವನ್ನು ಅನುಸರಿಸುವು ದರಿಂದ ಪ್ರತಿ ವರ್ಷ ರಮ್ಜಾನ್‌ ಉಪವಾಸ 15 ದಿನ ಮುಂಚಿತವಾಗಿ ಬರುತ್ತದೆ. ಮುಂದಿನ ವರ್ಷ ಇನ್ನೂ 15 ದಿನ ಮುಂಚಿತವಾಗಿ, ಅನಂತರದ ವರ್ಷ ಮತ್ತೆ 15 ದಿನ ಮುಂಚಿತವಾಗಿ ಬರಲಿದೆ. ಈಗ ಬೇಸಗೆ ಸಮಯವಾದ ಕಾರಣ ಉಪವಾಸ ನಡೆಸಲು ತುಸು ಕಷ್ಟಸಾಧ್ಯವೂ ಆಗಲಿದೆ.
“ನಮ್ಮ ಧರ್ಮದಲ್ಲಿ ಉಪವಾಸ ಕಡ್ಡಾಯ ವಾಗಿದೆ. ಆದ ಕಾರಣ ಉಪವಾಸ ಮಾಡಲು ಬೇಸಗೆಯಾದರೂ ಕಷ್ಟವಾಗುವುದಿಲ್ಲ. ಉಪವಾಸವು ಆರೋಗ್ಯ ವೃದ್ಧಿಯಾಗಲು, ಶಾಂತಿ ಪ್ರಾಪ್ತಿ, ಭಯನಿವಾರಣೆಗಾಗಿಯೂ ಅಗತ್ಯ’ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್‌ನ ಸಂಘಟನ ಕಾರ್ಯದರ್ಶಿ ಅಬ್ದುಲ್‌ ರೆಹಮಾನ್‌ ರಜ್ವಿ ಕಲ್ಕಟ್ಟ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next