Advertisement

ಮೋದಿಯದು ಮಾರ್ಕೆಟಿಂಗ್‌ ಸರಕಾರ: ರಮ್ಯಾ ಆರೋಪ

10:41 AM May 17, 2017 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರದು ಮಾರ್ಕೆಟಿಂಗ್‌ ಸರ್ಕಾರ ಎಂದು ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಆರೋಪಿಸಿದ್ದಾರೆ. ನೂತನ ಹೊಣೆಗಾರಿಕೆ ವಹಿಸಿಕೊಂಡ ಅನಂತರ ಮೊದಲ ಬಾರಿಗ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೋದಿ ನೇತೃತ್ವದ ಕೇಂದ್ರ ಸರಕಾರ  ಕೆಲಸ ಮಾಡುವ ಬದಲು ಮಾರ್ಕೆಟಿಂಗ್‌ ಮಾಡುತ್ತಿದೆ. ಬಡ ಜನರ ಸಮಸ್ಯೆ ಕೇಳುವ, ನೊಂದವರನ್ನು ಭೇಟಿ ಮಾಡಲು ಪ್ರಧಾನಿಗೆ ಸಮಯವಿಲ್ಲ ಎಂದು ದೂರಿದರು.

Advertisement

ಮೋದಿ ಸರಕಾರ ದಲಿತರು ಮತ್ತು ಆದಿವಾಸಿಗಳ ವಿರೋಧಿಯಾಗಿದ್ದು, ದೇಶದ ಜನತೆಗೆ ಸುಳ್ಳು ಹೇಳುತ್ತ ಸಾಗಿದೆ. ಮೂರು ವರ್ಷದಲ್ಲಿ ಪ್ರಧಾನಿ ಮೋದಿ ಹೇಳಿರುವ ಒಂದು ಕೆಲಸವನ್ನೂ ಮಾಡಿಲ್ಲ. ಸ್ವತ್ಛ ಭಾರತ, ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಯೋಜನೆಗಳು ವಿಫ‌ಲವಾಗಿವೆ. ಜನಸಾಮಾನ್ಯರ ವಸ್ತುಗಳಾದ ಬೇಳೆ, ಡಿಸೇಲ್‌, ಪೆಟ್ರೋಲ್‌ ಬೆಲೆ ಗಗನಕ್ಕೇರಿದೆ. ನೋಟು ರದ್ದತಿಯಿಂದ ಜನತೆ ಇನ್ನೂ ತೊಂದರೆ ಅನುಭವಿಸುತ್ತಿದ್ದು, ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಕೇಂದ್ರ ಸರಕಾರ ದಕ್ಷಿಣ ಭಾರತವನ್ನು ಸಂಪೂರ್ಣ ಕಡೆಗಣಿಸಿದ್ದು, ಕರ್ನಾಟಕದಲ್ಲಿ ಭೀಕರ ಬರಗಾಲ ಇದ್ದರೂ ಅಗತ್ಯ ಹಣ ನೀಡಿಲ್ಲ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next