Advertisement

ಫೇಕ್‌ ಅಕೌಂಟ್‌ ಬಗ್ಗೆ ರಮ್ಯಾ ಸ್ಪಷ್ಟನೆ

11:28 AM Feb 09, 2018 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಫೇಕ್‌ ಅಕೌಂಟ್‌ ತೆರೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿಲ್ಲ ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಒಂದು ಮತ್ತು ವೈಯಕ್ತಿಕವಾಗಿ ಪ್ರತ್ಯೇಕ ಅಕೌಂಟ್‌ ತೆರೆಯುವಂತೆ ಸಲಹೆ ನೀಡಿದ್ದೇನೆ.

Advertisement

ನಕಲಿ ಅಕೌಂಟ್‌ ತೆರೆಯುವಂತೆ ಎಲ್ಲಿಯೂ ಹೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿಯೂ ಎರಡು ಅಕೌಂಟ್‌ ಇವೆ. ಒಂದು ಆಫಿಶಿಯಲ್‌ ಅಕೌಂಟ್‌, ಮತ್ತೂಂದು ಅವರ ಖಾಸಗಿ ಅಕೌಂಟ್‌. ನಾನು ಮಾತನಾಡಿರುವ ವಿಡಿಯೋ ಎಡಿಟ್‌ ಮಾಡಿ, ಹೇಳಿಕೆಯನ್ನು ತಿರುಚಲಾಗಿದೆ ಎಂದು ರಮ್ಯಾ ಹೇಳಿದ್ದಾರೆ.

ಈ ಬಗ್ಗೆ ನಟ ಜಗ್ಗೇಶ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮ್ಯಾ, ಅವರು ದೊಡ್ಡವರು ನಾನೇನೂ ಮಾತನಾಡಲ್ಲ ಎಂದರು. ಮೋದಿ ಹೇಳಿರುವ ಟಾಪ್‌ ಹೇಳಿಕೆಗೂ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next