Advertisement

ರಾಹುಲ್‌ ಸಂವಾದದಲ್ಲಿ ರಮ್ಯಾ ಪ್ರತ್ಯಕ್ಷ

06:29 AM Mar 19, 2019 | |

ಬೆಂಗಳೂರು: ಒಂದು ವರ್ಷದಿಂದ ರಾಜ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ, ಸೋಮವಾರ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನವೋದ್ಯಮಿಗಳ ಜತೆ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ನಡೆಸಿದ ಸಂವಾದದಲ್ಲಿ ರಮ್ಯಾ ಪಾಲ್ಗೊಂಡಿದ್ದರು.

Advertisement

2018ರಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ಅಕೌಂಟ್‌ ತೆರೆಯುವ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ರಮ್ಯಾ, ನಂತರ ರಾಜ್ಯದಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡಿರಲಿಲ್ಲ. ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಹಾಗೂ ಮತದಾನ ಮಾಡಲೂ ಕೂಡ ಆಗಮಿಸದೇ ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದರು.

ಅದಾದ ನಂತರ ಖಾಸಗಿಯಾಗಿ ಪಕ್ಷದ ಕಚೇರಿಗೆ ಆಗಮಿಸಿ ಹೋಗಿದ್ದ ಅವರು, ದೆಹಲಿಯಲ್ಲಿ ಕುಳಿತೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್‌ ಮಾಡುವ ಮೂಲಕ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. 2014ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡ ನಂತರ ಒಂದೆರಡು ವರ್ಷ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದ ರಮ್ಯಾ ಮಂಡ್ಯದಲ್ಲಿ ಮಾಡಿದ್ದ ಬಾಡಿಗೆ ಮನೆಯನ್ನೂ ಖಾಲಿ ಮಾಡಿದ್ದರು. 

ಆ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಿದ್ದರಿಂದ ಮಂಡ್ಯದಲ್ಲಿ ಉಪ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಲೆಕ್ಕಾಚಾರದಲ್ಲಿ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದರಿಂದ ರಮ್ಯಾ ವಾಪಸ್‌ ಬರಲು ಅವಕಾಶವೇ ಇಲ್ಲದಂತಾಗಿತ್ತು. ವರ್ಷದ ನಂತರ ರಾಹುಲ್‌ ಕಾರ್ಯಮದಲ್ಲಿ ವರು ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next