Advertisement

ಮತ್ತೆ ಕಾಣಲಿಲ್ಲ ರಾಮು ಕಾಕಾ

03:45 AM Jun 28, 2017 | Harsha Rao |

ಕನಸುಗಳಲ್ಲಿ ನಾನು ನೀಟಾಗಿ ಡ್ರೆಸ್‌ ಮಾಡಿಕೊಂಡು ಆಫೀಸಿಗೆ ಹೋಗಿ ಮನೆಗೆ ಬರುತ್ತಿದ್ದಂತೆಯೇ, ರಾಮು ಕಾಕಾ ನನ್ನ ಕೈಯಲ್ಲಿನ ಪರ್ಸ್‌ ತೆಗೆದುಕೊಂಡು ಫ್ಯಾನ್‌ ಆನ್‌ ಮಾಡಿ ಕಾಫಿ ಕಪ್‌ ತಂದು ಕೊಡುವ ದೃಶ್ಯ ಪ್ರಸಾರವಾಗುತ್ತಿತ್ತು…

Advertisement

ಸಾರಿಗೆ ಒಗ್ಗರಣೆ ಹಾಕಿ, ಒಂದಿಷ್ಟು ಗಟ್ಟಿ ಸಾರನ್ನು ಹೋಳುಗಳ ಸಮೇತ ಬೇರೊಂದು ಪಾತ್ರೆಯಲ್ಲಿ ತೆಗೆದಿಟ್ಟು, ಉಳಿದ ಸಾರಿಗೆ ಕೊಂಚ ನೀರು ಬೆರೆಸಿ, ತೆಗೆದಿಟ್ಟ ಸಾರಿಗೂ ಈ ಸಾರಿಗೂ ಸಂಬಂಧವಿಲ್ಲದಂತೆ ಮಾಡಿದ ಚಿಕ್ಕಮ್ಮನಿಗೆ ಕೇಳಿದೆ… 

“ಯಾರಿಗೇ ಚಿಕ್ಕಮ್ಮ ಆ ಗಟ್ಟಿ ಸಾರು?’
 “ಇನ್ಯಾರಿಗೆ? ನಿನ್‌ ಚಿಕ್ಕಪ್ಪನಿಗೆ’
“ಅವರಿಗೆ ಮಾತ್ರ ಯಾಕೆ ಗಟ್ಟಿ ಸಾರು?’
“ಸಂಪಾದನೆ ಮಾಡಿ ತಂದು ಹಾಕೋರಿಗೆ ಹೀಗೇನೆ…ಅರ್ಥ ಮಾಡಿಕೋ..’
ಅರ್ಥಮಾಡಿಕೊಂಡೆ.

ನನಗೆ ಆಗ 8- 9 ವರ್ಷವೇನೋ… ಗೊಂಬೆಯೊಂದನ್ನು ನೋಡಿ¨ªೆ… ಮಲಗಿಸಿದರೆ ಕಣ್ಣು ಮುಚ್ಚುವ, ಎತ್ತಿಕೊಂಡಾಗ ಕಣ್ಣು ತೆರೆಯುವ ಗೊಂಬೆ. ತುಂಬಾ ಇಷ್ಟವಾಗಿತ್ತು.

“ಅಮ್ಮಾ ಕೊಡಿಸೇ…’
“ಅರ್ಥ ಮಾಡಿಕೋ. ನಾವು ಶ್ರೀಮಂತರಲ್ಲ. ಚೆನ್ನಾಗಿ ಓದು, ಕೆಲಸಕ್ಕೆ ಸೇರು. ಆಮೇಲೆ ಏನ್ಬೇಕಾದ್ರೂ ತಗೋ.’
“ಆಗ ದೊಡªವಳಾಗಿರ್ತೀನಲ್ಲ?’
“ಇಷ್ಟಪಟ್ಟಿದ್ದು ಯಾವಾಗ ಸಿಕ್ಕಿದ್ರೂ ಖುಷಿನೇ… ನೆನಪಿಟ್ಕೊàಬೇಕು ಅಷ್ಟೇ.’
ಈ ಮಾತುಗಳನ್ನು ಮರೆಯಲಿಲ್ಲ ನಾನು..

Advertisement

ಶಾಲೆಯ ಮುಖ ನೋಡದ ಅಮ್ಮ, ತನ್ನ ಹನ್ನೆರಡನೇ ವಯಸ್ಸಿನಲ್ಲಿ 35ರ ಅಪ್ಪನನ್ನು ಮದುವೆಯಾಗಿದ್ದಳು. ಸೋಂಬೇರಿ ಅಪ್ಪ ಯಾವತ್ತೋ ಮುಗಿದುಹೋದ ಶ್ರೀಮಂತಿಕೆಯ ನೆನಪಲ್ಲಿ ಮನೆ ಮಕ್ಕಳ ಜವಾಬ್ದಾರಿಯನ್ನು ಅಮ್ಮನ ಕೊರಳಿಗೆ ಹಾಕಿ ಗ್ರೂಪ್‌ ಫೋಟೋಗೆ ಬೇಕಾದಾಗ ಸಿಗುತ್ತಿದ್ದ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಎಮ್ಮೆಗಳು ನಮ್ಮ ಬದುಕಿನ ಬಂಡಿಯನ್ನು ಅಮ್ಮನೊಂದಿಗೆ ಕಷ್ಟಪಟ್ಟು ಎಳೆಯುತಿತ್ತು. ಸುಂದರಿಯರಾದ ಇಬ್ಬರೂ ಅಕ್ಕಂದಿರು. ಖರ್ಚಿಲ್ಲದೆ ಶ್ರೀಮಂತ ವರನೊಂದಿಗೆ ಮದುವೆಯಾಗಿ ಊರಿಗೇ ಹೊಟ್ಟೆ ಉರಿಸಿದ್ರು ಅಂತ ಅಮ್ಮ ಹೇಳುತ್ತಿದ್ದುದನ್ನು ಲೆಕ್ಕವಿಲ್ಲದಷ್ಟು ಬಾರಿ ಕೇಳಿದ್ದೇನೆ.

ಶ್ರೀಮಂತರನ್ನು ಮದುವೆಯಾದರೂ ಪ್ರತಿಯೊಂದಕ್ಕೂ ಗಂಡನ ಅನುಮತಿಯಿಲ್ಲದೆ ಒಂದು ರುಪಾಯಿ ಸಹ ಖರ್ಚು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ. ಛೆ!
* * *
ಅಮ್ಮನಿಗೆ ಸಿನಿಮಾ ನೋಡುವ ಹುಚ್ಚು. ಯಾವ ಭಾಷೆಯದಾದ್ರು ಆಗುತ್ತಿತ್ತು. ಮದುವೆಯಾಗುವ ತನಕ ಸಿನಿಮಾ ನೋಡಿರ್ಲಿಲ್ವಂತೆ. ಮದ್ವೆಯಾದ ಮೇಲೆ ಏನ್‌ ಬೇಕಾದರೂ ಮಾಡು ಅಂದಿದ್ರಂತೆ ತಾತ.
ಥಿಯೇಟರ್‌ನಲ್ಲಿ ಹೆಂಗಸರ ಗೇಟಲ್ಲಿ ಟಿಕೆಟ್ಟು ಹರಿಯುವ ಪಾರ್ವತಕ್ಕ ನಮ್ಮಲ್ಲಿ ಹಾಲು ತೆಗೆದುಕೊಳ್ಳುತಿದ್ರು. ನಮಗೆÇÉಾ ಟಿಕೇಟು ತೆಗೆದುಕೊಂಡ ನೆನಪಿಲ್ಲ. ಅರ್ಥವಾಗದ ಹಿಂದಿ, ತಮಿಳು ಸಿನಿಮಾಗಳನ್ನು ನಾನು ಚಿಕ್ಕವಳಿ¨ªಾಗಲೇ ನೋಡಿದ್ದು.

70- 80ರ ದಶಕದಲ್ಲಿ ಹಿಂದಿ ಸಿನಿಮಾದಲ್ಲಿ ರಾಮು ಕಾಕಾ ಇರ್ತಿದ್ದ. ಮನೆಗೆ ದಿನಸಿ, ತರಕಾರಿ ತರೋದು, ಅಡುಗೆ ಮಾಡುವುದರಿಂದ ಹಿಡಿದು ಸೋಫಾವನ್ನು ಹೆಗಲ ಮೇಲಿದ್ದ ಟವೆಲ…ನಿಂದಲೇ ಕ್ಲೀನ್‌ ಮಾಡುತ್ತಿದ್ದವ ರಾಮೂ ಕಾಕಾ. ಆತ ಮನೆಯವರ ನೋವಲ್ಲಿ ಭಾಗಿಯಾಗುವಾತ. ಈ ಹಿಂದಿ ಸಿನಿಮಾದಿಂದಾಗಿ ನೆನಪಲ್ಲಿ ಉಳಿದುಕೊಂಡ!
“ಅಮ್ಮಾ… ನಮ… ಮನೇಗೂ ರಾಮು ಕಾಕನ್ನ ತರೋಣೆÌ?’ ಅಂತಿ¨ªೆ.

ಆಗೆಲ್ಲ ನನ್ನ ಕನಸುಗಳಲ್ಲಿ ನೀಟಾಗಿ ಡ್ರೆಸ್‌ ಮಾಡಿಕೊಂಡು ಆಫೀಸಿಗೆ ಹೋಗಿ ಮನೆಗೆ ಬರುತ್ತಿದ್ದಂತೆಯೇ, ರಾಮು ಕಾಕಾ ನನ್ನ ಕೈಯಲ್ಲಿನ ಪರ್ಸ್‌ ತೆಗೆದುಕೊಂಡು ಫ್ಯಾನ್‌ ಆನ್‌ ಮಾಡಿ ಕಾಫಿ ಕಪ್‌ ತಂದು ಕೊಡುವ ದೃಶ್ಯ…

ಇಬ್ಬರು ಅಕ್ಕಂದಿರ ರೂಪ ನನಗಿರಲಿಲ್ಲ ಅಂತ ಎಲ್ರೂ ಹೇಳ್ತಿದ್ರು. ಅಮ್ಮನಂತೆ ಕುಳ್ಳು ಒಂದು ಬಿಟ್ಟರೆ ಅಪ್ಪನಿಗಿದ್ದ ಉದ್ದನೆಯ ಮೂಗಾಗಲಿ ಅಮ್ಮನ ಬಣ್ಣವಾಗಲಿ ಸಾಸಿವೆಯಷ್ಟೂ ಬರಲಿಲ್ಲ. ಅಪ್ಪನ ತಂಗಿಯ ಹೋಲಿಕೆ ನನ್ನಲ್ಲಿತ್ತಂತೆ. ಅವಳನ್ನು ನೋಡಿದರೆ ಬಾಯಲ್ಲಿ ಅಡಕೆ ಹಾಕ್ಕೊಬೇಕು ಅಂತ ಅಮ್ಮ ಹೇಳಿದ್ದರ ಅರ್ಥ ನಂಗೆ ಲೇಟಾಗಿ ಅರ್ಥವಾದದ್ದು.
ಆದರೆ ನನ್ನ ಬಳಿಯಿದ್ದ ಮಾತಾಡೋ ಕನ್ನಡಿಯಲ್ಲಿ ನಾನು ಬೇರೆಯೇ… “ಅಬ್ಟಾ! ಎಂಥಾ ಚೆಂದ!! ನೀನು ಸುಂದರಿ… ಕೆಲಸವೊಂದು ಬೇಕು ನಿಂಗೆ. ಅಷ್ಟೇ.’

“ಕಂಡಕ್ಟರ್‌ ಟಿಕೆಟ್‌ ಅಂತ ಬಂದಾಗ ಹಿಂದಕ್ಕೆ ಕೈ ತೋರಿಸದೆ ನಿನ್ನ ಟಿಕೆಟನ್ನ ನೀನೇ ತಗೋಬೇಕು. ರಾಣಿಯಾಗಬೇಕು. ಅಕ್ಕಂದಿರಂತೆ, ರಾಜನ ಹೆಂಡತಿ ರಾಣಿ ಅಲ್ಲ. ನಿನಗೆ ಬೇಕಾದುದನ್ನು, ಇಷ್ಟವಾದುದನ್ನು ಬೆಲೆ ನೋಡದೆ ತೆಗೆದುಕೊಳ್ಳುವಂತಾಗಬೇಕು. ಖಡ್ಗ ಹಿಡಿದು ನಿನ್ನ ರಾಜ್ಯವನ್ನು ನೀನೆ ಸೃಷ್ಟಿ ಮಾಡ್ಕೊàಬೇಕು…’
ನಂತರದ ಒಂದಷ್ಟು ವರ್ಷಗಳು ನಾನು ಓಡಿದ್ದೇ ಓಡಿದ್ದು. ಪಟ್ಟಿ ಮಾಡುತ್ತಿ¨ªೆ, ಒಂದಷ್ಟು ವರ್ಷಗಳ ನಂತರ ಮಾಡಬೇಕಾದ, ತೆಗೆದುಕೊಳ್ಳಬೇಕಾದ ವಸ್ತುಗಳ ದೊಡ್ಡ ಲಿÓr….
* * *
ಅಮ್ಮ ಬದಲಾಗಿದ್ದರು. “ಯಾವ್ಯಾವ  ವಯಸ್ಸಿಗೆ  ಏನೇನಾಗಬೇಕೋ, ಅದಾದ್ರೆನೇ ಚೆಂದ ಕಣೆ…’
ಬೆÓr… ಇಯರ್ ಅಂತ ಏನ್‌ ಕರೀತಾರೆ, ಅದು ಹೋದದ್ದೇ ತಿಳಿಯಲಿಲ್ಲ. ಅದೊಂದು ದಿನ ಕೋಮಾದಲ್ಲಿದ್ದವರಿಗೆ ಎಚ್ಚರವಾದ ಹಾಗೆ ನನಗೂ ಎಚ್ಚರ ಆಯ್ತು. ನೋಡುತ್ತೇನೆ: ಅರೆ!! ಸುತ್ತಲಿನ ಪ್ರಪಂಚ ಬದಲಾಗಿದೆ.
ಲಿÓr… ನೋಡಿದೆ… ರಾಶಿ ರಾಶಿ ಗೊಂಬೆಗಳನ್ನು ತಗೊಂಡೆ.

ಹೌದು… ನಿಜವಾಗಿ ಇಷ್ಟಪಟ್ಟಿದ್ದು ಯಾವಾಗ ಸಿಕ್ಕಿದ್ರೂ ಖುಷೀನೇ. ಗೊಂಬೆ ಎದೆಗೊತ್ತಿಕೊಂಡಾಗ ಅದೆಷ್ಟು ಖುಷಿ! ಏನೂ ಮಿಸ್‌ ಆಗಲೇ ಇಲ್ಲ. ಐಷಾರಾಮಿ ಕಾರು, ಮನೆ ಬೇಕಾಗಿದ್ದೆಲ್ಲವೂ…

ಚಿಕ್ಕಮ್ಮನ ಮನೆಗೆ ಹೋದೆ. ಮಣೆ ಮೇಲೆ ಕೂರಿಸಿ ಪಕ್ಕದÇÉೇ ಕುಳಿತು ಗಟ್ಟಿ ಸಾರು ಬಡಿಸಿದರು ಅಮ್ಮ ಇದ್ದಿದ್ದರೆ ಅದೆಷ್ಟು ಖುಷಿ ಪಡ್ತಿದ್ರು ಅಂತ ಕಣ್ಣು ಒ¨ªೆ ಮಾಡಿಕೊಂಡರು. 

ಮುಖೇಶನ ಹಾಡಿನಲ್ಲಿದ್ದ ನೋವು, ಪ್ರೇಮದಲ್ಲಿನ ಖುಷಿಯನ್ನು ಅರ್ಥ ಮಾಡಿಸಿತು…
ತಡವಾದರೂ ಪ್ರೀತಿ ಹುಟ್ಟೇ ಬಿಟ್ಟಿತು. ನನ್ನ ಪಟ್ಟಿಯಲ್ಲಿ ಇಲ್ಲದಿದ್ದುದು ಸಿಗುವುದಾದರೂ ಹೇಗೆ? 
ಮತ್ತೆ ಕನ್ನಡಿ ನೋಡಿದೆ. ನೋ ಡೌಟ್‌. ನೀನು ಸುಂದರೀನೆ. ಬದುಕಲ್ಲಿ ಒಮ್ಮೆ ಬರಬಹುದಾದ ಪ್ರೇಮ ಬಂತÇÉಾ. ಆ ಸುಂದರ ಭಾವನೆಗಳು… ಜೊತೆಗೆ ಗಾಢ ನೋವಿನ ಪರಿಚಯ. ಎಲ್ಲರೊಂದಿಗೂ ಆಗುವಂಥದ್ದು! ಏನೂ ಮಿಸ್‌ ಆಗ್ಲಿಲ್ಲ… ಕನ್ನಡಿ ಮಾತಾಡಿದಂತಾಯಿತು.

ಮನಸ್ಸು ಒಳಗೇ ಪಿಸುಗುಟ್ಟಿತು: ಮಿಸ್‌ ಆಗಿದ್ದು ರಾಮು ಕಾಕಾ ಮಾತ್ರ… 

– ವಿಜಯಕ್ಕಾ ಅಜ್ಜಿಮನ

Advertisement

Udayavani is now on Telegram. Click here to join our channel and stay updated with the latest news.

Next