Advertisement

ರಮೀಜ್‌ ರಾಜ ಪಾಕ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ

09:52 PM Sep 13, 2021 | Team Udayavani |

ಲಾಹೋರ್‌: ಮಾಜಿ ಕ್ರಿಕೆಟಿಗ ರಮೀಜ್‌ ರಾಜ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

Advertisement

ಕಳೆದ ತಿಂಗಳು ಈ ಹುದ್ದೆಯಿಂದ ಇಳಿದ ಎಹಸಾನ್‌ ಮಣಿ ಅವರ ಉತ್ತರಾಧಿಕಾರಿಯಾಗಿರುವ ರಾಜ, ಮುಂದಿನ 3 ವರ್ಷಗಳ ಕಾಲ ಈ ಹುದ್ದೆಯಲ್ಲಿರಲಿದ್ದಾರೆ. ರಮೀಜ್‌ ರಾಜ ಹೆಸರನ್ನು ಈ ಹುದ್ದೆಗೆ ಸೂಚಿಸಿದವರು ಪ್ರಧಾನಿ ಇಮ್ರಾನ್‌ ಖಾನ್‌. ಮಾಜಿ ಕ್ರಿಕೆಟಿಗನಾಗಿರುವ ಇಮ್ರಾನ್‌, ಪಿಸಿಬಿಯ ಮಹಾಪೋಷಕರೂ ಆಗಿದ್ದಾರೆ.

ಇದು ಪಿಸಿಬಿಯೊಂದಿಗೆ ರಮೀಜ್‌ ರಾಜ ಅವರ ದ್ವಿತೀಯ ಅವಧಿಯ ನಂಟು. 2003-04ರಲ್ಲಿ ಅವರು ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು. ಪಾಕ್‌ ಪರ 250ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿರುವ ರಾಜ, 8,674 ರನ್‌ ಪೇರಿಸಿದ್ದಾರೆ. ರಮೀಜ್‌ ರಾಜ ಪಿಸಿಬಿಯ ಅಧ್ಯಕ್ಷರಾದ 4ನೇ ಮಾಜಿ ಕ್ರಿಕೆಟಿಗ. ಅಬ್ದುಲ್‌ ಹಫೀಜ್‌ ಕರ್ದಾರ್‌ (1972-1977), ಜಾವೇದ್‌ ಬುರ್ಕಿ (1994-1995) ಮತ್ತು ಇಜಾನ್‌ ಬಟ್‌ (2008-2011) ಉಳಿದ ಮೂವರು.

Advertisement

Udayavani is now on Telegram. Click here to join our channel and stay updated with the latest news.

Next