Advertisement

ಮುಂದಿನ ವರ್ಷಾಂತ್ಯಕ್ಕೆ ಸಿದ್ಧಗೊಳ್ಳಲಿದೆ ಹೊಸ ಪಾಂಬನ್‌ ಸೇತುವೆ

12:11 PM Oct 12, 2020 | Nagendra Trasi |

ಚೆನ್ನೈ: ತಮಿಳುನಾಡಿನ ರಾಮೇಶ್ವರಕ್ಕೆ2021ರ ಡಿಸೆಂಬರ್‌ ಅಂತ್ಯಕ್ಕೆ ಹೊಸ ರೈಲು ಸೇತುವೆ ಸಿದ್ಧವಾಗಲಿದೆ.100 ವರ್ಷ ಪೂರೈಸಿರುವ ಹಳೆಯ ಸೇತುವೆಯ ಸಮಾನಾಂತರದಲ್ಲಿಯೇ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಸದ್ಯ ಬಳಕೆಯಾಗುತ್ತಿರುವ ಸೇತುವೆ ದೇಶದ ಮೊದಲ ಸಮುದ್ರ ಸೇತುವೆಯಾಗಿದ್ದು, 1914ರಲ್ಲಿ ನಿರ್ಮಾಣಗೊಂಡಿದೆ.

Advertisement

2010ರಲ್ಲಿ ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್‌ ನಿರ್ಮಾಣವಾಯಿತು. ಅದು ದೇಶದ2ನೇ ಸಮುದ್ರ ಸೇತುವೆ.

ಲಾಭವೇನು?
*ರಾಮೇಶ್ವರ, ಧನುಷ್ಕೋಡಿಯಲ್ಲಿರುವ ತೀರ್ಥ ಕ್ಷೇತ್ರಗಳಿಗೆ ವರ್ಷವಿಡೀ ಭೇಟಿ ನೀಡಲು ಅವಕಾಶ

*ಸ್ಥಳೀಯವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವು

ಏನು ಹೆಗ್ಗಳಿಕೆ?
ದೇಶದಲ್ಲಿಯೇ ಇದು ಲಂಬಾ ಕೃತಿಯಲ್ಲಿ ರಚನೆಯಾಗುತ್ತಿರುವ ಮೊದಲ ಸೇತುವೆ.

Advertisement

ಈಗಿನ ವ್ಯವಸ್ಥೆ ಏನು?
ಹಡಗು, ನೌಕೆಗಳು ಸಂಚರಿಸುವಾಗ ಸೇತುವೆ ಎರಡು ಭಾಗವಾಗಿ ತೆರೆದುಕೊಳ್ಳುತ್ತದೆ.

ಹೊಸ ವ್ಯವಸ್ಥೆ ಏನು?
ಒಂದೇ ಸೇತುವೆ ಹಡಗುಗಳು ಬರುವಾಗ ಯಾಂತ್ರೀಕೃತವಾಗಿ ಮೇಲಕ್ಕೆ ಚಲಿಸಲಿದೆ.

*280 ಕೋಟಿ ರೂ. ಒಟ್ಟು ವೆಚ್ಚ
*2.7 ಕಿಮೀ- ಸೇತುವೆಯ ಉದ್ದ
*41ಅಡಿ ಸಮುದ್ರ ಮಟ್ಟದಿಂದ ಇರುವ ಎತ್ತರ

Advertisement

Udayavani is now on Telegram. Click here to join our channel and stay updated with the latest news.

Next