Advertisement

ಹೊಸ ಚಿತ್ರಕ್ಕೆ ರಮೇಶ್ ರೆಡಿ

11:01 AM Jun 20, 2019 | Lakshmi GovindaRaj |

ರಮೇಶ್‌ ಅರವಿಂದ್‌ ಸದ್ದಿಲ್ಲದೇ ಸಿನಿಮಾ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಸದ್ಯ ಅವರು ನಟಿಸುತ್ತಿರುವ “ಶಿವಾಜಿ ಸುರತ್ಕಲ್‌’ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಈಗ ಅವರ ನಿರ್ದೇಶನದ ಸಿನಿಮಾಕ್ಕೆ ಅಣಿಯಾಗಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರಕ್ಕೆ ಇಂದು ಮುಹೂರ್ತ ನಡೆಯಲಿದ್ದು, ಚಿತ್ರಕ್ಕೆ “ಹಂಡ್ರೆಡ್‌’ ಎಂದು ಹೆಸರಿಡಲಾಗಿದೆ.

Advertisement

ಈ ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿದ್ದು, ಈ ಹಿಂದೆ “ಪಡ್ಡೆಹುಲಿ’ ಚಿತ್ರ ನಿರ್ಮಿಸಿದ ರಮೇಶ್‌ ರೆಡ್ಡಿ ಈ ಚಿತ್ರದ ನಿರ್ಮಾಪಕರು. ಇನ್ನು, “ಶಿವಾಜಿ ಸುರತ್ಕಲ್‌’ ಚಿತ್ರವನ್ನು ಆಕಾಶ್‌ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದು, ಮಡಿಕೇರಿ ಬಳಿಯ ಶುಂಠಿಕೊಪ್ಪ, ಮೈಸೂರು, ಬೆಂಗಳೂರಿನಲ್ಲಿ ಸುಮಾರು 40ದಿನಗಳ ಚಿತ್ರೀಕರಣ ನಡೆದಿದೆ.

ಗುರುಪ್ರಸಾದ್‌ ಅವರ ಛಾಯಾಗ್ರಹಣರುವ ಈ ಚಿತ್ರಕ್ಕೆ ಜೂಡಾಸ್ಯಾಂಡಿ ಅವರ ಸಂಗೀತ ನಿರ್ದೇಶನದೆ. ಜಯಂತ ಕಾಯ್ಕಿಣಿ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಶ್ರೀಕಾಂತ್‌ ಅವರ ಸಂಕಲನ ಈ ಚಿತ್ರಕ್ಕಿದೆ. ರಮೇಶ್‌ ಅರಂದ್‌, ರಾಧಿಕಾ ನಾರಾಯಣ್‌, ಆರೋಹಿ ನಾರಾಯಣ್‌, ರೋಹಿತ್‌ ಭಾನುಪ್ರಕಾಶ್‌, ಅನಾಶ್‌, ರಮೇಶ್‌ ಪಂಡಿತ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇನ್ನು, ರಮೇಶ್‌ ಅರವಿಂದ್‌ ನಿರ್ದೇಶನದ “ಬಟರ್‌ಫ್ಲೈ’ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next