Advertisement

ಉಪಚುನಾವಣೆಗೆ ಟಿಕೆಟ್‌ ಕೊಟ್ಟರೆ ಸ್ಪರ್ಧಿಸಲು ಸಿದ್ಧ: ರಮೇಶ ಕತ್ತಿ

06:20 PM Feb 09, 2021 | Team Udayavani |

ಪಾಲಬಾವಿ: ಬಿಜೆಪಿ ಹೈಕಮಾಂಡ್‌ ನನಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಿದರೆ ಸ್ಪರ್ಧಿಸಲು  ರೆಡಿ ಎಂದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಹೇಳಿದ್ದಾರೆ.

Advertisement

ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಪಿಕೆಪಿಎಸ್‌ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ  ಅವರು, ಬರುವ ಎಂ.ಪಿ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ದಿ. ಸುರೆಶ ಅಂಗಡಿಯವರ ಕುಟುಂಬದವರಿಗೆ ಮೊದಲ ಆದ್ಯತೆ ನೀಡಬೇಕು. ಹೊರಗಿನವರಿಗೆ ಟಿಕೆಟ್‌ ನೀಡುವ ಹಿರಿಯರ ಲೆಕ್ಕಾಚಾರ  ಇದ್ದರೆ ನನಗೆ ಕೊಡಿರಿ. 2019ರ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಟಿಕೆಟ್‌ ವಂಚಿತನಾಗಿದ್ದೇನೆ.  ರಾಜ್ಯಸಭೆಯ ಟಿಕೆಟ್‌ ಕೊಡುತ್ತೇವೆ ಎಂದಿದ್ದರು. ಯಾವ ಕಾರಣಕ್ಕೆ ಟಿಕೆಟ್‌ ಕೊಡಲಿಲ್ಲ ಎಂಬುದು ಇನ್ನೂ ತಿಳಿದಿಲ್ಲ. ಪಕ್ಷದ ನಿಷ್ಠಾವಂತರಾದ ಈರಣ್ಣ ಕಡಾಡಿ ಅವರಿಗೆ ಟಿಕೆಟ್‌ ನೀಡಿ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದು ಸಂತೋಷದ ವಿಷಯ ಎಂದರು.

ಚಿಕ್ಕೋಡಿ ಲೋಕಸಭಾ ಸಂಸದನಾಗಿ, ಬಿಡಿಸಿಸಿ ಅಧ್ಯಕ್ಷನಾಗಿ ಜಿಲ್ಲೆಯನ್ನು ಬಲ್ಲವನಾಗಿದ್ದೇನೆ. ನಮ್ಮ  ಹಿಂದಿನ ಕೆಲಸವನ್ನು ಗಮನಿಸಿ ನನಗೆ ಬೆಳಗಾವಿ ಕ್ಷೇತ್ರದ ಎಂ.ಪಿ.ಟಿಕೆಟ್‌ ನೀಡಿದರೆ ಚುನಾವಣೆಗೆ ಸ್ಪ ರ್ಧಿಸುವೆ ಎಂದರು.

ಇದನ್ನೂ ಓದಿ :ಸಮಸ್ಯೆಗಳ ಪರಿಹಾರಕ್ಕೆ  ಶೀಘ್ರ ಸ್ಪಂದನೆ  

ಸಂಘದ ಅಧ್ಯಕ್ಷ ಗುರುಪಾದ ಮರಡಿ, ಉಪಾಧ್ಯಕ್ಷ ನಿಂಗಪ್ಪ ಸಪ್ತಸಾಗರ ಸನ್ಮಾನಿಸಿದರು. ಚಂದ್ರಯ್ಯ ಹಿರೇಮಠ, ಮಾರುತಿ ಗೋಡಿ, ರಮೇಶ ಕರೋಶಿ, ರಾಜು ಮಾದರ, ಬರಮಪ್ಪ ತಳವಾರ, ಅಣ್ಣಾಸಾಬಗೌಡ ಪಾಟೀಲ, ಗಿರೆಪ್ಪ ಬಳಗಾರ, ಶಿವಾನಂದ ತೇಗೂರ, ಶ್ರೀಶೈಲ ಮರಡಿ, ಸಂಜು ತೇಗೂರ, ಮುಖ್ಯ  ಕಾರ್ಯನಿರ್ವಾಹಕ ಸಿದ್ದಪ್ಪ ಗುಗ್ಗರಿ, ಲಕ್ಷ್ಮಣ ರಾಗಿ, ಮಹಾದೇವ ಮರಡಿ, ರೆಹಮಾನ್‌ ಮಿರ್ಜಿ, ಭೀಮಶಿ ತೇಗೂರ, ಶಿವಾನಂದ ಕಾಡಶೆಟ್ಟಿ, ಪರಪ್ಪ ಗೋಡಿ, ಬಸಪ್ಪ  ತೇಗೂರ, ಇಲಾಹಿ ಕಾಗವಾಡ, ರಾಮಪ್ಪ ಕಾಡಶೆಟ್ಟಿ, ಬರಮಪ್ಪ ನಿಂಗನೂರ, ಗಿರೇಪ್ಪ ತೇಗೂರ, ಬರಮಪ್ಪ ಮಾನಶೆಟ್ಟಿ, ಪ್ರಕಾಶ ಪಾಟೀಲ, ಶ್ರೀಶೈಲ ಗೋಡಿ, ಹನುಮಂತ ಚಿಕ್ಕೋಡಿ, ಈರಪ್ಪ ಕಾಪಶಿ, ಅಬ್ಟಾಸ ಬಿರಾದಾರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next