Advertisement
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರಿಗೆ 60 ಎಕರೆ ಜಮೀನು ಹಂಚಿಕೆ ಆಗಿರುವ ಆರೋಪದ ಬಗ್ಗೆ ಶಿವಮೊಗ್ಗ ನಾಯಕರು ಮತನಾಡುತ್ತಾರೆ ಎಂದರು.
Related Articles
Advertisement
ಕಾಂಗ್ರೆಸನ ಭ್ರಷ್ಟಾಚಾರದ ಚಾಳಿ ಸಿದ್ದರಾಮಯ್ಯ ಸರ್ಕಾರದಲ್ಲೂ ಮುಂದುವರೆದಿದೆ. ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರು ಒಂದೂ ಅಭಿವೃದ್ಧಿ ಕೆಲಸ ಆಗಿಲ್ಲ. ಗ್ಯಾರಂಟಿ ಹೆಸರಿನಲ್ಲಿ ದಲಿತರ ಹಣ ನುಂಗಿ ಕುಳಿತಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ನಡೆದಂತೆ ಈ ವರೆಗೂ ದೇಶದಲ್ಲಿ ಇಂತಹ ಹಗರಣ ನಡೆದಿರಲಿಲ್ಲ. ಪ್ರತಿ ವರ್ಷ ಸಂಸದನಾಗಿ ನನಗೂ ಬರುತ್ತಿದ್ದ ವಾರ್ಷಿಕ 5 ಕೋಟಿ ರೂ. ಎಸ್ಸಿಪಿ ಅನುದಾನ ಬಂದಿಲ್ಲ.
ಮುಖ್ಯಮಂತ್ರಿ ಸಿದ್ಧರಾಮಯ್ಯ ದಲಿತರ ಅಭಿವೃದ್ಧಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದು ಖಂಡನೀಯ. ಎಸ್ಸಿ ಸಮುದಾಯದ 32 ಕೋಟಿ, ಎಸ್ಟಿ ಸಮುದಾಯದ 13-14 ಕೋಟಿ ಹಣವನ್ನು ಸರ್ಕಾರ ಬೇರೆ ಕೆಲಸಕ್ಕೆ ಬಳಸಿಕೊಂಡಿದೆ ಎಂದು ಹರಿಹಾಯ್ದರು.
ಹಿಂದೆಂದೂ ಯಾವ ಸರ್ಕಾರಗಳೂ ದಲಿತರ ಹಣವನ್ನ ಇತರೆ ಕೆಲಸಕ್ಕೆ ಪಡೆದಿರಲಿಲ್ಲ. ನಿಮಗೇನು ಧಾಡಿಯಾಗಿದೆ, ನಿಮಗೆ ದಲಿತರ ಹಣವೇ ಬೇಕಿತ್ತಾ. ಬೇರೆ ಬೇರೆ ಇಲಾಖೆಯಲ್ಲಿ ಸಾಕಷ್ಟು ಹಣವಿದ್ದು, ಅದನ್ನೇಕೆ ಮುಟ್ಟಲಿಲ್ಲ ಎಂದು ಪ್ರಶ್ನಿಸಿದ ಜಿಗಜಿಣಗಿ, ಈ ಬಗ್ಗೆ ಸಚಿವ ಮಹಾದೇವಪ್ಪ ಪ್ರತಿಭಟನೆ ಮಾಡಬೇಕು ಎಂದು ಆಗ್ರಹಿಸಿದರು.
ಜನತಾ ಪರಿವಾರದ ಸರ್ಕಾರ ಅಧಿಕಾರದಲ್ಲಿ ದಲಿತರಿಗೆ ಅನ್ಯಾಯವಾದಾಗ ಸಚಿವನಾಗಿದ್ದ ನಾನು ಸಚಿವ ಸ್ಥಾನಕ್ಕ ರಾಜಿನಾಮೆ ನೀಡಲು ಮುಂದಾಗಿದ್ದೆ. ಮುಖ್ಯಮಂತ್ರಿ ಆಗಿದ್ದ ಜೆ.ಎಚ್. ಪಟೇಲ ಅವರೇ ತಡೆದು, ನ್ಯಾಯ ನೀಡಿದ್ದರು. ಈಗ ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡಿರುವ ಅನುದಾನವನ್ನು ಸರ್ಕಾರ ಅನ್ಯ ಕೆಲಸಕ್ಕೆ ಬಳಸಿಕೊಂಡು ಅನ್ಯಾಯ ಮಾಡಿದ್ದು, ಸಚಿವ ಮಹಾದೇಪ್ಪ ಆಕ್ಷೇಪಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Udupi Rain: ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ: ಸಚಿವೆ ಹೆಬ್ಬಾಳ್ಕರ್