Advertisement

ಕುತುಹಲ ಮೂಡಿಸಿದ ಯತ್ನಾಳ, ಜಾರಕಿಹೊಳಿ ರಹಸ್ಯ ಭೇಟಿ

08:13 PM Nov 14, 2021 | Team Udayavani |

ವಿಜಯಪುರ : ಆರೋಪ ಒಂದರಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ಬಂಡುಕೋರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರಸ್ಪರ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

Advertisement

ಭಾನುವಾರ ಮಧ್ಯಾಹ್ನ ಮಹಾರಾಷ್ಟ್ರದ ಸಾಂಗಲಿ ನಗರದಿಂದ ನೆರವಾಗಿ ವಿಜಯಪುಕ್ಕೆ ಆಗಮಿಸಿದ್ದ ರಮೇಶ ಜಾರಕಿಹೊಳಿ, ನಗರದ ಹೊರ ವಲಯದಲ್ಲಿ ಇರುವ ಯತ್ನಾಳ ಅವರ ತೋಟದ ಮನೆಯಲ್ಲಿ ಗಂಟೆಗೂ ಹೆಚ್ಚುಕಾಲ ಜಾರಕಿಹೊಳಿ-ಯತ್ನಾಳ ಇಬ್ಬರೇ ರಹಸ್ಯ ಮಾತುಕತೆ ನಡೆಸಿದರು.

ಈ ಇಬ್ಬರೂ ಶಾಸಕರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ರಾಜಕೀಯ ಕುತೂಹಲ ಕೆರಳಿಸಿದೆ.

ಜಾರಕಿಹೊಳಿ- ಯತ್ನಾಳ ಭೇಟಿ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಸುಧೀರ್ಘ ಚರ್ಚೆ ನಡೆಸಿದರೆ. ಉಭಯ ನಾಯಕರಿಗೆ ಸಚಿವ ಸ್ಥಾನ ಬೇಡಿಕೆ, ಬಿಟ್ ಕಾಯಿನ್ ವಿಚಾರ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಬಿಟ್‌ ಕಾಯಿನ್‌ ವಿಚಾರದಲ್ಲಿ ಮೂಲ ಬಿಜೆಪಿ ಸಚಿವರು, ನಾಯಕರ ಮೌನ: ಸಿಎಂ ಬೇಸರ

Advertisement

ಯತ್ನಾಳ ಭೇಟಿಯ ಬಳಿಕ ರಮೇಶ ಜಾರಕಿಹೊಳಿ ಬೆಳಗಾವಿಗೆ ತೆರಳಿದರೆ, ಯತ್ನಾಳ ಸಿಂದಗಿ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ನೂತನ ಬಿಜಪಿ ಶಾಸಕ ರಮೇಶ ಭೂಸನೂರ ಅವರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾಗಿಯಾಗಲು ಸಿಂದಗಿ ಪಟ್ಟಣದತ್ತ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next