Advertisement

ಇಂದು ಸುತ್ತೂರು ಮಠದಲ್ಲಿ ಜಾರಕಿಹೊಳಿ ರಾಜೀನಾಮೆ ಘೋಷಣೆ?

11:01 PM Jun 24, 2021 | Team Udayavani |

ಗೋಕಾಕ್‌: ನಾಲ್ಕು ದಿನಗಳ ಕಾಲ  ಮುಂಬಯಿ ಪ್ರವಾಸದಿಂದ  ಗೋಕಾಕ್‌ಗೆ ಮರಳಿರುವ  ರಮೇಶ್‌ ಜಾರಕಿಹೊಳಿ  ಶುಕ್ರವಾರ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಲಿದ್ದು, ಅಲ್ಲಿಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಮೂಲಕ ಸಂಪುಟಕ್ಕೆ ಮರು ಸೇರ್ಪಡೆ ಕುರಿತು ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದ ಇವರು  ಈಗ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

ಅವರೊಂದಿಗೆ  ಸಹೋದರ ಲಖನ್‌ ಹಾಗೂ ಅಳಿಯ ಅಂಬಿರಾವ್‌ ಪಾಟೀಲ್‌ ಇರಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next