ಮುಂಬೈ: ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ ಕಾರಣದಿಂದ ಕೇಂದ್ರ ಸಚಿವರು ಬಾಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷ (ಅಠವಳೆ ಬಣ)ದ ಪಿಆರ್ ಓ ಆಗಿರುವ ಮಯೂರ್ ಬಾರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಮದಾಸ್ ಅಠವಳೆ ಅವರ ಕೋವಿಡ್ ವರದಿ ಇಂದು ಬಂದಿದ್ದು, ಪಾಸಿಟಿವ್ ಪತ್ತೆಯಾಗಿದೆ. ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸಚಿವ ರಾಮದಾಸ್ ಅಠವಳೆಯವರು ‘’ ಗೋ ಕೊರೊನಾ ಗೋ” ಎಂದು ಹೇಳಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ:ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಅಠವಳೆ ಪಕ್ಷ ಸೇರ್ಪಡೆ
ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪ ಹೊರೆಸಿರುವ ನಟಿ ಪಾಯಲ್ ಘೋಷ್ ಸೋಮವಾರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ (ಅಠವಳೆ ಬಣ) ಸೇರ್ಪಡೆಗೊಂಡಿದ್ದರು. ನಟಿ ಪಾಯಲ್ ಘೋಷ್ ಅವರು ರಾಮದಾಸ್ ಅಠವಳೆಯವರ ಸಮ್ಮುಖದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಅಠವಳೆಯವರಿಗೆ ಸೋಂಕು ದೃಢವಾಗಿದ್ದು, ಪಾಯಲ್ ಘೋಷ್ ಗೂ ಸಂಕಷ್ಟ ಎದುರಾಗಿದೆ.