Advertisement

ರ್‍ಯಾಂಬೋ 2 ಆಯ್ತು, ಈಗ ವಿಕ್ಟರಿ 2

11:15 AM Jun 02, 2018 | |

ಹೌದು, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳ ಶೀರ್ಷಿಕೆಗಳನ್ನು ಮರು ಬಳಕೆ ಮಾಡುತ್ತಿರುವುದು ಹೊಸದೇನಲ್ಲ. ಹಳೆಯ ಶೀರ್ಷಿಕೆಗಳನ್ನಿಟ್ಟುಕೊಂಡು ಈಗಾಗಲೇ ಸಾಕಷ್ಟು ಚಿತ್ರಗಳು ಬಂದಿವೆ. ಈಗ ಹೊಸ ಸುದ್ದಿಯೆಂದರೆ, ಶರಣ್‌ ಅಭಿನಯದ ಚಿತ್ರಗಳ ಶೀರ್ಷಿಕೆಗಳ ಮರುಬಳಕೆ ಪರ್ವ ಎನ್ನಬಹುದು. ಇತ್ತೀಚೆಗಷ್ಟೇ “ರ್‍ಯಾಂಬೋ 2′ ಚಿತ್ರ ಬಿಡುಗಡೆಯಾಗಿದೆ.

Advertisement

ಇನ್ನು, “ಅಧ್ಯಕ್ಷ ಇನ್‌ ಅಮೆರಿಕ’ ಎಂಬ ಚಿತ್ರ ಕೂಡ ಚಿತ್ರೀಕರಣದಲ್ಲಿದೆ. ಈಗ ಅಲೆಮಾರಿ ಸಂತು ನಿರ್ದೇಶಿಸುತ್ತಿರುವ ಚಿತ್ರಕ್ಕೆ “ವಿಕ್ಟರಿ 2′ ಎಂದು ನಾಮಕರಣ ಮಾಡಲಾಗಿದೆ. ವಿಶೇಷವೆಂದರೆ, ಈ ಮೂರು ಚಿತ್ರಗಳೂ ಶರಣ್‌ಗೆ ಗೆಲುವು ತಂದುಕೊಟ್ಟ ಚಿತ್ರಗಳು. ಹಾಗಾಗಿ, ಅದೇ ಶೀರ್ಷಿಕೆಯನ್ನು ಇಲ್ಲಿ ಮರುಬಳಕೆ ಮಾಡಿದ್ದಾರೆ. ಹಾಗಂತ, ಕಥೆಗೂ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ ಎಂಬುದು ನೆನಪಿರಲಿ. 

“ವಿಕ್ಟರಿ’ ಶರಣ್‌ಗೆ ದೊಡ್ಡ ಗೆಲುವು ತಂದುಕೊಟ್ಟ ಚಿತ್ರ. ಆ ಚಿತ್ರದಲ್ಲಿ ಅಸ್ಮಿತಾ ಸೂದ್‌ ನಾಯಕಿಯಾಗಿ ನಟಿಸಿದ್ದರು. “ಅಧ್ಯಕ್ಷ’ ಚಿತ್ರದಲ್ಲಿ ಕಲ್ಯಾಣಿ ಟೀಚರ್‌ ಪಾತ್ರದಲ್ಲೂ ಹೀಗೆ ಬಂದು ಹಾಗೆ ಹೋಗಿದ್ದರು. ಈಗ ಸಂತು ನಿರ್ದೇಶಿಸುತ್ತಿರುವ “ವಿಕ್ಟರಿ 2′ ಚಿತ್ರದಲ್ಲೂ ಅಸ್ಮಿತಾ ಸೂದ್‌ ನಾಯಕಿಯಾಗಿ ಮುಂದುವರೆಯುತ್ತಿದ್ದಾರೆ. ಆದರೆ, ಕಥೆ ಮಾತ್ರ ಬೇರೆ.

“ಕಾಲೇಜ್‌ ಕುಮಾರ್‌’ ಚಿತ್ರದ ನಂತರ ನಿರ್ದೇಶಕ ಸಂತು, ಶರಣ್‌ಗೆ ಸಿನಿಮಾ ಮಾಡುತ್ತಿರುವ ಚಿತ್ರಿದು. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಮಾಡಿರುವ ನಿರ್ದೇಶಕರು, ಸ್ವಲ್ಪ ದಿನಗಳ ಚಿತ್ರೀಕರಣ ಮಾಡಿದರೆ, ಚಿತ್ರ ಪೂರ್ಣಗೊಳ್ಳಲಿದೆ. ಈ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ತರುಣ್‌ ಸುಧೀರ್‌ ಅವರ ಕಥೆ ಇದೆ. ಬಹುತೇಕ “ವಿಕ್ಟರಿ’ ತಂಡವೇ ಇಲ್ಲೂ ಮುಂದುವರೆದಿದೆ. ಅಂದಹಾಗೆ, ಇದೊಂದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ.

Advertisement

Udayavani is now on Telegram. Click here to join our channel and stay updated with the latest news.

Next