Advertisement

ರಂಗದ ಮೇಲೆ ರಾಮಾಯಣ ದರ್ಶನ

11:40 AM Nov 24, 2018 | |

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಯಿಂದ ವತಿಯಿಂದ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›.ಎಸ್‌.ಜಿ.ಸಿದ್ದರಾಮಯ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ಕುವೆಂಪು ಅವರ “ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಂದು 50 ವರ್ಷಗಳು ತುಂಬಿದ ಸವಿನೆನಪಿಗಾಗಿ ಈ ಮಹಾಕಾವ್ಯವನ್ನು ರಂಗರೂಪಕ್ಕಳವಡಿಸಿ, ನಾಲ್ಕೂವರೆ ಗಂಟೆಗಳ ದೃಶ್ಯಕಾವ್ಯವಾಗಿ ಸಿದ್ಧಪಡಿಸಲಾಗಿದೆ.

ಭಾನುವಾರ ಸಂಜೆ 6 ಗಂಟೆಗೆ ನಗರದ ರವೀಂದ್ರಕಲಾ ಕ್ಷೇತ್ರದಲ್ಲಿ ಪ್ರದರ್ಶನ ನಡೆಯಲಿದೆ. ನಂತರ ನ.27 ಮತ್ತು 28ರಂದು ಮೈಸೂರು, ಡಿ.5ರಿಂದ ಶಿವಮೊಗ್ಗದ ಕುಪ್ಪಳಿ ಮೂಲಕ ನಾಟಕ ತಂಡ ರಾಜ್ಯಪ್ರವಾಸ ಆರಂಭಸಲಿದ್ದು, ಜ.8ರವೆಗೆ ನಾಡಿನ ವಿವಿಧೆಡೆ ರಂಗಾಯಣ ಮೈಸೂರು ಕಲಾವಿದರು ನಾಟಕ ಪ್ರಸ್ತುತಪಡಿಸಲಿದ್ದಾರೆ ಎಂದರು.

ಆನ್‌ಲೈನ್‌ನಲ್ಲಿ ಟಿಕೆಟ್‌: “ರಂಗಾಯಣ ಡಾಟ್‌ ಒಆರ್‌ಜಿ’ ವೆಬ್‌ಸೈಟ್‌ ಮೂಲಕ ಮುಂಗಡವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಇಲ್ಲವೇ ರವೀಂದ್ರ ಕಲಾಕ್ಷೇತ್ರದಲ್ಲೂ ಟಿಕೆಟ್‌ಗಳನ್ನು ಪಡೆಯಬಹುದು. ಪ್ರವೇಶ ಶುಲ್ಕ 50 ರೂ. ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next