ಸಂಸದ್‌ಗೆ ಸುಮಾರು 10 ಕೋ.ರೂ. ವೆಚ್ಚ ತಗಲುವ ನಿರೀಕ್ಷೆ ಇದೆ.
Advertisement
ಪೇಜಾವರ ಮಠದ ವಿಜಯಧ್ವಜ ಅತಿಥಿ ಗೃಹದಲ್ಲಿರುವ ಧರ್ಮಸಂಸದ್ ಕಚೇರಿಯಲ್ಲಿ ಗುರುವಾರ ವೆಬ್‌ಸೈಟ್ ಅನಾವರಣ ಸಮಾ ರಂಭದಲ್ಲಿ ಈ ಮಾಹಿತಿಗಳನ್ನು ಪ್ರಕಟಿಸ ಲಾಯಿತು. ಮಂಗಳೂರಿನ ಕರಾವಳಿ ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ ರಾವ್ ಅವರು ವೆಬ್‌ಸೈಟ್ ಅನಾವರಣಗೊಳಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಧರ್ಮಸಂಸದ್ ಅಧಿವೇಶನ ನಿರ್ಣಯ ತಳೆಯುವಂತಾಗಲಿ. ಇದು ಸಮಸ್ತ ಹಿಂದೂ ಸಮಾಜದ ಆಶಯವೂ ಆಗಿದೆ ಎಂದು ಹೇಳಿದರು.
Related Articles
Advertisement
ಪ್ರಸ್ತಾವನೆಗೈದ ಧರ್ಮಸಂಸದ್ ಪ್ರಧಾನ ಕಾರ್ಯದರ್ಶಿ ಪ್ರೊ| ಎಂ.ಬಿ. ಪುರಾಣಿಕ್ ಅವರು, ಉಡುಪಿ ನಗರದ ಮಠ, ಕಲ್ಯಾಣ ಮಂಟಪ, ಮನೆಯವರು ಸ್ವಯಂ ಆಸಕ್ತಿ ವಹಿಸಿ ಸಾಧು ಸಂತರನ್ನು ಉಳಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಅಂತಹವರು ವೆಬ್‌ಸೈಟ್‌ನಲ್ಲಿ (www.dharmasamsad.in) ಲಾಗ್‌ಇನ್ ಆಗಿ ವಿವರಗಳನ್ನು ಕಳುಹಿಸಿದರೆ ಅವರ ಸಂಪರ್ಕ ಸಾಧಿಸಲಾಗುವುದು ಎಂದರು.
ನೆರವಿನ ಘೋಷಣೆಮೂಡಬಿದಿರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ 5 ಲ.ರೂ., ಕರಾವಳಿ ಸಮೂಹ ಸಂಸ್ಥೆ ಅಧ್ಯಕ್ಷ ಗಣೇಶ ರಾವ್ 5 ಲ.ರೂ., ಸಂಸದೆ ಶೋಭಾ ಕರಂದ್ಲಾಜೆ 1 ಲ.ರೂ. ನೆರವು ನೀಡಿರುವುದಾಗಿ ಎಂ.ಬಿ. ಪುರಾಣಿಕ್ ಘೋಷಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ರಮೇಶ್ ಬಂಗೇರ, ಹಣಕಾಸು ಸಮಿತಿ ಅಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ. ವಿಲಾಸ ನಾಯಕ್ ಸ್ವಾಗತಿಸಿ, ಬಜರಂಗ ದಳದ ವಿಭಾಗ ಸಂಚಾಲಕ ಸುನಿಲ್ ಕೆ.ಆರ್. ವಂದಿಸಿದರು. ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.