Advertisement

ಶ್ರೀಕೃಷ್ಣಮಠ: ಎ. 13-27ರ ವರೆಗೆ ರಾಮನವಮಿ- ಹನುಮಜ್ಜಯಂತಿ ಉತ್ಸವ

01:55 AM Mar 27, 2021 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಎ. 13ರಿಂದ 27ರ ವರೆಗೆ ನಡೆಯುವ ರಾಮನವಮಿ- ಹನುಮಜ್ಜಯಂತಿ ಉತ್ಸವದಲ್ಲಿ ರಾಜಾಂಗಣದಲ್ಲಿ ನಿತ್ಯ ರಾತ್ರಿ 7ಕ್ಕೆ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಈ ಕೆಳಗಿನಂತೆ ಜರಗಲಿದೆ.

Advertisement

ಎ. 13- ಪುಣೆಯ ರಾಹುಲ್‌ ದೇಶಪಾಂಡೆ ಅವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿ, ಎ. 14- ಚೆನ್ನೈನ ವಿ| ಶ್ರೀರಂಜನಿ ಸಂತಾನ ಗೋಪಾಲನ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ, ಎ. 15- ಬೆಂಗಳೂರಿನ ವಿ| ಅರ್ಜುನಕುಮಾರ ಮತ್ತು ಬಳಗದಿಂದ ಸ್ವರ-ಲಯ ಸಮ್ಮೇಳನ, ಎ. 16- ಮೈಸೂರು ಎಂ. ನಾಗರಾಜ್‌- ಮೈಸೂರು ಕಾರ್ತಿಕ್‌ರಿಂದ ದ್ವಂದ್ವ ಪಿಟೀಲು ವಾದನ, ಎ. 17- ಚೆನ್ನೈನ ಕುನ್ನಕುಡಿ ಬಾಲಮುರಳಿಕೃಷ್ಣರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಎ. 18- ಮೈಸೂರು ಚಂದನ್‌ಕುಮಾರ್‌ರಿಂದ ವೇಣು ವಾದನ, ಎ. 19- ಚೆನ್ನೈನ ಕಲಾಕ್ಷೇತ್ರ ಫೌಂಡೇಶನ್‌ನಿಂದ ಶಬರಿ ಮೋಕ್ಷ- ನೃತ್ಯ ರೂಪಕ, ಎ. 20- ಕೇರಳದ ಫೋಕ್‌ಲ್ಯಾಂಡ್‌ ಇಂಟರ್‌ನ್ಯಾಶನಲ್‌ ಸೆಂಟರ್‌ ಫಾರ್‌ ಆರ್ಟ್‌ ಆ್ಯಂಡ್‌ ಕಲ್ಚರ್‌ನಿಂದ ರಾಮ ಪಟ್ಟಾಭಿಷೇಕಂ ಕಥಕ್ಕಳಿ ಪ್ರದರ್ಶನ, ಎ. 21- ಮುಂಬಯಿನ ಪಂ| ಪೂರ್ಬಯಾನ್‌ ಚಟರ್ಜಿ ಅವರಿಂದ ಸಿತಾರ್‌, ಬೆಂಗಳೂರಿನ ವಿ| ಅಂಬಿ ಸುಬ್ರಹ್ಮಣ್ಯನ್‌ರಿಂದ ಪಿಟೀಲು ಜುಗಲ್‌ಬಂದಿ, ಎ. 22- ಬೆಂಗಳೂರಿನ ಪ್ರವೀಣ್‌ಕುಮಾರ್‌ರಿಂದ ಭರತನಾಟ್ಯ, ಎ. 23- ಉಡುಪಿಯ ಅರ್ಚನಾ, ಸಮನ್ವಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಕೃಷ್ಣರಾಜ್‌ ಭಟ್‌ ಕುತ್ಪಾಡಿ ಅವರಿಂದ ಪ್ರಾಚೀನ ಸಂಸ್ಕೃತ ಭಕ್ತಿಗೀತೆಗಳು, ಎ. 24- ತೆಂಕುತಿಟ್ಟು ಯಕ್ಷಗಾನ ಚೂಡಾಮಣಿ ಪ್ರಸಂಗ, ಎ. 25- ಮಧೂರು ಮಾಧುರ್ಯದ ಅಂಗವಾಗಿ ಕಾಂಚನ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಎ. 26- ಕೇರಳದ ವಿ|ಎಂ. ಜಯಚಂದ್ರನ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಎ. 27- ನವ್ಯಾ ನಟರಾಜನ್‌, ಸ್ನೇಹಾ ದೇವಾನಂದ, ಪ್ರತಿಭಾ ರಾಮಸ್ವಾಮಿ, ಅಮೃತಾ ನರೇಶರಿಂದ ಭರತನಾಟ್ಯ.

ಪ್ರವಚನ, ಚಿತ್ರ ರಚನೆ, ಭರತನಾಟ್ಯ, ಯಕ್ಷಗಾನ
ಎ. 27ರ ಸಂಜೆ 4ಕ್ಕೆ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಪ್ರವಚನ, ಗಂಜೀಫಾ ರಘುಪತಿ ಭಟ್‌ ಅವರಿಂದ ಚಿತ್ರ ರಚನೆ, ವಿದುಷಿ ಲಕ್ಷ್ಮೀಗುರುರಾಜ್‌ ತಂಡದಿಂದ ಭರತನಾಟ್ಯ, ಬನ್ನಂಜೆ ಸಂಜೀವ ಸುವರ್ಣ ತಂಡದಿಂದ ಯಕ್ಷಗಾನ ನಡೆಯಲಿದೆ.

ಹಿಂದೂ ಧಾರ್ಮಿಕ ಶಿಬಿರ
ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಅದಮಾರು ಮಠದಿಂದ ಎ. 29ರಿಂದ ಮೇ 6ರ ವರೆಗೆ ಅಪರಾಹ್ನ 2ರಿಂದ ಸಂಜೆ 6ರ ವರೆಗೆ ಹಿಂದೂ ಸಮಾಜದವರಿಗಾಗಿ ಧಾರ್ಮಿಕ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ಸ್ತೋತ್ರ, ನೀತಿಕಥೆ, ಸ್ವಾತಂತ್ರ್ಯ ಪೂರ್ವೋತ್ತರದ ವೀರರ ಕಥೆ, ಹಿಂದೂ ಧರ್ಮದ ಕಿರು ಪರಿಚಯ, ನಿತ್ಯೋಪಯೋಗಿ ಯೋಗಾಸನ, ರಂಗೋಲಿ, ಹೂ ಕಟ್ಟುವುದು, ಭಜನೆ, ಸಂಕೀರ್ತನೆ, ದೇಸೀ ಆಟಗಳನ್ನು ಕಲಿಸಲಾಗುವುದು. ಕೋವಿಡ್‌ ನಿಯಮಗಳನ್ನು ಪಾಲಿಸಲಾಗುವುದು ಎಂದು ಸಂಘಟಕ ಕೃಷ್ಣರಾಜ್‌ ಕುತ್ಪಾಡಿ ತಿಳಿಸಿದ್ದಾರೆ.

Advertisement

ಆಮಂತ್ರಣ ಪತ್ರಿಕೆಯಲ್ಲಿ ತುಳುಲಿಪಿ
ಉಡುಪಿ: ಶ್ರೀ ಕೃಷ್ಣಮಠದ ರಾಮನವಮಿ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಶ್ರೀರಾಮ- ಹನುಮದುತ್ಸವ ಎಂಬ ಶೀರ್ಷಿಕೆಯನ್ನು ಕನ್ನಡದಷ್ಟೇ ಗಾತ್ರದಲ್ಲಿ ತುಳು ಲಿಪಿಯಲ್ಲಿಯೂ ಮುದ್ರಿಸಲಾಗಿದೆ.

ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಹಿಂದೆ ತುಳುಲಿಪಿ ಫ‌ಲಕ ವನ್ನು ಹಾಕಿದಾಗ ಕೆಲವರು ಕನ್ನಡದ ಹೆಸರಿ ನಲ್ಲಿ ವಿರೋಧಿಸಿದ್ದರು. ಅಂತಹವರು ಆಂಜನೇಯನ ಆದರ್ಶವನ್ನು ಪಾಲಿಸಿ ಕೊಂಡು ಚುನಾವಣೆಗೆ ನಿಲ್ಲದೆ ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂದರು.

ಪೇಜಾವರ ಶ್ರೀಗಳ ಕಳಕಳಿಗೆ ತಮ್ಮ ಬೆಂಬಲವಿದೆ ಎಂದ ಸ್ವಾಮೀಜಿ, ಮಕ್ಕಳು ಈಗೀಗ ಜೀವನದಲ್ಲಿ ಎಡವಿ ಬೀಳುತ್ತಿದ್ದಾರೆ. 14ರಿಂದ 20ರ ಹರೆಯ ದಲ್ಲಿ ತಳೆಯುವ ಆತುರದ ನಿರ್ಧಾರ ದಿಂದ ಅನಾಹುತಗಳಿಗೆ ಬಲಿಯಾಗು ತ್ತಿದ್ದಾರೆ. ಇದರ ಬಗ್ಗೆ ಎಚ್ಚರ ವಹಿಸ ಬೇಕಾಗಿದೆ. ಈಗ ಶಿಕ್ಷಣದಲ್ಲಿಯೂ ಮೌಲ್ಯಗಳನ್ನು ಹೇಳುತ್ತಿಲ್ಲ. ಈಗಿನ ಸಮಾಜಕ್ಕೆ ಹಿರಿಯ ಕಣ್ಗಾವಲೂ ಇಲ್ಲ ವಾಗಿದೆ. ತಂದೆತಾಯಿಗಳು ಮಕ್ಕಳಿಗಾಗಿ ಸಮಯ ಕೊಡಬೇಕಾಗಿದೆ. ಇಲ್ಲವಾದರೆ ಯುವಪೀಳಿಗೆ ದಾರಿ ತಪ್ಪುತ್ತದೆ. ಅನಂತರ ಪಶ್ಚಾತ್ತಾಪ ಪಡುವುದನ್ನು ಕಾಣುತ್ತಿದ್ದೇವೆ. ವೃದ್ಧಾಶ್ರಮಗಳು ಮತ್ತು ವಿವಾಹ ವಿಚ್ಛೇದನಗಳು ಹೆಚ್ಚಿಗೆಯಾಗಲೂ ಇದೇ ಕಾರಣವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next