ಅಡಿಕೆ ಬೆಳೆಗೆ ಚುಕ್ಕಿ ರೋಗ ದಿಂದಾಗಿ ಬೆಳೆಗಾರರು ಈಗಾ ಗಲೇ ತತ್ತರಿಸಿ ಹೋಗಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದಲೂ ಬೆಲೆ ಕುಸಿತ ವಾಗುತ್ತಿದೆ. ರಾಸಾಯನಿಕ ಗೊಬ್ಬರ, ಉಪಕರಣಗಳ ಬೆಲೆಯೂ ಹೆಚ್ಚುತ್ತಿದೆ. ಬೇರೆ ದೇಶಗಳಿಂದಲೂ ಅಡಿಕೆ ಕಳ್ಳ ಸಾಗಣೆ ಮೂಲಕ ಭಾರತಕ್ಕೆ ಬರುತ್ತಿದೆ. ಈಗ ಗೃಹ ಸಚಿವರು ನೀಡಿರುವ ಹೇಳಿಕೆಯಿಂದ ಅಡಿಕೆಯ ಬೆಲೆ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ. ಸಚಿವರ ಹೇಳಿಕೆ ಅಡಿಕೆ ಬೆಳೆಗಾರರಿಗೆ ಆಘಾತವನ್ನುಂಟು ಮಾಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
Advertisement
ಹೇಳಿಕೆ ಹಿಂದೆ ಕೈವಾಡ ಸಚಿವರು ನೀಡಿರುವ ಹೇಳಿಕೆಯ ಹಿಂದೆ ದೊಡ್ಡ ಶಕ್ತಿಗಳ ಕೈವಾಡವಿರುವಂತೆ ಕಾಣುತ್ತಿದೆ. ಬೇರೆಯವರ ಒತ್ತಡದಿಂದ ಸಚಿವರು ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರಕಾರ ಬಂಡವಾಳಶಾಹಿಗಳ ಪರವಾಗಿಯೇ ಕೆಲಸ ಮಾಡುತ್ತಾ ಬಂದಿದೆ. ಎಲೆ ಚುಕ್ಕಿ ರೋಗಕ್ಕೆ ಔಷಧ ಹುಡುಕುತ್ತಿಲ್ಲ. ಬದಲಾಗಿ ಅಡಿಕೆಗೆ ಪ್ರೋತ್ಸಾಹ ನೀಡಬಾರದು ಎಂದು ಸಚಿವರು ಹೇಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಡಿಕೆಗೆ ಬೆಂಬಲ ಬೆಲೆ ನೀಡಿತ್ತು ಎಂದರು.
ಗೃಹ ಸಚಿವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಡಿ. 31ರಂದು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿ ಭಟನೆ ನಡೆಸಲಾಗುವುದು ಎಂದರು. ಪಕ್ಷದ ಪ್ರಮುಖರಾದ ಶಶಿಧರ ಹೆಗ್ಡೆ, ರಕ್ಷಿತ್ ಶಿವರಾಂ, ಅಬ್ಟಾಸ್ ಆಲಿ, ಪ್ರತಿಭಾ ಕುಳಾç, ನವೀನ್ ಡಿ’ಸೋಜಾ, ಜಯಶೀಲ ಅಡ್ಯಂತಾಯ, ಪದ್ಮ ಪ್ರಸಾದ್ ಜೈನ್, ಉಮೇಶ್ ದಂಡೆಕೇರಿ, ಶುಭೋದಯ ಆಳ್ವ, ಶಬೀರ್ ಸಿದ್ಧಕಟ್ಟೆ, ಅಪ್ಪಿ, ಶಾಹುಲ್ ಹಮೀದ್, ಅಪ್ಪಿ, ನಜೀರ್ ಬಜಾಲ್ ಉಪಸ್ಥಿತರಿದ್ದರು.