ರಾಮನಗರ: “ನಾವು ಆರೋಗ್ಯವಾಗಿದ್ದೇವೆ, ಯಾವ ಅಡ್ಡ ಪರಿಣಾಮವೂ ಆಗ ಲಿಲ್ಲ. ನೀವು ಕೋವಿಶೀಲ್ಡ್ ಲಸಿಕೆ ಪಡೆಯಿರಿ’ ಎಂದು ಜಿಪಂ ಮತ್ತು ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ಎಂ.ಎ ಸ್. ಅರ್ಚನಾ, ಜಿಪಂ ಸಿಇಓ ಇಕ್ರಂ, ಎಡಿಸಿ ಟಿ.ಜವರೇಗೌಡ ಸ್ಫೂರ್ತಿ ತುಂಬಿದರು.
ನಗರದ ಜಿಲ್ಲಾ ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಎರಡನೇ ಹಂತದ ಕೋವಿಶೀಲ್ಡ್ ಲಸಿಕೆ ವಿತರಣೆ ಕಾರ್ಯ ಕ್ರಮದಲ್ಲಿ ಸ್ವತಃ ತಾವೇ ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
“ವೆರಿ ಸಿಂಪಲ್ ಆಂಡ್ ಈಸಿ ಪ್ರೋಸೆಸ್. ಎಲ್ಲರೂ, ನಿಮಿಷಗಳಲ್ಲಿ ಲಸಿಕೆ ಪಡೆದು ಕೊಂಡೆವು. ಬಳಿಕ ವೈದ್ಯರು ನಮ್ಮನ್ನು ಅರ್ಧ ಗಂಟೆ ನಿಗಾದಲ್ಲಿ ಇರಿಸಿದ್ದರು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಆಗಲಿಲ್ಲ. ಯಾವ ಆತಂಕವೂ ಪಡದೆ ಎಲ್ಲರೂ ಕೋವಿಡ್ ಲಸಿಕೆ ಪಡೆ ಯಿರಿ’ ಎಂದು ಜಿಪಂ ಸಿಇಒ ಇಕ್ರಂ ಸಲಹೆ ನೀಡಿದರು.
ಕೊರೊನಾ ವಿರುದ್ಧ ಹೋರಾಡಲು ಸಹಕರಿಸಿ: ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ಲಸಿಕೆ ಪಡೆದ ನಮಗೆ ಯಾವ ಅಡ್ಡ ಪರಿ ಣಾಮವಾಗಿಲ್ಲ. ಕೊರೋನಾ ಸೋಂಕಿನಿಂದ ಉಂಟಾದ ತೊಂದರೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ರಾಜ್ಯದಲ್ಲಿ ಈಗಾಗಲೇ ಮೊದಲ ಹಂತದಲ್ಲಿ 1.80 ಲಕ್ಷಕ್ಕೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಯಾರಿಗೂ ತೊಂದರೆ ಯಾಗಿಲ್ಲ. ಎಲ್ಲರೂ ಲಸಿಕೆ ಪಡೆದು ಕೋವಿಡ್-19 ರೋಗದ ವಿರುದ್ಧ ಹೋರಾಡಲು ಸಹಕರಿಸಬೇಕು ಎಂದರು.
ಶಕ್ತಿ ವೃದ್ಧಿ: ಕೋವಿಡ್ ಲಸಿಕೆ ಪಡೆಯುವು ದರಿಂದ ದೇಹದಲ್ಲಿ ಕೋವಿಡ್-19 ಸೋಂಕನ್ನು ನಿರೋಧಿ ಸುವ ಶಕ್ತಿ ವೃದ್ಧಿಸುತ್ತದೆ. ಸರ್ಕಾರ ಫ್ರಂಟ್‌ಲೆçನ್ ವಾರಿ ಯರ್ಗೆ ಲಸಿಕೆ ನೀಡುತ್ತಿದೆ. ಲಸಿಕೆ ಪಡೆಯಲು ನೋಂದಣಿ ಮಾಡಿ ಕೊಂಡ ಪ್ರತಿಯೊಬ್ಬರೂ, ತಪ್ಪದೆ ಲಸಿಕೆ ಪಡೆದು ಕೊಳ್ಳಬೇಕು ಎಂದು ಸೂಚಿದರು.
ಇದನ್ನೂ ಓದಿ :ಮೀಸಲಾತಿ ಹೋರಾಟಕ್ಕೆ ಬರೋದು ಸಿದ್ದುಗೆ ಬಿಟ್ಟ ವಿಚಾರ: ಈಶ್ವರಪ್ಪ
ಹೋರಾಟ ನಡೆ ಸಿ ದ್ದೇವೆ: ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತ ನಾಡಿ, ಕೋವಿಡ್-19 ತಡೆಗಟ್ಟಲು ಕಳೆದ ಹಲವು ತಿಂಗಳಿಂದ ಹೋರಾಟ ನಡೆಸಿದ್ದೇವೆ. ಕಂದಾಯ, ಜಿಪಂ, ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗೆ 2ನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಯಾರೊಬ್ಬರೂ ಲಸಿಕೆಯಿಂದ ವಂಚಿತರಾಗಬಾ ರದು ಎಂದು ಅಧಿ ಕಾ ರಿ, ಸಿಬ್ಬಂದಿ ಗೆ ಸೂಚಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಆರ್. ಸಿ.ಎಚ್ ಡಾ.ಪದ್ಮಾ, ತಾಲೂಕು ವೈದ್ಯಾಧಿಕಾರಿ ಡಾ.ಶಶಿಕಲಾ ಉಪಸ್ಥಿತರಿದ್ದರು .