ಕನಕಪುರ: ಕಾಯಕವೇ ಕೈಲಾಸ ಎಂದಬಸವಣ್ಣನವರ ತತ್ವದಂತೆ ಶಿಕ್ಷಕರೊಬ್ಬರುಕೊರೊನಾ ಕಷ್ಟಕಾಲದಲ್ಲಿ ಜೀವನನಿರ್ವಹಣೆಗೆ ಮೂಟೆ ಹೋರುವಕಾಯಕ ಮಾಡುತ್ತಿದ್ದಾರೆ.
ತಾಲೂಕಿನ ಸಾತನೂರಿನ ಹೋಬಳಿಯ ಗ್ರಾಮದ ನಿವಾಸಿ ಮಹೇಶ್,ಕಳೆದ 10 ವರ್ಷದಿಂದ ಸಾನತನೂರಿನಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು.ಆದರೆ, ಕೋವಿಡ್‌ನಿಂದಕಳೆದ ಒಂದು ವರ್ಷದಿಂದ ಉದ್ಯೋಗವಿಲ್ಲದೆ ಕಂಗಾಲಾಗಿದ್ದ ಮಹೇಶ್, ತಮ್ಮಕುಟುಂಬನಿರ್ವಹಣೆಗೆಅನಿವಾರ್ಯತೆಎದುರಾಗಿ ಮೂಟೆ ಹೋರುವಕಾಯಕ ಮಾಡುತ್ತಿದ್ದಾರೆ.
ಸರ್ಕಾರಿ ಉದ್ಯೋಗಕ್ಕಾಗಿ ಅಲೆದಾಟ: ಸಾತನೂರಿನ ಮಹೇಶ್ ಎಂಎ, ಬಿಎಡ್‌ಪದವಿ ಪಡೆದು ಸರ್ಕಾರಿ ಉದ್ಯೋಗಕ್ಕಾಗಿ ಅಲೆದು ಸಾಕಾಗಿ, ಕೊನೆಗೆ ತಮ್ಮಗ್ರಾಮದ ಸಾನತನೂರಿನ ಖಾಸಗಿಶಾಲೆಯೊಂದರಲ್ಲಿ ಕಳೆದ ಹತ್ತು ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.ಖಾಸಗಿ ಶಾಲೆಯಲ್ಲಿಬರುವ ಸಂಬಳದಲ್ಲಿಜೀವನ ನಡೆಯುತ್ತಿತ್ತು. ಆದರೆ, ಕಳೆದಒಂದುವರ್ಷದಹಿಂದೆಕೊರೊನಾದಿಂದ ಅನುದಾನ ರಹಿತ ಖಾಸಗಿ ಶಿಕ್ಷಕರಪಾಡು ಹೇಳತೀರದ್ದಾಗಿದೆ.
ಕಳೆದ ಒಂದುವರ್ಷದಿಂದ ಸಂಸ್ಥೆಯಿಂದ ಯಾವುದೇಸಂಬಳ ಮತ್ತು ಆರ್ಥಿಕ ಭದ್ರತೆ ಇಲ್ಲದೆಪರದಾಡುವಂತಾಯಿತು. ಕೊರೊನಾದಿಂದ ಬಹುತೇಕ ಪ್ರಾಥಮಿಕ ಹಂತದ1ರಿಂದ 9ನೇ ತರಗತಿವರೆಗೆ ಶಾಲೆಗಳುಪ್ರಾರಂಭವೇ ಆಗದೆ ಶಿಕ್ಷಕರಿಗೆಉದ್ಯೋಗವು ಇಲ್ಲದಂತಾಯಿತು. ತಾಲೂಕಿನಲ್ಲಿರುವ ಬಹುತೇಕ ಖಾಸಗಿಶಿಕ್ಷಕರ ಪಾಡು ಇದೆ ಆಗಿದೆ.
ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ:ಕೊರೊನಾದಿಂದ ಆನೇಕ ಶಿಕ್ಷಕರುಆರ್ಥಿಕ ಹೊಡೆತಕ್ಕೆ ಸಿಕ್ಕಿ ಕುಟುಂಬನಿರ್ವಹಣೆಗೆ ವಿಧಿಯಿಲ್ಲದೆ ತಳ್ಳು ಗಾಡಿಗಳಲ್ಲಿ ತರಕಾರಿ, ಹೂ, ಹಣ್ಣು ಮಾರಾಟಮಾಡುತ್ತಿದ್ದಾರೆ. ಇನ್ನೂಕೆಲವರುಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನುಕೆಲವರು ಶಿಕ್ಷಕನಾಗಿ ಕೂಲಿಮಾಡುವುದು ಹೇಗೆ ಎಂಬ ಮುಜುಗರದಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಶಿಕ್ಷಕ ಮಹೇಶ್ ಅವರಿಗೂ ದಿನಕಳೆದಂತೆ ಕುಟುಂಬ ನಿರ್ವಾಹಣೆಹೋರೆಯಾಗಿ ಪರಿಣಮಿಸಿತ್ತು. ಇನ್ನುಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲಎಂಬುದನ್ನು ಮನಗಂಡ ಮಹೇಶ್,ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಅಲ್ಪಸ್ವಲ್ಪ ಕೃಷಿ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬಿಡುವಿನ ಸಮಯದಲ್ಲಿಕೂಲಿಕೆಲಸ ಮಾಡುವುದು, ಮೂಟೆಹೋರುವ ಕಾಯಕ ಮಾಡುತ್ತ ಮಾದರಿಯಾಗಿದ್ದಾರೆ. ಸಮಾಜದ ಪ್ರತಿಯೊಬ್ಬಪ್ರಜೆಗೂ ಶಿಕ್ಷಣ ಕೊಡುವ ಶಿಕ್ಷಕರು ಕೂಲಿಕೆಲಸ ಮಾಡುವಂತಹ ಸಂದರ್ಭ ಸೃಷ್ಟಿಯಾಗಿರುವುದು ಮಾತ್ರ ವಿಪರ್ಯಾಸ.