ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕರ ಭೇಟಿಯನ್ನು ಈ ಹೊತ್ತಿನವಿಷಯ (ನಟ ದರ್ಶನ್) ವಿಷಯಕ್ಕೆ ತಳಕುಹಾಕುವುದು ಬೇಡ ಎಂದು ಜೆಡಿಎಸ್‌ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ಕುಮಾರಸ್ವಾಮಿ ಹೇಳಿದರು.
ನಗರಸಭೆಯ6,7 ಮತ್ತು8ನೇ ವಾರ್ಡ್‌ಗಳಲ್ಲಿ ಪ್ರಮುಖ ನಾಗರಿಕರ ಮನೆಗೆ ಭೇಟಿನೀಡಿದ್ದ ವೇಳೆ ಮಾಜಿ ಸಿಎಂಕುಮಾರಸ್ವಾಮಿಹಾಗೂ ಇಂದ್ರಜಿತ್ ಲಂಕೇಶ್ ಫೋಟೋವೈರಲ್ ಆಗಿರುವ ಕುರಿತು ಸುದ್ದಿಗಾರರುಗಮನ ಸೆಳೆದಾಗಅವರು ಪ್ರತಿಕ್ರಿಯಿಸಿದರು.ಇಂದ್ರಜಿತ್ ಲಂಕೇಶ್ 10 – 15 ದಿನಗಳಹಿಂದೆ ತಮ್ಮ ತೋಟದ ಮನೆಗೆ ಭೇಟಿ ನೀಡಿಮಾಜಿ ಸಿಎಂಕುಮಾರಸ್ವಾಮಿ ಅವರೊಂದಿಗೆಚರ್ಚೆ ನಡೆಸಿದ್ದು ನಿಜ. ಅವರ ಭೇಟಿ ಬಗ್ಗೆತಾವು ತಮ್ಮ ತಂದೆಯವರನ್ನು ಕೇಳಿದಾಗಅವರು ಸಹ ಬಂದಿದ್ದು ನಿಜ ಎಂದಿದ್ದಾರೆ.
ಆದರೆ, ಯಾವುದೊ ಬೇರೆ ವಿಚಾರದ ಬಗ್ಗೆಮಾತನಾಡಲು ಅವರು ಬಂದಿರಬಹುದು.ಹಿಂದಿನ ಅವರಿಬ್ಬರ ಭೇಟಿಯನ್ನು ಈಹೊತ್ತಿನ ವಿಷಯಕ್ಕೆ (ನಟ ದರ್ಶನ್) ತಳಕುಹಾಕುವುದು ಬೇಡ. ಈಗಿನ ಫೋಟೋವೈರಲ…ಬಗ್ಗೆಇಂದ್ರಜಿತ್‌ಲಂಕೇಶ್‌ಅವರನ್ನೇನೀವು ಪ್ರಶ್ನೆ ಮಾಡಿ. ಅವರೆ, ಫೋಟೋವಿಚಾರವಾಗಿ ಪ್ರತಿಕ್ರಿಯೆ ಕೊಡುತ್ತಾರೆಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು.ಯಾರ ಬಗ್ಗೆ ಮಾತಾಡಲ್ಲ: ತಾವು ಯಾರಬಗ್ಗೆಯೂಮಾತನಾಡುವುದಿಲ್ಲ.ಸಾರ್ವಜನಿಕಜೀವನದಲ್ಲಿರುವ ರಾಜಕಾರಣಿಗಳು, ಚಿತ್ರನಟರು ಜವಾಬ್ದಾರಿಯುತವಾಗಿ ಇರಬೇಕು.ನಮ್ಮ ನಡೆಗಳನ್ನುಜನರು ಗಮನಿಸುತ್ತಿರುತ್ತಾರೆಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿಉñರಿಸಿ¤ ದರು.
ಸಾರ್ವಜನಿಕವಾಗಿ ಯಾರುಹೇಗೆ ಬದುಕುತ್ತಾರೆ ಎಂಬುದು ಅವರವಿಚಾರ ಅವರಿಗೆ ಬಿಟ್ಟಿದ್ದು. ಕುಮಾರಣ್ಣಅವರನ್ನು ಎÇÉಾ ವಿಚಾರಕ್ಕೂ ಎಳೆದು ತರುವುದು ಸರಿಯಲ್ಲ. ಬೇರೆ ಬೇರೆ ದುರುದ್ದೇಶಕ್ಕೆಫೋಟೋ ವೈರಲ್ ಮಾಡುತ್ತಾರೆ ಎಂದುಕಿಡಿಕಾರಿದರು.ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ:ಸಾರ್ವಜನಿಕ ಪ್ರಮುಖರ ಭೇಟಿಗೂ ಮುನ್ನಅವರು ರಾಮನಗರದ ಚಾಮುಂಡೇಶ್ವರಿದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಸಂಜೆಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯ, ಶ್ರೀ ಬನ್ನಿಮಹಾಕಾಳಿ ಅಮ್ಮನವರದೇವಾಲಗಳಿಗೆ ನಿಖೀಲ… ಕುಮಾರಸ್ವಾಮಿಭೇಟಿ ಮಾಡಿ ಪೂಜೆ ಸಲ್ಲಿಸಿದರು. ಪ್ರಮುಖರ ಮನೆಯ ಭೇಟಿಯ ವೇಳೆ ಕೆಲವರುತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡರು. ಸುಮಂಗಲಿಯರು ನಿಖೀಲ್‌ಗೆತಿಲಕ ಇಟ್ಟು ಆರತಿ ಎತ್ತಿದರು. ತಮಗೆ ಹಸ್ತಲಾಘವ ಕೊಟ್ಟ ಮಕ್ಕಳನ್ನು ನಿಖೀಲ್ ಮಮತೆಯಿಂದ ಮಾತನಾಡಿಸಿದರು.