ರಾಮನಗರ: ತಾಲೂಕಿನ ಬಿಡದಿ- ಹಾರೋಹಳ್ಳಿರಸ್ತೆಯಲ್ಲಿ ಬೈರಮಂಗಲದ ಬಳಿ ವೃಷಭಾವತಿ ನದಿಗೆಅಡ್ಡಲಾಗಿ ಇರುವ ಸೇತುವೆಯನ್ನು4 ಪಥಗಳ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಿರುವ ಕಾಮಗಾರಿಗೆ ಶಾಸಕ ಎ.ಮಂಜುನಾಥ್‌ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ,ಬಿಡದಿ, ಹಾರೋಹಳ್ಳಿಕೈಗಾರಿಕಾ ಪ್ರದೇಶಕ್ಕೆ ಪ್ರಮುಖ ಸಂಪರ್ಕ ರÓಯಾೆ¤ ಗಿದೆ. ಬಿಡದಿ ಕೈಗಾರಿಕಾ ಪ್ರದೇಶದಸಮೀಪ ಬೈರಮಂಗಲ ಜಲಾಶಯದ ಬಳಿ ವೃಷಭಾವತಿ ನದಿಗೆ ಅಡ್ಡಲಾಗಿ ಸೇತುವೆ ಇದ್ದು, ಇದುಕಿರಿದಾಗಿದೆ. ಸದರಿ ಸೇತುವೆಯನ್ನು4 ಪಥಗಳ ರಸ್ತೆಯನ್ನಾಗಿಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ಸೇತುವೆ ಕೆ.ಆರ್.ಐ.ಡಿ.ಸಿ.ಎಲ್‌ವತಿಯಿಂದ 15ಕೊಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.
90ಅಡಿಅಗಲದ ಸೇತುವೆ:ಬಿಡದಿ – ಹಾರೋಹಳ್ಳಿರಸ್ತೆ ಈಗಾಗಲೇ 4 ಪಥಗಳ ರÓಯಾೆ¤ ಗಿ ಪರಿವರ್ತನೆಯಾಗಿದೆ. ಜಲಾಶಯದ ಬಳಿ ಇರುವ ಸೇತುವೆ ಹಳೆಯದಾಗಿದ್ದು, ಮೇಲ್ದರ್ಜೆಗೆ ಏರಿದ ನಂತರ 90ಅಡಿಗೂ ಹೆಚ್ಚು ಅಗಲವಿರಲಿದೆ. ಸದ್ಯ ಈ ರಸ್ತೆಯಲ್ಲಿವಾಹನ ದಟ್ಟಣೆ ಅಧಿಕವಾಗುತ್ತಿದೆ. 3-4 ದಶಕಗಳಮುಂದಿನ ಭವಿಷ್ಯದ ದೃಷ್ಟಿಯಿಂದ ಸದರಿ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಕೋವಿಡ್‌ನಿಂದಕಾಮಗಾರಿ ವಿಳಂಬವಾಗಿದೆ ಎಂದರು.ಮುಂದಿನ 11 ತಿಂಗಳಲ್ಲಿ ಸೇತುವೆ ಕಾಮಗಾರಿಪೂರ್ಣಗೊಳಿಸಲು ಸೂಚನೆನೀಡಲಾಗಿದೆ.ಹಳೆ ಸೇತುವೆ ಯಥಾಸ್ಥಿತಿ ಇರಲಿದೆ. ಹೆಚ್ಚುವರಿ ಪಥಗಳ ನಿರ್ಮಾಣವಾಗಲಿದೆ. ಜಲಾಶಯಕ್ಕೆ ನೂತನವಾಗಿ ನಿರ್ಮಾಣವಾಗುತ್ತಿರುವ ಕೆನಾಲ್‌ಗೆ ಧಕ್ಕೆಯಾಗದಂತೆ ಹೊಸಸೇತುವೆಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
10 ಕೋಟಿರೂ.ವೆಚ್ಚದಲ್ಲಿಡಾಂಬರೀಕರಣ:ಇದೇರಸ್ತೆಯಲ್ಲಿ ಬಿಡದಿ – ಬೈರಮಂಗಲ ಕ್ರಾಸ್‌ವರೆಗಿನರಸ್ತೆಯ ಡಾಂಬರೀಕರಣವೂ ನಡೆಯುತ್ತಿದೆ. ಇದಕ್ಕೆ10 ಕೋಟಿ ರೂ. ವೆಚ್ಚವಾಗಲಿದೆ. ಇದೇ ರಸ್ತೆಯಲ್ಲಿಕಾವೇರಿ ಪೈಪ್‌ಲೈನ್, ಹಾರೋಹಳ್ಳಿಗೆ ಗೇಲ್ ಕಂಪನಿಯ ಗ್ಯಾಸ್‌ಲೈನ್ ಹಾದು ಹೋಗುತ್ತಿದೆ. ರಸ್ತೆ ಕೆಳಭಾಗದಲ್ಲಿ 2 ಕಾರ್ಯ ನಡೆಯುತ್ತಿದೆ. ಈ ಎಲ್ಲಾಕಾಮಗಾರಿಗಳು ಮುಗಿದ ನಂತರ ಬಿಡದಿ-ಹಾರೋಹಳ್ಳಿ ರಸ್ತೆ ಸುಸಜ್ಜಿತ ರÓಯಾೆ¤ ಗಲಿದೆ ಎಂದರು.
ವೃಷಭಾವತಿ ನದಿ ನೀರು ಶುದ್ಧೀಕರಣ: ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಬೈರಮಂಗಲಜಲಾಶಯದ ಬಳಿ ಡೈವರ್ಷನ್‌ಕೆನಾಲ್ ನಿರ್ಮಾಣಕ್ಕೆ 110 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಈ ಕಾಮಗಾರಿಯ ಬಗ್ಗೆ ಪೂರ್ಣ ಅರಿವಿಲ್ಲದಕೆಲವು ಪರಿಸರವಾದಿಗಳು ಮತ್ತು ಆರ್.ಟಿ.ಐ ಗಿರಾಕಿಗಳು ನ್ಯಾಯಾಲಯಕ್ಕೆ ಹೋಗಿದ್ದರಿಂದ ಕಾಮಗಾರಿವಿಳಂಬವಾಗಿದೆ. ಡೈವರ್ಷನ್ ಕೆನಾಲ್ ಕಾಮಗಾರಿಶೇ.70ರಷ್ಟು ಮುಗಿದಿದೆ. ಬಲದಂಡೆ ನಾಲೆ ಕಾಮಗಾರಿ 4-5ಕಿ.ಮೀವರೆಗೆ ಮುಗಿದಿದೆ ಎಂದರು.ಬೆಂಗಳೂರು ರಾಜರಾಜೇಶ್ವರಿ ನಗರದ ಬಳಿಮತ್ತುಕೆಂಗೇರಿಬಳಿಯ ದೊvಬೆ x ಲೆಬಳಿಯಲ್ಲಿವೃಷಭಾವತಿ ನದಿ ನೀರನ್ನು ಶುದ್ಧೀಕರಣ ಮಾಡಿ, ಬೈರಮಂಗಲ ಜಲಾಶಯವನ್ನು ತುಂಬಿಸುವ ಯೋಜನೆನಡೆಯುತ್ತಿದೆ. ಈ ಯೋಜನೆಗೆ ಪೂರಕವಾಗಿ ಡೈವರ್ಷನ್‌ಕೆನಾಲ್ ನಿರ್ಮಾಣವಾಗುತ್ತದೆ ಎಂದರು.
ಬೈರಮಂಗಲ ಕೆರೆಗೆ ಏರಿ ನಿರ್ಮಾಣ:ಬೈರಮಂಗಲಕರೆಯ ಗಡಿ ಗುರುತಿಸಲಾಗಿದೆ. ಏರಿ ನಿರ್ಮಾಣವಾಗಲಿದೆ. ಜಲಾಶಯದ ನಂತರ ನದಿ ಪಾತ್ರದಲ್ಲಿ ಸರಣಿಚೆಕ್ ಡ್ಯಾಂಗಳನ್ನು 98 ಕೋಟಿ ವೆಚದಲ್ಲಿ ನಿರ್ಮಿಸುವ ಯೋಜನೆ ಸಿದ್ಧವಾಗುತ್ತಿದೆ. ಹೀಗೆ ಚೆಕ್‌ಡ್ಯಾಂಗಳು ನಿರ್ಮಾಣದ ನಂತರ ಅಲ್ಲಿ ನಿಲ್ಲುವನೀರನ್ನು ಕೃಷಿ ಉದ್ದೇಶಕ್ಕೆ ಬಳಸಬಹುದಾಗಿದೆ.ಅಲ್ಲದೆ, ಅಂತರ್ಜಲವೂ ವೃದ್ಧಿಯಾಗಲಿದೆ ಎಂದರು.ಜಿಪಂಮಾಜಿ ಸದಸ್ಯ ಮಂಜುನಾಥ್, ಗ್ರಾಪಂ ಅಧ್ಯಕ್ಷೆಪುಟ್ಟರೇವಮ್ಮ, ರುದ್ರಯ್ಯ, ಇಟ್ಟಮಡು ಗೋಪಾಲ್,ಸಿ¨ರಾª ಜು, ಶ್ರೀನಿವಾಸ್, ಕುಮಾರಸ್ವಾಮಿ, ಶಿವಣ್ಣ,ಸುಂದರ್,ಕೃÐಪ ¡ ³, ಹನುಮಂತು ಹಾಜರಿದ್ದರು.