Advertisement
2007ರಲ್ಲಿ ಬೆಂ.ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲೆಯಾಗಿ ರಚನೆ ಮಾಡಲಾಯಿತು. ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಸ್ಥಳೀಯ ವಾಗಿ ಹೆಚ್ಚಿನ ಒತ್ತಡವಿಲ್ಲದಿದ್ದರೂ ಅಂದಿನ ಸಿಎಂ ಎಚ್.ಡಿ.ಕುಮಾರ ಸ್ವಾಮಿ ತಾವು ಪ್ರತಿನಿಧಿಸುತ್ತಿದ್ದ ರಾಮ ನಗರ ಕ್ಷೇತ್ರವನ್ನು ಜಿಲ್ಲಾ ಕೇಂದ್ರವಾಗಿಸಿ ನೂತನ ಜಿಲ್ಲೆ ಘೋಷಿಸಿದರು. ಅಂದಿ ನಿಂದಲೂ ನಮ್ಮ ಜಿಲ್ಲೆ ಬೆಂಗಳೂರಿನ ಹೆಸರಿನಿಂದಲೇ ಕರೆಸಿಕೊಳ್ಳ ಬೇಕು ಎಂದು ವಾದಿಸುತ್ತಲೇ ಇದ್ದ ಡಿ.ಕೆ.ಶಿವಕುಮಾರ್ ಇದೀಗ ತಮಗೆ ಸಿಕ್ಕಿರುವ ಅಧಿಕಾರ ಬಳಸಿ ಎಚ್‌ಡಿಕೆ ಸ್ಥಾಪಿಸಿದ ಜಿಲ್ಲೆ ಹೆಸರು ಬದಲಿಗೆ ಮುಂದಾಗಿದ್ದಾರೆ. ಇದು ರಾಜಕೀಯ, ಸಾಂಸ್ಕೃತಿಕ ಹಾಗೂ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Related Articles
- ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಇರುವ ಬ್ರಾಂಡ್ ಈ ಭಾಗಕ್ಕೂ ಸಿಗಲಿದೆ.
- ಆಡಳಿತಾತ್ಮಕವಾಗಿ ರಾಮನಗರ ಜಿಲ್ಲಾಕೇಂದ್ರವಾಗಿರುತ್ತದೆ. ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗಲ್ಲ. ಬೆಂಗಳೂರು ಎಂಬ ಬ್ರ್ಯಾಂಡ್‌ಗೆ ಜಾಗತಿಕ ಮಟ್ಟದ ಖ್ಯಾತಿಯ ಲಾಭವನ್ನು ರಾಮನಗರವೂ ಪಡೆಯಬಹುದಾಗಿದೆ.
- ಬೆಂಗಳೂರು ಬ್ರ್ಯಾಂಡ್‌ನಿಂದ ಹೂಡಿಕೆ ಕೆಲ ವಿದೇಶಿ ಬಂಡವಾಳಗಾರರು ಹೂಡಿಕೆ ಮಾಡಲು ಉತ್ಸಾಹ ತೋರುತ್ತಾರೆ.
- ಪ್ರಸ್ತುತ ಬೆಂಗಳೂರು ನಗರದ ಸುತ್ತಮುತ್ತ ಕೇಂದ್ರೀಕರಿಸಿರುವ ಐಟಿ-ಬಿಟಿ, ಸೇವಾ ಕ್ಷೇತ್ರ, ರಿಯಲ್ ಎಸ್ಟೇಟ್ ಕ್ಷೇತ್ರ ಈ ಭಾಗದತ್ತ ಗಮನಹರಿಸುತ್ತವೆ.
- ಹೊಸ ಉದ್ಯಮಗಳಿಂದ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಸ್ಥಳೀಯರು ಸಣ್ಣಪುಟ್ಟ ವ್ಯಾಪಾರ, ಪೂರಕ ಉದ್ಯಮ ನಡೆಸಲು ಸಹಕಾರಿ.
- ಬೆಂಗಳೂರಿನ ಮೆಟ್ರೋ, ಸಬ್ ಅರ್ಬನ್, ಹೈಡೆನ್ಸಿಟಿ ಕಾರಿಡಾರ್ ವಿಸ್ತರಣೆಗೆ ಅವಕಾಶ. ಬೆಂ.ದಕ್ಷಿಣ ಜಿಲ್ಲೆ ತಾಲೂಕುಗಳನ್ನು ಬೆಂಗಳೂರು ಉಪನಗರಗಳಾಗಿ ಅಭಿವೃದ್ಧಿಪಡಿಸಲು ಅವಕಾಶ.
- ಬೆಂ.ದಕ್ಷಿಣ ಎಂಬ ಹೆಸರಿನಿಂದಾಗಿ ಕೈಗಾರಿಕೆ, ಉದ್ಯಮ ಇತ್ತ ಗಮನಹರಿಸಲಿದ್ದು ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗುತ್ತದೆ.
- ಬೆಂಗಳೂರು ಉಪನಾಮದಿಂದಾಗಿ ಇಲ್ಲಿನ ಭೂಮಿಗಳ ಬೆಲೆ ಹೆಚ್ಚಳವಾಗುತ್ತದೆ. ರೈತರಿಗೆ ಒಳ್ಳೆಯ ಲಾಭ ದೊರೆಯುತ್ತದೆ.
Advertisement
ಹೆಸರು ಬದಲಿನಿಂದಾಗುವ ಸಮಸ್ಯೆ ಏನು? :
- ರಾಮನಗರಕ್ಕೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಇದೆ. ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸುವುದರಿಂದ ರಾಮನಗರದ ಆಸ್ಮಿತೆಗೆ ಧಕ್ಕೆ ಆಗಲಿದೆ.
- ರಾಮನಗರ ಕೃಷಿ ಪ್ರಧಾನ ಜಿಲ್ಲೆ. ರೇಷ್ಮೆ, ಮಾವು, ಹೈನುಗಾರಿಕೆ ಇಲ್ಲಿನ ಪ್ರಮುಖ ಕೃಷಿ. ಬೆಂಗಳೂರು ಎಂದು ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಪ್ರಾರಂಭವಾದರೆ ಕೃಷಿಗೆ ದಕ್ಕೆಯಾಗುತ್ತದೆ.
- ಬೆಂಗಳೂರು ಉಪನಾಮದಿಂದ ರಿಯಲ್ ಎಸ್ಟೇಟ್ ಉದ್ಯಮ ಬೆಳೆದು ಸ್ಥಳೀಯ ರೈತರು ಭೂಮಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ರೈತರು ಭೂಮಿ ಮತ್ತು ಬದುಕು ಎರಡನ್ನೂ ಕಳೆದುಕೊಳ್ಳುತ್ತಾರೆ.
- ಬೆಂಗಳೂರು ನಗರದ ಪರಭಾಷಿಗರ ಹಾವಳಿ, ಕಾಸ್ಮೋಪಾಲಿಟನ್ ಸಂಸ್ಕೃತಿ ಇಲ್ಲಿಯೂ ಬೆಳೆದು ಜಿಲ್ಲೆಯ ಸಾಂಸ್ಕೃತಿಕ ವಾತಾವರಣಕ್ಕೆ ಹಾನಿಯಾಗುತ್ತದೆ.
- ಈಗಾಗಲೇ ರಾಮನಗರ ಜಿಲ್ಲೆ ಸ್ಥಾಪನೆ ಸಮಯದಲ್ಲಿ ಹೆಸರಿನ ಬಗ್ಗೆ ಆಡಳಿತಾತ್ಮಕವಾಗಿ, ತಾಂತ್ರಿಕವಾಗಿ ಪರಿಶೀಲನೆ ನಡೆಸಲಾಗಿದ್ದು ಹೆಸರು ಬದಲಾವಣೆ ಸರಿಯಲ್ಲ.
- ಜಿಲ್ಲೆಯ ಹೆಸರು ಬದಲಿಂದ ಎಲ್ಲಾ ದಾಖಲೆ ತಿದ್ದಬೇಕಿದ್ದು, ಇದು ವಿನಾಕಾರಣ ಹಲವು ಗೊಂದಲ, ಆಡಳಿತಾತ್ಮಕವಾಗಿ ಹೆಚ್ಚು ವೆಚ್ಚಕ್ಕೆ ದಾರಿ ಮಾಡಿಕೊಡಲಿದೆ.
- ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗುತ್ತದೆ ಎಂಬುದು ಕೇವಲ ಭ್ರಮೆ. ಮುಂಬೈ ದೊಡ್ಡನಗರವಾಗಿದ್ದರೂ ಅದರ ಪಕ್ಕದ ಪುಣೆಯನ್ನು ಅದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಅದೇ ರೀತಿ ಹೆಸರು ಬದಲಾವಣೆ ಮಾಡದೆಯೂ ಅಭಿವೃದ್ಧಿ ಮಾಡಬಹುದು.