Advertisement
ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಸಚಿವರು ಯಾವ ರೀತಿ ಸ್ಪಂದಿಸಿಯಾರು ಎಂಬ ನಿರೀಕ್ಷೆ ಜಿಲ್ಲೆಯ ಜನತೆಯಲ್ಲಿ ಮೂಡಿದೆ. ಕಾಂಗ್ರೆಸ್ ಪ್ರಮುಖ ಪ್ರಣಾಳಿಕೆಯಾಗಿರುವ ಮೇಕೆದಾಟು ಅಣೆಕಟ್ಟೆ, ಕಳೆದ 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ಸೇರಿದಂತೆ ಹಲವು ಸಮಸ್ಯೆ ನೂತನ ಉಸ್ತುವಾರಿ ಸಚಿವರ ಮುಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಕಾಂಗ್ರೆಸ್ ಶಾಸಕರಾದ ಬಾಲಕೃಷ್ಣ ಮತ್ತು ಇಕ್ಬಾಲ್ ಹುಸೇನ್‌ರ ಸಾಥ್ ಇದ್ದು, ಜಿಲ್ಲೆಯ ಸಮಸ್ಯೆಗೆ ನೂತನ ಉಸ್ತುವಾರಿ ಸಚಿವರು ಇವರೆಲ್ಲರನ್ನೂ ಸಂಘಟಿಸಿ ಹೋರಾಟ ಮಾಡಬೇಕಿದೆ.
Related Articles
Advertisement
ಮಹನೀಯರ ಸ್ಮಾರಕ ನಿರ್ಮಾಣ: ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ, ಸಿದ್ದ ಗಂಗಾ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರದಲ್ಲಿ ಅವರ ಪ್ರತಿಮೆ ನಿರ್ಮಾಣ, ಗ್ರಾಮದ ಸಮಗ್ರ ಅಭಿವೃದ್ಧಿ, ಬಾಲಗಂಗಾ ಧರನಾಥ ಶ್ರೀಗಳ ಜನ್ಮಭೂಮಿ ಬಾನಂದೂರು ಅಭಿವೃದ್ಧಿ ಹೀಗೆ ಮಹನೀಯರ ಜನ್ಮಸ್ಥಳಗಳಲ್ಲಿ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸಚಿವರು ಚಾಲನೆ ನೀಡಬೇಕಿದೆ. ಹೀಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ನೂತನ ಸಚಿವರು ನೆರವು ನೀಡಿಯಾರೇ ಎಂಬ ನಿರೀಕ್ಷೆ ಜಿಲ್ಲೆಯ ಜನತೆಯದ್ದಾಗಿದೆ.
ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಆಗಬೇಕಿದೆ :
ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆ ಕನಕಪುರ ಮೆಡಿಕಲ್ ಕಾಲೇಜು ನಿರ್ಮಾಣ, ಜಿಲ್ಲಾ ಕೇಂದ್ರದಲ್ಲಿ ಬಸ್‌ನಿಲ್ದಾಣ
ಬೈರಾಪಟ್ಟಣ ಬಳಿ ನನೆಗುದಿಗೆ ಬಿದ್ದಿರುವ ಮಾವು ಸಂಸ್ಕರಣಾ ಘಟಕ
ಕಣ್ವ ಜಲಾಶಯದಲ್ಲಿ ಚಿಲ್ಡ್ರನ್‌ಪಾರ್ಕ್ ನಿರ್ಮಾಣ ಮಾಡುವುದು
ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶವನ್ನು ವಿಸ್ತೀರ್ಣ ಹೆಚ್ಚಿಸುವುದು
ಬೆಂಗಳೂರು-ಮಾಗಡಿ ನಡುವೆ ಇರುವ ಚತುಷ್ಪಥ ರಸ್ತೆಯನ್ನು ನಿರ್ಮಾಣ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸರ್ಕೀಟ್ ನಿರ್ಮಾಣವನ್ನು ಮಾಡುವುದು
ರಾಜೀವ್‌ಗಾಂಧಿ ಆರೋಗ್ಯ ವಿವಿ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ
-ಸು.ನಾ.ನಂದಕುಮಾರ್