Advertisement

ಸಾಲಬಾದೆಗೆ ಹೆದರಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ: ಮಹಿಳೆ ಸಾವು, ಆರು ಮಂದಿ ಗಂಭೀರ

11:44 PM Feb 02, 2023 | Team Udayavani |

ರಾಮನಗರ : ಸಾಲಗಾರರ ಕಾಟಕ್ಕೆ ಹೆದರಿದ ಒಂದೇ ಕುಟುಂಬದ ಏಳು ಮಂದಿ ಇಲಿಪಾಷಾಣ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದು ಒಬ್ಬರು ಸಾವನ್ನಪ್ಪಿ ಆರು ಮಂದಿ ಗಂಭೀರವಾಗಿರುವ ಘಟನೆ ನಡೆದಿದೆ. ಮಂಗಳಮ್ಮ (28) ಸಾವನ್ನಪ್ಪಿದ್ದು ಇನ್ನುಳಿದ ಆರು ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Advertisement

ತಾಲೂಕಿನ ದೊಡ್ಡಮಣ್ಣುಗುಡ್ಡೆದೊಡ್ಡಿಯಲ್ಲಿ ಘಟನೆ ನಡೆದಿದ್ದು ರಾಜು (40) ಸೋಂಪರದಮ್ಮ, ಮಕ್ಕಳಾದ ಆಕಾಶ್, ಕೃಷ್ಣ, ಮಂಗಳಮ್ಮನ ಸಹೋದರಿ ಸವಿತಾ ಅವರ ಪುತ್ರಿ ದರ್ಶಿನಿ, ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಇಲ್ಲಿಯೇ ವಾಸಿಗಳಾದ ರಾಜು ಕುಟುಂಬಸ್ಥರು ಬೆಂಗಳೂರಿನಲ್ಲಿ ತಾವರೆಕೆರೆ ಹೋಬಳಿ ಕುಂಬಳಗೂಡು ಸುಬ್ರಪ್ಪನ ಪಾಳ್ಯ ಮೂಲ ನಿವಾಸಿಗಳಾಗಿದ್ದು ಸಾಲಗಾರರ ಕಾಟಕ್ಕೆ ಹೆದರಿ ಮಂಗಳಮ್ಮ ತವರು ಮನೆಗೆ ಗಂಡ ರಾಜು ಮತ್ತು ಕುಟುಂಬ ಬಂದು ವಾಸಿಸುತ್ತಿದ್ದರು. ಸಾಲಗಾರರ ಕಿರುಕುಳಕ್ಕೆ ಬೆಸತ್ತು ಸಾಯುವ ನಿರ್ಧಾರ ಮಾಡಿದ್ಧಾರೆ ಮದ್ಯಾಹ್ನ ಮೂರು ಗಂಟೆ ಸುಮಾರಿಗೆ ಮನೆ ಮಂದಿಯೆಲ್ಲಾ ಬೀಗ ಜಡಿದು ಊರಿನ ಹೊರಗೆ ಹೋದವರು 7.30 ಗಂಟೆಯಾದರೂ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ವಿಷ ಸೇವಿಸಿರುವುದು ತಿಳಿದು ಬಂದು ನಂತರ ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ ಕೂಡಲೆ ಎಲ್ಲರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಎಲ್ಲರನ್ನೂ ಮಂಡ್ಯ ಮಿಮ್ಸ್ ಗೆ ಕಳುಹಿಸಿಕೊಡಲಾಗಿದೆ.

ರಾಜು 11 ಲಕ್ಷ ಸಾಲ ಮಾಡಿಕೊಂಡಿದ್ದರು ಸಾಲಗಾರರು ಸುಬ್ರಪ್ಪನ ಪಾಲ್ಯದಲ್ಲಿದ್ದ ವೇಳೆ ಕಿರುಕುಳ ನೀಡುತ್ತಿದ್ದರು ಎಂದು ಡೊಡ್ಡ ಮಣ್ಣುಗುಡ್ಡೆದೊಡ್ಡಿಗೆ ಬಂದು ನೆಲೆಸಿದ್ದರು ಎಂದು ಮಂಗಳಮ್ಮ ಸೋದರ ಸಂಬಂಧಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಘಟನೆ ವಿವರ: ಸಾಲಗಾರರ ಕಾಟದಿಂದ ಬೇಸತ್ತಿದ್ದ ರಾಜು ತನ್ನ ಕುಟುಂಬದ ಜೊತೆ ಹುಟ್ಟೂರು ಬಿಟ್ಟು ಅತ್ತೆಮಾವನ ಮನೆಗೆ ಬಂದು ನೆಲೆಸಿದ್ದ ಆದರೆ ಇಲ್ಲಿಯೂ ಸಾಲಗಾರರ ಕಿರುಕುಳ ನಿರಂತರವಾಗಿತ್ತು ಎನ್ನಲಾಗಿದ್ದು ಮಾನ ಹೋಗುವ ಭಯಕ್ಕೆ ಹೆದರಿ ಜೊತೆಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗದು ಎಂಬ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದ್ದು, ಕುಟುಂಬದ ಎಲ್ಲಾ ಸದಸ್ಯರೂ ತೀರ್ಮಾನಿಸಿಯೇ ಮನೆ ಬಿಟ್ಟು ಊರಿನ ಹೋರಗೆ ಹೋಗಿ ಮಕ್ಕಳಿಗೆ ಕಲ್ಲುಸಕ್ಕರೆ ಮತ್ತು ಬಾಳೆಹಣ್ಣು ಜೊತೆಗೆ ಇಲಿ ಪಾಷಾಣ ನೀಡಿದ್ದಾರೆ ಅಲ್ಲದೆ ಮನೆ ಮಂದಿಯೆಲ್ಲಾ ಊಟದ ಜೊತೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಗಳಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎನ್ನಲಾಗಿದ್ದು ಇದೀಗ ಮಂಡ್ಯದಲ್ಲಿ ಮಕ್ಕಳಾದ ಆಕಾಶ್ ಕೃಷ್ಣ ಮತ್ತು ದರ್ಶಿನಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ ಸವಿತಾ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next