Advertisement

ರಾಮನಗರ, ಚನ್ನಪಟ್ಟಣ ಕಸ ಸಮಸ್ಯೆಗೆ ಪರಿಹಾರ

02:26 PM Nov 22, 2020 | Suhan S |

ಚನ್ನಪಟ್ಟಣ: ನಗರದ ಕಸ ವಿಲೇವಾರಿ ಸಮಸ್ಯೆ ವಿಚಾರದಲ್ಲಿಆರಂಭದಲ್ಲೇವೈಜಾnನಿಕನಿಯಮಗಳನ್ನು ಅನುಸರಿಸಿದ್ದರೆ ಗ್ರಾಮೀಣರಿಂದ ವಿರೋಧ ಎದುರಿಸುವ ಪ್ರಮೇಯ ಬರುತ್ತಿರಲಿಲ್ಲ. ಮನಬಂದಂತೆ ಕಸ ಸುರಿದು ಇದೀಗ ಸಮಸ್ಯೆ ಜಟಿಲಗೊಂಡಿದೆ ಎಂದುಮಾಜಿಸಿಎಂ,ಶಾಸಕಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಅಂಕುಶನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Advertisement

ಅಧಿಕಾರಿಗಳ ಸಭೆ ಕರೆದು ಕ್ರಮ: ಕಣ್ವದಲ್ಲಿ ಕಸವನ್ನೆಲ್ಲಾ ತೆಗೆದುಕೊಂಡು ಹೋಗಿ ಸುರಿದು ಇಡೀ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ, ಹಾಗಾಗಿ ಜನ ವಿರೋಧಿಸುತ್ತಿದ್ದಾರೆ, ಬೇರೆ ಕಡೆಯೂ ಇದೇ ಪರಿಸ್ಥಿತಿ ಇದೆ. ರಾಮನಗರ, ಚನ್ನಪಟ್ಟಣ ಎರಡೂ ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಕ್ರಮ ವಹಿಸಲಾಗುವುದು ಎಂದರು.

ಕಾಮಗಾರಿಗಳ ವೇಗ ಹೆಚ್ಚಿಸಿ: ಕ್ಷೇತ್ರ ಪ್ರವಾಸದ ಸಮಯದಲ್ಲಿ ಕಂದಾಯ ಇಲಾಖೆಯ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಜನತೆ ದೂರು ನೀಡುತ್ತಿದ್ದಾರೆ. ತಹಶೀಲ್ದಾರ್‌ಗೆ ಸಮಸ್ಯೆ ಸರಿಪಡಿಸಲು ಸೂಚಿಸಿದ್ದೇನೆ, ಕಾಮಗಾರಿ ಗಳ ನಿಧಾನಗತಿ ವಿಚಾರದಲ್ಲಿ ಸ್ವಲ್ಪ ಅಸಮಾಧಾನವಿದೆ. ಸ್ವಲ್ಪ ವೇಗ ಹೆಚ್ಚಿಸುವಂತೆ ಹೇಳಿದ್ದಾರೆ, ತಾಲೂಕಿನಲ್ಲಿ ಇನ್ನು 100 ಕೋಟಿ ರೂ. ಅನುದಾನ ತಂದರೆ ಎಲ್ಲ ಗ್ರಾಮಗಳ ರಸ್ತೆಗಳ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲಿದೆ ಎಂದು ತಿಳಿಸಿದರು.

ಸಮಸ್ಯೆ ಪರಿಹರಿಸಲು ಸೂಚನೆ: ಕಳೆದ ಹಲವು ವರ್ಷಗಳಿಂದ ತೀರ್ಮಾನವಾಗದೆ ನನೆಗುದಿಗೆ ಬಿದ್ದಿರುವ ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣಗಳನ್ನು ತಹಶೀಲ್ದಾರ್‌ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಇತ್ಯರ್ಥಪಡಿಸುತ್ತಿದ್ದಾರೆ. ಅದೇ ರೀತಿಸಾರ್ವಜನಿಕರಿಗೆ ತೊಂದರೆಯಾಗದಂತೆ ಕಂದಾಯ ಇಲಾಖೆಯ ಅವ್ಯವಸ್ಥೆ ಸರಿಪಡಿಸುತ್ತಿದ್ದಾರೆ. ಆದಷ್ಟು ಕಡಿಮೆ ಕಾಲಾವಕಾಶದಲ್ಲಿ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದರು.

ಹೊಸ ಪೈಪ್‌ ಅಳವಡಿಕೆ: ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್‌ ವಿಚಾರದಲ್ಲಿಕೆಲವೆಡೆಕಳಪೆ ಗುಣಮಟ್ಟದ ಪೈಪ್‌ಗ್ಳನ್ನು ಅಳವಡಿಸಲಾಗಿದೆ. ಅಂತಹ ಕಡೆಗಳಲ್ಲಿ ಹೊಸದಾಗಿ ಪೈಪ್‌ ಅಳವಡಿಸಲು ಕ್ರಮ ವಹಿಸಲಾಗುವುದು. ನಗರ ಪ್ರದೇಶದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ 30 ಕೋಟಿ ರೂ. ವೆಚ್ಚದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅನುಮೋದನೆ ದೊರೆಯಲಿದೆ ಎಂದರು.

Advertisement

ಕುಡಿವ ನೀರಿನ ಘಟಕ ಉದ್ಘಾಟನೆ: ಚಕ್ಕಲೂರು ದೊಡ್ಡಿಯಲ್ಲಿ ಪಶು ಆಸ್ಪತ್ರೆ ಕಟ್ಟಡ, ಸಿ.ಸಿ.ರಸ್ತೆ, ಎ.ವಿ.ಹಳ್ಳಿ, ಸೋಗಾಲ, ಹಾರೋಕೊಪ್ಪ, ನೇರಳೂರು ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಹಾರೋಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕುಮಾರಸ್ವಾಮಿ ಉದ್ಘಾಟಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಜಯಮುತ್ತು, ಮುಖಂಡ ಗೋವಿಂದಹಳ್ಳಿ ನಾಗರಾಜು, ಎಪಿಎಂಸಿನಿರ್ದೇಶಕ ಯಾಲಕ್ಕಿಗೌಡ, ತಹಶೀಲ್ದಾರ್‌ ನಾಗೇಶ್‌, ಮುಖಂಡರಾದ ಅಂಕುಶನಹಳ್ಳಿ ಸುರೇಶ್‌, ಗ್ರಾಪಂ ಮಾಜಿ ಸದಸ್ಯ ಯೋಗೇಶ್‌, ಗರಕಹಳ್ಳಿ ಜಗದೀಶ್‌, ಮಂಕುಂದ ನಂದೀಶ್‌ ಇತರರು ಇದ್ದರು.

ಒಂದೇ ಸೂರಿನಡಿ ಎಲ್ಲಾ ಕಚೇರಿಗಳು :  ಬಡವರಿಗೆ ಸೂರು ನೀಡುವ ಸಲುವಾಗಿ ಸ್ಲಂ ಬೋರ್ಡ್‌ ವತಿಯಿಂದ1500 ಮನೆಗಳ ನಿರ್ಮಾಣಕ್ಕೆ ತಾವು ಸಿಎಂ ಆಗಿದ್ದಾಗಲೇ ಚಾಲನೆ ನೀಡಲಾಗಿದೆ.ಕಾಮಗಾರಿ ಪ್ರಗತಿಯಲ್ಲಿದೆ, ಪಟ್ಟಣದಲ್ಲಿಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ, ಇದನ್ನು ತಪ್ಪಿಸಲುಕಂದಾಯ ಭವನ ನಿರ್ಮಾಣ ವಾಗಬೇಕು. ಇದನ್ನು ಮುಂದಿನ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಿ ಇತ್ಯರ್ಥಪಡಿಸಲಾಗುವುದು, ಭವನ ಪೂರ್ಣಗೊಂಡರೆ ಎಲ್ಲಕಚೇರಿಗಳು ಒಂದೇ ಕಡೆಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಇನ್ನು ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಖಾಸಗಿ ಬಸ್‌ ನಿಲ್ದಾಣ ಕಾಮಗಾರಿ ಪುನಾರಂಭಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅಷ್ಟರಲ್ಲಿಸರ್ಕಾರ ಪತನವಾಯಿತು, ನಿಲ್ದಾಣ ಜಾಗದ ವಿಚಾರದಲ್ಲಿಕೆಲವು ತಕರಾರುಗಳು ಇದ್ದು ಅವೆಲ್ಲವನ್ನು ಸರಿಪಡಿಸಿ ಚಾಲನೆಕೊಡಿಸುತ್ತೇನೆ, ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next