Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗಾ ರೆಡ್ಡಿ ನನಗೆ ಯಾರ ವಿರುದ್ಧವೂ ವೈಯಕ್ತಿಕ ಬೇಸರ ಇಲ್ಲ. ಪಕ್ಷ ಸಚಿವ ಸ್ಥಾನ ನೀಡಲು ಪರಿಗಣಿಸಿದ ಮಾನದಂಡದ ಬಗ್ಗೆ ಬೇಸರ ಇದೆ . ಆರ್.ವಿ.ದೇಶ್‌ಪಾಂಡೆ, ಕೆ.ಜೆ.ಜಾರ್ಜ್,ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್ ಇವರೆಲ್ಲಾ ಹಿರಿಯರು ಪಕ್ಷಕ್ಕೆ ಅವರ ಸೇವೆ ಅಗತ್ಯವಾಗಿ ಬೇಕು ಮತ್ತು ಸಂಪುಟದಲ್ಲಿ ಅವರ ಹಿರಿತನ ಕಾಣಬೇಕು. ಅವರಿಗೆ ಕೊಟ್ಟಿದ್ದಕ್ಕೆ ನನಗೆ ಬೇಸರ ಇಲ್ಲ. ಅವರಿಗೊಂದು ನ್ಯಾಯ, ನನಗೊಂದು ನ್ಯಾಯ ಯಾಕೆ ಎಂದು ಪ್ರಶ್ನಿಸಿದರು.
Related Articles
Advertisement
ನನ್ನ ಮಗಳೂ ಟ್ವೀಟ್ ಮಾಡುವ ಮುನ್ನ ನನ್ನ ಅಭಿಪ್ರಾಯ ಕೇಳಿರಲಿಲ್ಲ. ಬೆಂಬಲಿಗರಿಗೆ ಪ್ರತಿಭಟನೆ ಮಾಡಲು ಹೇಳಿರಲಿಲ್ಲ ಎಂದರು.
ನನ್ನ ಮುಂದಿನ ಗುರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವುದು. ನನ್ನ ಕೈಲಾದಷ್ಟು ಪಕ್ಷಕ್ಕೆ ದುಡಿದಿದ್ದೇನೆ ಮುಂದೆಯೂ ದುಡಿಯುತ್ತೇನೆ ಎಂದರು.