Advertisement

ರಾಮದುರ್ಗ: ಯುವಕರಿಗೆ ಶ್ರೀರಾಮನ ಮಹತ್ವ ತಿಳಿಸಲು ಯಾತ್ರೆ

04:23 PM Jan 29, 2024 | Team Udayavani |

ಉದಯವಾಣಿ ಸಮಾಚಾರ
ರಾಮದುರ್ಗ: ಸನಾತನ ಧರ್ಮದ ಹಾಗೂ ಶ್ರೀ ರಾಮನು ಭೇಟಿ ನೀಡಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ಅವುಗಳನ್ನು ದೇಶದ ಯುವ ಸಮುದಾಯಕ್ಕೆ ತಿಳಿಸುವ ಕಾರ್ಯ ಮಾಡುತ್ತಿರುವ ಮಧ್ಯಪ್ರದೇಶದ 100 ಕ್ಕೂ ಅಧಿಕ ಜನರ “ವಾನರ ಸೇನಾ’ ತಂಡವು ರವಿವಾರ ತಾಲೂಕಿನ ಐತಿಹಾಸಿಕ ಸುರೇಬಾನದ ಶಬರಿ ಕೊಳ್ಳಕ್ಕೆ ಭೇಟಿ ನೀಡಿತು.

Advertisement

ಸುರೇಬಾನ ಗ್ರಾಮ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಮುಖಂಡರು, ಶಬರಿದೇವಿ ಸಮಿತಿ ಸದಸ್ಯರು, ವಿವಿಧ ಮಹಿಳಾ ಭಜನಾ ಮಂಡಳಿಗಳು ಹಾಗೂ ಸಂತರು ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಿ ಸುರೇಬಾನದಿಂದ ಶಬರಿಕೊಳ್ಳದವರೆಗೆ
ಮೆರವಣೆಗೆಯಲ್ಲಿ ಕರೆತಂದರು.

ತಂಡ ಶ್ರೀರಾಮ ಮಂದಿರದಲ್ಲಿ ಹಾಗೂ ಶಬರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೆಲ ಸಮಯ ಶ್ರೀರಾಮನ ನಾಮ ಸ್ಮರಣೆ ಮಾಡಿತು. ನಂತರ ಶಬರಿ ದೇವಸ್ಥಾನ, ಪುಷ್ಕರಣಿ, ಬಾರೆ ಹಣ್ಣಿನ ಗಿಡ ಅಲ್ಲದೇ ಶ್ರೀರಾಮ ವಿಶ್ರಮಸಿದ ಸ್ಥಳ ವೀಕ್ಷಿಸಿ ಸಮಿತಿಯ ಸದಸ್ಯರಿಂದ ಸಂಪೂರ್ಣ ಮಾಹಿತಿ ಪಡೆದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ‘ವಾನರ ಸೇನಾ’ ಮುಖ್ಯಸ್ಥೆ ಸ್ವಪ್ನಾ ಸಿಂಗ್‌, ತಂಡದ ಸಂಚಾಲಕ ಅಪೂರ್ವಸಿಂಗ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಲಯ ಸಿಂಗ್‌, ತಮಿಳನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳಲ್ಲಿ ಸಂಚರಿಸಿ ಪ್ರಭು ಶ್ರೀರಾಮನು ತಮ್ಮ ಕಾಲದಲ್ಲಿ ಸಂಚರಿಸಿ, ನೆಲೆಸಿದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ದೇಶದ 250 ಕ್ಕೂ ಅಧಿಕ ಇನ್ಸ್ಟಾಗ್ರಾಮ್‌, ಯೂಟೂಬರ್, ಬ್ಲಾಗರ್ ಗಳನ್ನು ಜೊತೆಯಾಗಿಸಿಕೊಂಡು ಸಂಚಾರ ಮಾಡಲಾಗುತ್ತಿದೆ ಎಂದರು.

ನಮ್ಮ ಯಾತ್ರೆಯ ಉದ್ದೇಶ ಪ್ರಭು ಶ್ರೀರಾಮನ ಮಹತ್ವವನ್ನು, ಸನಾತನ ಧರ್ಮದ ಮಹತ್ವವನ್ನು ನಮ್ಮ ಯುವಕರಿಗೆ ತಿಳಿಸುವುದಾಗಿದೆ ಎಂದರು. ಜ. 14 ರಂದು ಯಾತ್ರೆ ಆರಂಭಗೊಂಡಿದ್ದು, ಫೆ.14 ರಂದು ಅಯೋಧ್ಯೆ ತಲುಪಲಿದೆ ಎಂದು ತಿಳಿಸಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಪ್ರಭು ಶ್ರೀರಾಮನು ಭೇಟಿ ನೀಡಿದ ಶಬರಿಕೊಳ್ಳದ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ಚರ್ಚಿಸಲಾಗಿದ್ದು, ಕೇಂದ್ರದ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

ಬಿಜೆಪಿ ಮುಖಂಡರಾದ ಡಾ| ಕೆ.ವಿ. ಪಾಟೀಲ, ಪಿ.ಎಫ್‌. ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ರವಿ ಸೂರ್ಯ, ವಿಜಯ ಗುಡದಾರಿ, ನಿಂಗಪ್ಪ ಮೆಳ್ಳಿಕೇರಿ, ಐ.ಎಸ್‌. ಹರನಟ್ಟಿ, ಬಿ.ಎಸ್‌. ಬೆಳವಣಕಿ, ಈರನಗೌಡ ಹೊಸಗೌಡ್ರ, ರಸೂಲ ಖಾಜಿ, ಶ್ರೀಶೈಲ ಮೆಳ್ಳಿಕೇರಿ, ಸುನೀತಾ ತಿಮ್ಮನಗೌಡ್ರ, ಬಾಬುರಡ್ಡಿ ಹೆಬ್ಬಳ್ಳಿ, ಅಶೋಕ ಗಾಣಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next