Advertisement

ಮಹಾತ್ಮ ಗಾಂಧೀಜಿಗೆ ‘ರಾಮ ನಾಮ’ ಪ್ರಿಯವಾಗಿತ್ತು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

12:43 PM Aug 05, 2020 | Mithun PG |

ಬೆಂಗಳೂರು: ಶಾಂತಿ ಮತ್ತು ಸೌರ್ಹಾದತೆಯ ವಾತಾವರಣದಲ್ಲಿ ಆಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವುದು ನಾಡಿನ ಜನತೆಗೆ ಸಮಾಧಾನ ಮತ್ತು ನೆಮ್ಮದಿ ತಂದಿದೆ ಎಂದು ಉಪಮುಖ್ಯಮಂತ್ರಿ  ಗೋವಿಂದ ಎಂ. ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಸ್ವತಃ ಮುಂದೆ ನಿಂತು ಕಾರ್ಯಕ್ರಮಗಳ ದಿಗ್ದರ್ಶನ ವಹಿಸುತ್ತಿರುವುದು ಸಮಗ್ರತೆಯ ಸಂದೇಶಕ್ಕೆ ನಾಂದಿಯಾಗಿದೆ. ಈ ಅಪೂರ್ವ ಸಮಾರಂಭ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನ ಸಂದೇಶಗಳ ಸಂದರ್ಭವೂ ಆಗಿದೆ. ಗಾಂಧೀಜಿಯವರು ಶ್ರೀರಾಮನ ಅನನ್ಯ ಮತ್ತು ಅಂತರಂಗದ ಭಕ್ತರಾಗಿದ್ದರು. ಜೀವಿತದ ಕೊನೆಯ ಗಳಿಗೆಯಲ್ಲೂ ರಾಮ ರಾಮ ಎಂದು ಜಪಿಸಿ ದೇವರಲ್ಲಿ ಜೀವ ಅರ್ಪಿಸಿಕೊಂಡ ಮಹಾನ್ ಭಕ್ತರು ಗಾಂಧೀಜಿ.

ಆಯೋಧ್ಯೆಯ ಸಮಾರಂಭಗಳು ಮಹಾತ್ಮನ ಶಾಂತಿ ಸೌರ್ಹಾದತೆಯ ಸಂದೇಶವನ್ನು ಬೀರಲಿ ಎಂದು  ಆಶಿಸುತ್ತೇನೆ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next