ಮುಂಬಯಿ: ಅಂಧೇರಿ ಪಶ್ಚಿಮದ ಎಸ್. ವಿ. ರೋಡ್‌ನ ಇರ್ಲಾದ ಶ್ರೀ ಅದಮಾರು ಮಠದಲ್ಲಿ 23ನೇ ವಾರ್ಷಿಕ ಶ್ರೀ ರಾಮ ನವಮಿ ಆಚರಣೆಯು ಎ. 6ರಿಂದ ಎ. 13 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ದಿನಂಪ್ರತಿ ಸಂಜೆ 5.30ರಿಂದ ರಾತ್ರಿ 7ರವರೆಗೆ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ರಾಮಾಯಣ ಪ್ರವಚನ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ. ಎ. 6ರಂದು ಸಂಜೆ ಹರಿ ಕೃಷ್ಣ ಭಜನಾ ಮಂಡಳಿ ನವಿ ಮುಂಬಯಿ ಗುರು ಸುಚಿತ್ರಾ ಅವರಿಂದ ಭಜನೆ, ಎ. 7ರಂದು ಸಂಜೆ ಗುರು ರೇವತಿ ಶ್ರೀನಿವಾಸ ರಾಘವನ್ ಮತ್ತು ಗುರು ಪ್ರಿಯಾಂಜಲಿ ರಾವ್ ಬಳಗದಿಂದ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ.
ಎ. 8ರಂದು ಸಂಜೆ ಮಿಥಾಲಿ ರಾವ್ ಮತ್ತು ಜೋಸ್ನಾ ತುಂಗಾನೂರು ಅವರಿಂದ ಭಕ್ತಿ ಗೀತೆಗಳ ಗಾಯನ ನಡೆಯಲಿದೆ. ಎ. 9ರಂದು ಸಂಜೆ ಶ್ರೀ ಮದ್ಭಾರತ ಭಜನಾ ಮಂಡಳಿ ಲಕ್ಷ್ಮೀನಾರಾಯಣ ಮಂದಿರದ ಪಿ. ಜಗನ್ನಾಥ್ ಪುತ್ರನ್ ಮತ್ತು ಬಳಗದಿಂದ ಹರಿಭಜನೆ, ಎ. 10ರಂದು ಸಂಜೆ ಗೋಪಾಲಕೃಷ್ಣ ಭಜನಾ ಮಂಡಳಿ ಅವರಿಂದ ಪಾದುಕ ಪ್ರದಾನ ತಾಳಮದ್ದಳೆ, ಎ. 11ರಂದು ಸಂಜೆ ವಿನಯ ಆನಂತ ಕೃಷ್ಣ ಅವರಿಂದ ದೇವರ ನಾಮಗಳ ಗಾಯನ ನಡೆಯಲಿದೆ. ಎ. 12ರಂದು ಸಂಜೆ ಗುರು ಸಹನಾ ಭಾರದ್ವಾಜ್ ಬಳಗದಿಂದ ಅವರಿಂದ ಭರತ ನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಎ. 13ರಂದು ರಾಮ ನವಮಿ ದಿನ ಬೆಳಗ್ಗೆ 7ರಿಂದ ಪಂಚಾಮೃತ ಅಭಿಷೇಕ, ಪೂರ್ವಾಹ್ನ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಮಧ್ಯಾಹ್ನ 11.30ರಿಂದ ಮಹಾಪೂಜೆ, 12.30 ರಿಂದ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಪಲ್ಲಕ್ಕಿ ಉತ್ಸವ, ಸಂಜೆ 7ರಿಂದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅವರಿಂದ ವಿಶೇಷ ಪ್ರವಚನ, ರಾತ್ರಿ 8 ರಿಂದ ಮಹಾಪೂಜೆ. ರಾತ್ರಿ 8.30ರಿಂದ ರಾತ್ರಿ ನಂತರ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಾನಗರದ ಸರ್ವ ಭಕ್ತಾದಿಗಳು, ತುಳು-ಕನ್ನಡಿಗರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಹಾಗೂ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್ ರಾವ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.