Advertisement

ರಾಮಮಂದಿರ ನಿರ್ಮಾಣ ಖಚಿತ

12:30 AM Feb 19, 2019 | |

ಬೆಳಗಾವಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಖಚಿತ.  ಆದರೆ ಅದರಲ್ಲಿ ಬಾಬರ್‌ ಹೆಸರಿನಲ್ಲಿ ಒಂದೇ ಒಂದು ಇಟ್ಟಿಗೆ ಇರುವುದಿಲ್ಲ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ಸ್ಪಷ್ಟಪಡಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆ ವಿವಾದ ಈಗ ನ್ಯಾಯಾಲಯದಲ್ಲಿದೆ. ಆದಷ್ಟು ಬೇಗ ಎಲ್ಲವೂ ಸುಲಲಿತವಾಗಿ ಬಗೆಹರಿಯಲಿದೆ.  ಹಿಂದೂಗಳ ಭಾವನೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 2014ರ ಚುನಾವಣೆಗಿಂತ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ.  ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ದೇಶದ ಜನರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಎಲ್ಲ ಕಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

ರೈತರ ಪ್ರಗತಿಗೆ ಕ್ರಾಂತಿಕಾರಿ ಕ್ರಮ:  ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದವರಿಗೆ ಯಾವುದೇ ಕಾರ್ಯಸೂಚಿ ಇಲ್ಲವೇ ಇಲ್ಲ. ಮೋದಿ ಹಠಾವೋ ಎಂಬುದೇ ಅವರ ಏಕೈಕ ಘೋಷಣೆ.  ಆದರೆ ನಮ್ಮ ಬಳಿ ಹಲವಾರು ಸಾಧನೆಗಳ ವಿಷಯ ಇದೆ. ಜನರನ್ನು ಬಹಳ ಹತ್ತಿರದಿಂದ ನೋಡಿದ್ದೇವೆ. ಸಂಪರ್ಕ ಮಾಡಿ ಅವರ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ರೈತರ ಆದಾಯ ಹೆಚ್ಚಿಸಲು ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಭಾರತೀಯ ಸೇನೆಯಲ್ಲಿ ಸಾಮರ್ಥ್ಯ ಇದೆ. ಪಠಾಣಕೋಟ ಘಟನೆಯ ನಂತರ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗಿತ್ತು. ಈಗ ಪುಲ್ವಾಮಾ ಘಟನೆಯ ಬೆನ್ನಲ್ಲೇ ನಮ್ಮ ಸೇನಾ ಯೋಧರು ಉಗ್ರವಾದಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.  ಈಗಾಗಲೇ ಇಬ್ಬರು ಪ್ರಮುಖ ನಾಯಕರನ್ನು ಹೊಡೆದುರುಳಿಸಿದ್ದಾರೆ.  ಪಾಕಿಸ್ತಾನ ಹಾಗೂ ಉಗ್ರ ಸಂಘಟನೆ ಇದಕ್ಕೆ ತಕ್ಕ ಬೆಲೆ ತೆರಲಿದೆ.
– ಕೇಶವಪ್ರಸಾದ ಮೌರ್ಯ, ಉತ್ತರಪ್ರದೇಶ  ಉಪ ಮುಖ್ಯಮಂತ್ರಿ
 

Advertisement
Advertisement

Udayavani is now on Telegram. Click here to join our channel and stay updated with the latest news.

Next