Advertisement

ವಿಡಿಯೋ: “ಜೈ ಶ್ರೀರಾಮ್” ಹಾಡಿಗೆ ಶೂ ಕಳಚಿಟ್ಟು ಧ್ವನಿಗೂಡಿಸಿದ ಅಕ್ಷಯ್‌ ಕುಮಾರ್

05:31 PM Oct 20, 2022 | Team Udayavani |

ಮುಂಬಯಿ: ಅಕ್ಷಯ್‌ ಕುಮಾರ್‌ ಅಭಿನಯದ ʼರಾಮ್‌ ಸೇತುʼ  ಅ.25 ರಂದು ತೆರೆಗೆ ಬರಲಿದೆ. ಟೀಸರ್‌, ಟ್ರೇಲರ್‌ ನಿಂದ ಗಮನ ಸೆಳೆದಿರುವ ಸಿನಿಮಾದ ಆ್ಯಂಥಮ್ ಸಾಂಗ್ ರಿಲೀಸ್‌ ಆಗಿ ಸದ್ದು ಮಾಡುತ್ತಿದೆ.

Advertisement

ಚಿತ್ರದಲ್ಲಿ ಪುರಾತತ್ವಶಾಸ್ತ್ರಜ್ಞನಾಗಿ ಅಕ್ಷಯ್‌ ಕುಮಾರ್‌ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ರಿಲೀಸ್‌ ಆದ ಟ್ರೇಲರ್‌ ಬಾಲಿವುಡ್‌  ಅಂಗಳದಲ್ಲಿ ಗಮನ ಸೆಳೆಯುತ್ತಿದೆ. ʼರಾಮ ಸೇತುʼವನ್ನು ಅನ್ವೇಷಿಸುವ ಹಾಗೂ ಉಳಿಸುವ ಹಾದಿಯನ್ನು ಅಡ್ವೆಂಚರ್ ಸಫಾರಿಯ ಹಾಗೆ ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ಇದೀಗ ಆ್ಯಂಥಮ್ ಸಾಂಗ್ ʼಜೈ ಶ್ರೀರಾಮ್ʼ ಬಿಡುಗಡೆ ಆಗಿದೆ. ಸಮಾರಂಭವೊಂದರಲ್ಲಿ ಹಾಡನ್ನು ರಿಲೀಸ್‌ ಮಾಡಲಾಗಿದೆ. ಈ ಹಾಡನ್ನು ರಿಲೀಸ್‌ ಮಾಡುವಾಗ ಅಕ್ಷಯ್‌ ಕುಮಾರ್‌ ವೇದಿಕೆಯ ಮೇಲೆ ಬಂದಿದ್ದಾರೆ. ಈ ವೇಳೆ ಹಾಡು ಪ್ರಸಾರವಾಗಿದೆ. ಹಾಡು ಪ್ರಸಾರವಾಗುವಾಗ ಅಕ್ಷಯ್‌ ಕುಮಾರ್‌ ಶೂ ಕಳಚಿಟ್ಟು, ಭಕ್ತಿಪೂರ್ವಕವಾಗಿ ಹಾಡಿನೊಂದಿಗೆ ಧ್ವನಿ ಸೇರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹಾಡಿನ ಲಿಂಕ್‌ ಹಂಚಿಕೊಂಡು “ನಿಮಗಾಗಿ ನಮ್ಮ ದೀಪಾವಳಿ ಉಡುಗೂರೆ, ಜೈಶ್ರೀರಾಮ್‌ ಹಾಡು ರಿಲೀಸ್‌ ಆಗಿದೆ ಎಂದು ಬರೆದುಕೊಂಡಿದ್ದಾರೆ ಅಕ್ಷಯ್.

ವಿಕ್ರಮ್ ಮಾಂಟ್ರೋಸ್ ಹಾಡನ್ನು ಹಾಡಿ, ಸಂಗೀತ ಸಂಯೋಜಿಸಿದ್ದಾರೆ. ಯೂಟ್ಯೂಬ್‌ ನಲ್ಲಿ ಈ ಹಾಡು 5 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ.ಅಭಿಷೇಕ್‌ ಶರ್ಮಾ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಕ್ಷಯ್‌ ಕುಮಾರ್‌, ಜಾಕ್ವೆಲಿನ್‌, ನುಶ್ರತ್ ಭರುಚಾ, ಸತ್ಯದೇವ್ ಕಾಂಚರಣ ಮುಂತಾದ ಕಲಾವಿದರು ನಟಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next