Advertisement

Sanju Weds Geetha 2; ಕಲರ್’ಫುಟ್ ಸೆಟ್ ನಲ್ಲಿ ಸಂಜು ಹಾಡು

04:00 PM Apr 21, 2024 | Team Udayavani |

ಸಂಜು ವೆಡ್ಸ್‌ ಗೀತಾ-2 ಚಿತ್ರದ ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ. ಕುಣಿಗಲ್‌ನಲ್ಲಿ ಹಾಡೊಂದರ ಶೂಟಿಂಗ್‌ ನಡೆದಿದೆ.

Advertisement

ಈ ಹಾಡು, ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್‌, ಕುಣಿಗಲ್‌ನ ಯುಬಿ ಸ್ಟೆಡ್‌ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳ ಕಾಲ ಪ್ರಮುಖವಾದ ಕಲರ್‌ಫ‌ುಲ್‌ ಹಾಡಿನ ಚಿತ್ರೀಕರಣ ನಡೆಸಲಾಯಿತು.

ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಸುಮಾರು 45 ರಿಂದ 50 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ. ಇದಲ್ಲದೇ ಉಳಿದ ಹಾಡುಗಳನ್ನೂ ಸಹ ಇನ್ನೂ ಅದ್ಧೂರಿಯಾಗಿ ಆಗಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಚಿತ್ರ ಅದ್ಭುತ ದೃಶ್ಯಕಾವ್ಯವಾಗಿ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next