Advertisement
ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆಯೇ ರೋಹ್ಟಕ್ ಜೈಲಿನ ಕೊಠಡಿಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿರುವ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ನ್ಯಾಯಾಧೀಶ ಜಗಿªàಪ್ ಸಿಂಗ್ ಅವರು ಮಧ್ಯಾಹ್ನ 2.30ಕ್ಕೆ ಶಿಕ್ಷೆ ಪ್ರಕಟಿಸಲಿದ್ದಾರೆ. ಇದಕ್ಕಾಗಿ ಜೈಲಿನ ಸುತ್ತ 7 ಹಂತದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ರೋಹಕ್‌ಗೆ ಡೇರಾ ಬೆಂಬಲಿಗರು ಬರದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ ಹರ್ಯಾಣ ಗೃಹ ಕಾರ್ಯದರ್ಶಿ ರಾಮ್ ನಿವಾಸ್, ರೋಹ್ಟಕ್ನಲ್ಲಿರುವ ಜೈಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಪಕ್ಷಿಯನ್ನೂ ಬಿಡದಂತೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಮೂಲಗಳ ಪ್ರಕಾರ ರೋಹಕ್‌ನಲ್ಲಿ ಸುಮಾರು 15 ಸಾವಿರ ಮಂದಿ ಡೇರಾ ಸಚ್ಚಾ ಸೌದಾದ ಅನುಯಾಯಿಗಳು ಈಗಾಗಲೇ ಬಂದು ಸೇರಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಬೇರೆ ಬೇರೆ ಮಾರ್ಗಗಳ ಮೂಲಕ ಇನ್ನೂ ಎರಡು ಸಾವಿರ ಮಂದಿ ಬಂದು ಸೇರಿರಬೇಕು ಎಂದು ಅಂದಾಜಿಸಲಾಗಿದೆ. ಇವರ್ಯಾರೂ ಪೊಲೀಸರ ಕಣ್ಣಿಗೆ ಕಾಣಿಸದಿದ್ದರೂ, ಎಲ್ಲೆಲ್ಲೋ ಅವಿತುಕೊಂಡಿರಬೇಕು ಎಂದು ಹೇಳಲಾಗುತ್ತಿದೆ. ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆಯಷ್ಟೊತ್ತಿಗೆ ಇವರೆಲ್ಲಾ ಒಂದು ಕಡೆ ಸೇರಬಹುದು ಎನ್ನಲಾಗಿದೆ. ಶಿಕ್ಷೆ ಘೋಷಣೆಯಾದೊಡನೆ ಮತ್ತೂಂದು ಸುತ್ತಿನ ಹಿಂಸಾಚಾರ ಸಂಭವಿಸಬಹುದೇ, ಈ ಬೆಂಬಲಿಗರ ಯೋಜನೆಯೇನು ಎಂಬುದೇ ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಕಾಡತೊಡಗಿದೆ.
Related Articles
Advertisement
ಈಗಾಗಲೇ ಹರ್ಯಾಣದಲ್ಲಿ ಮತ್ತೂಬ್ಬ ಸ್ವಘೋಷಿತ ದೇವಮಾನವ ರಾಮ್‌ಪಾಲ್‌ಗೆ ಸಂಬಂಧಿಸಿದ ತೀರ್ಪು ಬಂದಾಗ ಮತ್ತು ಜಾಟ್ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸರ್ಕಾರ ಪಾಠ ಕಲಿಯದೇ ಇದ್ದುದರಿಂದ ಶುಕ್ರವಾರ ಭಾರೀ ಮಟ್ಟದ ಹಿಂಸಾಚಾರ ಸಂಭವಿಸಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಪ್ರತಿಯಾಗಿ ಸೋಮವಾರವೂ ಕೊಂಚ ಎಚ್ಚರ ತಪ್ಪಿದರೂ, ಮತ್ತೆ ಅದೇ ರೀತಿಯ ಹಿಂಸಾಚಾರವಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ, ಇಂಟರ್ನೆಟ್ ಸಂಪರ್ಕ ಸ್ಥಗಿತ:ವದಂತಿಗಳು ಹಬ್ಬಿ ಯಾವುದೇ ರೀತಿಯ ಹಿಂಸಾಚಾರ ಸಂಭವಿಸದಂತೆ ಮುಂಜಾಗ್ರತೆ ಕ್ರಮವಾಗಿ ಇನ್ನೂ ಎರಡು ದಿನ, ಅಂದರೆ ಮಂಗಳವಾರದ ವರೆಗೆ ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ನಿರ್ಬಂಧಿಸಲಾಗಿದೆ. ಕಿಡಿಗೇಡಿಗಳು ಸುಖಾಸುಮ್ಮನೆ ವದಂತಿಗಳನ್ನು ಹಬ್ಬಿಸುವ ಆತಂಕವಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜತೆಗೆ, ಹರ್ಯಾಣದಾದ್ಯಂತ ಸೋಮವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಹಜ ಸ್ಥಿತಿಗೆ ಪಂಚಕುಲ
ಪಂಚಕುಲ ಮತ್ತು ಸಿರ್ಸಾದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಭಾನುವಾರ ಕೊಂಚ ಸಡಿಲಿಸಲಾಗಿದೆ. ಅಲ್ಲದೆ ಹರ್ಯಾಣದ ಬೇರೆ ಕಡೆಗಳಲ್ಲೂ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ರೋಹrಕ್‌ನಲ್ಲಿ ಮಾತ್ರ ಭದ್ರತೆ ಮುಂದುವರಿಸಲಾಗಿದೆ.