Advertisement

ಒಂದು ತಿಂಗಳು ಮೊದಲೇ ರಿಲೀಸ್ ಆಗುತ್ತಿದೆ ಶ್ರೀಲೀಲಾ ನಟನೆಯ ‘ಬೋಯಾಪಾಟಿರಾಪೋ’

10:46 AM Jun 26, 2023 | Team Udayavani |

ಬೋಯಾಪಾಟಿ ಶ್ರೀನು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ಬೋಯಾಪಾಟಿರಾಪೋ..’ ಉಸ್ತಾದ್‌ ರಾಮ್‌ ಪೋತಿನೇನಿ ನಟನೆಯ ಮಾಸ್‌ ಆಕ್ಷನ್‌ ಎಂಟರ್‌ ಟೈನರ್‌ ಕಥಾಹಂದರದ ಈ ಚಿತ್ರವನ್ನು ದಸರಾ ಪ್ರಯುಕ್ತ ಅಕ್ಟೋಬರ್‌ 20ರಂದು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೀಗ ನಿಗದಿತ ಸಮಯಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

Advertisement

ಸೆಪ್ಟಂಬರ್‌ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬೋಯಾಪಾಟಿರಾಪೋ ವಿಶ್ವಾದ್ಯಂತ ರಿಲೀಸ್‌ ಆಗಲಿದೆ. ವೈಟ್‌ ಅಂಡ್‌ ವೈಟ್‌ ಪಂಚೆ ತೊಟ್ಟು ಕೈಯಲ್ಲಿ ಕಾಫಿ ಕಪ್‌ ಹಿಡಿದು ಹಸಿರನ್ನೇ ಹಾಸಿ ಹೊದ್ದಿರುವ ಭತ್ತದ ಗದ್ದೆಯಲ್ಲಿ ರಾಮ್‌ ಪೋತಿನೇನಿ ಕುಳಿತಿರುವ ಸ್ಪೆಷಲ್‌ ಪೋಸ್ಟರ್‌ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಅನೌನ್ಸ್‌ ಮಾಡಿದೆ.

ಲವರ್‌ ಬಾಯ್‌ ಆಗಿ ಮಿಂಚುತ್ತಿದ್ದ ರಾಮ್‌ ಪೋತಿನೇನಿ ಮೊದಲ ಬಾರಿಗೆ ಬೋಯಾಪಾಟಿರಾಪೋ ಸಿನಿಮಾದಲ್ಲಿ ಮಾಸ್‌ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್‌ಗೆ ಜೋಡಿಯಾಗಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next