ರೋಣ: ಪ್ರಭು ಶ್ರೀ ರಾಮಚಂದ್ರನ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿರುವ ಭಕ್ತರ ಮನಸ್ಸು ತುಂಬ ದೊಡ್ಡದು. ಪ್ರತಿಯೊಬ್ಬ ಭಕ್ತರು ಮಂದಿರ ನಿರ್ಮಾಣಕ್ಕೆ ಕೈಲಾದಷ್ಟು ದೇಣಿಗೆ ನೀಡುವಂತೆ ಬಿಜೆಪಿ ಮುಖಂಡ ಬಸವಂತಪ್ಪ ತಳವಾರ ಮನವಿ ಮಾಡಿದರು.
ಹುನಗುಂಡಿ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ಮಂದಿರ ನಿಧಿ ಸಂಗ್ರಹ ಹಾಗೂ ದೇಣಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದೆ. ಆದರೆ ದೇಶದ ಪ್ರತಿಯೊಬ್ಬ ಹಿಂದು ಹಾಗೂ ನಾಗರೀಕರ ಹಣ ಮಂದಿರಕ್ಕೆ ಮುಟ್ಟಬೇಕೆನ್ನುವ ಉದ್ದೇಶದಿಂದ ಜನರ ಬಳಿ ದೇಣಿಗೆಗೆ ಅವಕಾಶ ನೀಡಲಾಗಿದೆ. ಹುನಗುಂಡಿ ಗ್ರಾಮದಲ್ಲಿ ಮಂದಿರ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿಕೊಡಬೇಕು. ದೇಶಾದ್ಯಂತ ರಾಮ ಮಂದಿರ ನಿರ್ಮಾಣಕ್ಕೆ ಸಾಕಷ್ಟು ದೇಣಿಗೆ ನೀಡುತ್ತಿರುವುದು ಸಂತಸದ ವಿಷಯ ಎಂದರು. ನಂತರ ಹುನಗುಂಡಿ ಗ್ರಾಮದ ಮನೆ- ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಲಾಯಿತು.
ಸಂಗಮೇಶ ವಿರಕ್ತಮಠ ಮಾತನಾಡಿ, ರಾಮ ಮಂದಿರದ ಬಗ್ಗೆ ಹಾಗೂ ದೇಣಿಗೆ ಸಂಗ್ರಹದ ಪಾವತಿ ಪುಸ್ತಕದ ಬಗ್ಗೆ ರಸೀದಿ ಪುಸ್ತಕ ಕೊಟ್ಟು 24 ಗಂಟೆಯೊಳಗಾಗಿ ನಮಗೆ ಮುಟ್ಟಿಸಬೇಕು. ದೇಣಿಗೆ ಸಂಗ್ರಹ ಕಾರ್ಯ ಅಚ್ಚುಕಟ್ಟಾಗಿರಬೇಕು ಎಂದರು.
ಇದನ್ನೂ ಓದಿ :ಮಂತ್ರಿಗಳ ಸಂಖ್ಯೆ ಹೆಚ್ಚಾದಂತೆ ಹೆಚ್ಚುವರಿ ಖಾತೆ ಬಿಟ್ಟು ಕೊಡಲೇಬೇಕು :ಮಾಧುಸ್ವಾಮಿ ಸ್ಪಷ್ಟನೆ
ಈ ವೇಳೆ ಕೋತಬಾಳ ಗಂಗಾಧರ ಮಹಾಸ್ವಾಮಿಗಳು, ಎಚ್ಚರಪ್ಪ ಗದ್ದೆಪ್ಪನವರ, ಜಿ.ಎಸ್. ಮಂಡಸೊಪ್ಪಿ, ಎ.ಎಸ್. ಗೌಡರ, ಬಿ.ವೈ. ಮಂಡಸೊಪ್ಪಿ, ಎಸ್.ವಿ. ವಸ್ತ್ರದ, ಎಂ.ಬಿ. ಗೂಳಪ್ಪನವರ, ಅಮಾತಿಗೌಡ ಪೊಲೀಸ್‌ಪಾಟೀಲ, ರಾಚಯ್ಯ ಹಿರೇಮಠ, ಎಸ್.ಎಸ್. ಸಾಲಿಮಠ, ಎಸ್.ಎಚ್. ಜಂಗಣ್ಣವರ, ಎಂ.ಎಚ್. ಜಂತ್ಲಿ, ಕೆ.ಬಿ. ವೀರಸನ್ನವರ, ಬರಮಗೌಡ ಸೋಮನಗೌಡ್ರ, ಎಚ್.ವಿ. ಮದೇನಗುಡಿ ಇದ್ದರು.