Advertisement
ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22ರಂದು ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ಭವ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಆ ಮೂಲಕ ಭಾರತೀಯ ಸನಾತನ ಧರ್ಮೀಯರ ಕನಸು ನನಸಾಗಲಿದೆ ಎಂದು ತಿಳಿಸಿದರು.
Related Articles
ಅಯೋಧ್ಯೆಗೆ ಶ್ರೀರಾಮನ ಶಿಲಾ ವಿಗ್ರಹದ ಮೆರವಣಿಗೆ ಜ.17ರಂದು ನಡೆಯಲಿದೆ. ಸುಮಾರು ಐದರಿಂದ ಆರು ಅಡಿ ಎತ್ತರದ ಶಿಲಾ ಪ್ರತಿಮೆಯನ್ನು ಕರಸೇವಕಪುರಂನಿಂದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಸರಯೂ ನದಿಯಲ್ಲಿ ಶಿಲಾಮೂರ್ತಿಗೆ ಅಭಿಷೇಕ ನೆರವೇರಲಿದೆ. ಬಳಿಕ ಅಯೋಧ್ಯೆಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಜ.18ರಂದು ಶ್ರೀರಾಮ ಜನ್ಮಸ್ಥಳದ ಮೂಲ ಸ್ಥಾನದಲ್ಲಿ ನಿಲ್ಲಿಸಲಾಗುವುದು. ಜ.18ರಿಂದ 20ರ ವರೆಗೆ ಹಲವು ವಿಧಿವಿಧಾನ ನೆರವೇರಿಸಿ ಜ.21ರಂದು ಪ್ರತಿಷ್ಠಾಪನೆಯ ಪೂರ್ವಸಿದ್ಧತೆ ನಡೆಸಲಾಗುತ್ತದೆ.. ಜ.22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ, ಮಂದಿರ ಉದ್ಘಾಟನೆ ಬಳಿಕ ಮೂರು ಗಂಟೆ ಸಭಾ ಕಾರ್ಯಕ್ರಮ ಇರಲಿದೆ. ಸದ್ಯ ಪೂಜಿಸುತ್ತಿರುವ ಶ್ರೀರಾಮನ ಮೂರ್ತಿ ಕೂಡ ಅಲ್ಲೇ ಪ್ರತಿಷ್ಠಾಪನಗೊಳ್ಳಲಿದೆ ಎಂದರು.ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.
Advertisement
ಪ್ರತೀ ಮನೆಯಲ್ಲಿ ದೀಪೋತ್ಸವಶ್ರೀರಾಮ ಪ್ರತಿಷ್ಠೆ ಹಾಗೂ ಮಂದಿರ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಇದೆ. ಆ ದಿನ ರಾತ್ರಿ ಐದು ಶತಮಾನದ ಸಂಕೇತವಾಗಿ ಐದು ದೀಪಗಳನ್ನು ಪ್ರತಿ ಮನೆಗಳಲ್ಲಿ ಬೆಳಗುವ ಮೂಲಕ ಇದನ್ನು ದೀಪೋತ್ಸವವಾಗಿಯೂ ಆಚರಿಸಬೇಕು. ಇಡೀ ದಿನ ದೇವಸ್ಥಾನ, ಮಂದಿರ, ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಭಜನೆ ನಡೆಸಬೇಕು ಎಂದು ಸ್ವಾಮೀಜಿಗಳು ಹೇಳಿದರು.