ಲಕ್ನೋ: ಸೋಮವಾರ, ಜನವರಿ 22 ರಂದು ಹಿಂದೂಗಳಿಗೆ ಐತಿಹಾಸಿಕ ದಿನ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೊಂಡಿದೆ. ಆ ಮೂಲಕ ನೂರಾರು ವರ್ಷದ ಕನಸು ಅದ್ಧೂರಿಯಾಗಿ ನನಸಾಗಿದೆ.
ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಈ ಐತಿಹಾಸಿಕ ಕ್ಷಣಕ್ಕೆ ಕೋಟ್ಯಂತರ ಮಂದಿ ಸಾಕ್ಷಿಯಾಗಿದ್ದು, ರಾಮನ ಘೋಷಣೆಯನ್ನು ಮೊಳಗಿಸಿದ್ದಾರೆ.
ಪ್ರಾಣ ಪ್ರತಿಷ್ಠಾಪನೆ ದಿನದಿಂದು ಕೆಲ ರಾಜ್ಯಗಳಲ್ಲಿ ಸರ್ಕಾರಿ ರಜೆಯನ್ನು ನೀಡಿದ್ದಾರೆ. ಖಾಸಗಿ ಕಂಪೆನಿ, ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಇನ್ನು ಕೆಲಕಡೆ ಅರ್ಧದಿನ ರಜೆ ನೀಡಲಾಗಿದೆ. ರಾಮನ ಪ್ರತಿಷ್ಠಾಪನೆ ದಿನ ಕಚೇರಿಯಲ್ಲಿ ರಜೆ ನೀಡಿಲ್ಲ ಎನ್ನುವ ಕಾರಣಕ್ಕೆ ಒಬ್ಬ ಉದ್ಯೋಗಿ ಕೆಲಸವನ್ನೇ ಬಿಟ್ಟಿದ್ದಾನೆ.
ಗಗನ್ ತಿವಾರಿ ಎನ್ನುವಾತ ತನಗೆ ಪ್ರಾಣ ಪ್ರತಿಷ್ಠೆ ದಿನ ರಜೆ ನೀಡಿಲ್ಲ. ಹಾಗಾಗಿ ತಾನು ಕೆಲಸ ಬಿಟ್ಟಿದ್ದೇನೆ ಎನ್ನುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವುದು ವೈರಲ್ ಆಗಿದೆ.
ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠೆಯ ದಿನ ಕಂಪೆನಿಯ ಜನರಲ್ ಮ್ಯಾನೇಜರ್‌ನಿಂದ ರಜೆ ಕೇಳಿದ್ದೆ. ಆದರೆ ಈ ಐತಿಹಾಸಿಕ ದಿನದಂದು ರಜೆ ನಿರಾಕರಿಸಿದ್ದಾರೆ. ಹಾಗಾಗಿ ಕೆಲಸವನ್ನು ತ್ಯಜಿಸಿದ್ದೇನೆ ಎಂದು ಗಗನ್ ಪೋಸ್ಟ್ ಮಾಡಿದ್ದಾರೆ.
“ನಾನು ಇಂದು ನನ್ನ ಕೆಲಸವನ್ನು ತೊರೆದಿದ್ದೇನೆ. ನನ್ನ ಕಂಪನಿ ಜನರಲ್ ಮ್ಯಾನೇಜರ್ ಮುಸ್ಲಿಂ. ಅವರು ಜನವರಿ 22 ರಂದು ನನ್ನ ರಜೆಯನ್ನು ನಿರಾಕರಿಸಿದರು ಎಂದು ತಿವಾರಿ ʼಎಕ್ಸ್ʼ ನಲ್ಲಿ ಬರೆದುಕೊಂಡಿದ್ದಾರೆ.
ಈ ಟ್ವೀಟ್ ವೈರಲ್ ಆಗಿದ್ದು, ರಾಮ ಭಕ್ತರು ಗಗನ್ ಅವರನ್ನು ದಿಗ್ಗಜ ಎಂದು ಕರೆದಿದ್ದು, ರಾಮನ ಆಶಿರ್ವಾದದಿಂದ ಶೀಘ್ರದಲ್ಲಿ ಒಳ್ಳೆಯ ಕೆಲಸ ಸಿಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.
ʼಹುಷಾರ್ ಇಲ್ಲ ಎನ್ನಬಹುದಿತ್ತು. ಇದಕ್ಕೆ ಕೆಲಸ ಬಿಡುವ ಅಗತ್ಯ ಏನಿತ್ತು” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.