Advertisement

ಅಯೋಧ್ಯೆಯಲ್ಲಿ ರಾಮ ಮಂದಿರ 2025ರಲ್ಲಿ ಆದೀತು: ಜೋಶಿ ವ್ಯಂಗ್ಯ

06:56 AM Jan 18, 2019 | udayavani editorial |

ಪ್ರಯಾಗ್‌ರಾಜ್‌ : 2019ರ ಲೋಕಸಭಾ ಚುನಾವಣೆಯನ್ನು  ಒಂದೊಮ್ಮೆ  ಗೆದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲಾರರು ಎಂದು ವ್ಯಂಗ್ಯವಾಡುವ ಮೂಲಕ ಆರ್‌ಎಸ್‌ಎಸ್‌ , ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ನೇರ ವಾಕ್‌ ದಾಳಿ ನಡೆಸಿದೆ. 

Advertisement

ರಾಮ ಮಂದಿರ ವಿಷಯವನ್ನು ಉಲ್ಲೇಖೀಸಿದ ಆರ್‌ಎಸ್‌ಎಸ್‌ ನಂಬರ್‌ 2 ಮತ್ತು ಅದರ ಪ್ರಧಾನ ಕಾರ್ಯದರ್ಶಿ Bhaiyyaji ಜೋಷಿ ಅವರು “ಇನ್ನೇನಿದ್ದರೂ ಅಯೋಧ್ಯೆಯಲ್ಲಿ  ರಾಮ ಮಂದಿರವನ್ನು 2025ರಲ್ಲಿ ನಿರ್ಮಿಸಲಾಗುವುದು’ ಎಂದು ವ್ಯಂಗ್ಯವಾಡಿದರು. 

ಪ್ರಯಾಗ್‌ರಾಜ್‌ ನಲ್ಲೀಗ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸುತ್ತಿರುವ ಜೋಷಿ ಅವರು “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕ ದೇಶದ ಆರ್ಥಿಕಾಭಿವೃದ್ಧಿ  ನಾಗಾಲೋಟದಲ್ಲಿ ಸಾಗಲಿದೆ; ಹೇಗೆ 1952ರಲ್ಲಿ ಗುಜರಾತ್‌ ನಲ್ಲಿ ಸೋಮನಾಥ ದೇವಸ್ಥಾನದ ನಿರ್ಮಾಣವಾದ ಬಳಿಕ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಿತೋ ಹಾಗೆಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ದೇಶದ ಅಭಿವೃದ್ಧಿ ಮಿಂಚಿನ ಗತಿಯಲ್ಲಿ ನಡೆಯುವುದು ನಿಶ್ಚಿತ ಎಂದು ಹೇಳಿದರು. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಲವಾರು ಸವಾಲುಗಳಿರಬಹುದು; ಆದರೂ ಅವುಗಳನ್ನು ಬಗೆಹರಿಸಿ ಮುನ್ನಡೆಯುವುದು ಅಗತ್ಯ. ಏಕೆಂದರೆ ರಾಮ ಮಂದಿರ ಕೇವಲ ಒಂದು ದೇವಸ್ಥಾನ ಅಲ್ಲ; ಅದು ದೇಶದ ಕೋಟ್ಯಂತರ ಹಿಂದುಗಳ ನಂಬಿಕೆ, ವಿಶ್ವಾಸದ ಪ್ರತೀಕ ಎಂದು ಜೋಷಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next