Advertisement

Ram Mandir; ವಿದೇಶಗಳಲ್ಲೂ ಮನೆಮಾಡಿದ ಸಂಭ್ರಮ

11:39 PM Jan 15, 2024 | Team Udayavani |

ಹೊಸದಿಲ್ಲಿ: ಹಿಂದೂ ಬಾಂಧವರ ಆರಾಧ್ಯ ದೇವರಾದ ಶ್ರೀ ರಾಮನ ಜನ್ಮಭೂಮಿಯಲ್ಲಿ ನಿರ್ಮಾಣ ಗೊಂಡಿರುವ ನೂತನ ದೇವಾ ಲಯದಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ವಾರವಷ್ಟೇ ಬಾಕಿ ಉಳಿದಿರುವಂತೆಯೇ ವಿದೇಶಗಳಲ್ಲೂ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರೀ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
500 ವರ್ಷಗಳ ಬಳಿಕ ಶ್ರೀರಾಮನಿಗೆ ಆತನ ಜನ್ಮಸ್ಥಳದಲ್ಲಿ ಭವ್ಯವಾದ ದೇಗುಲ ವೊಂದು ನಿರ್ಮಾಣಗೊಂಡು, ಅದರ ಗರ್ಭಗುಡಿಯಲ್ಲಿ ಬಾಲರಾಮ ವಿರಾಜ ಮಾನನಾಗಲಿರುವ ಹಿನ್ನೆಲೆಯಲ್ಲಿ ಅಮೆರಿಕ, ಫ್ರಾನ್ಸ್‌, ಬ್ರಿಟನ್‌, ಕೆನಡಾ, ಮಾರಿಷಸ್‌, ಆಸ್ಟ್ರೇಲಿಯಾ ಸಹಿತ ವಿವಿಧ ದೇಶಗಳಲ್ಲಿ ಶ್ರೀರಾಮ ವಿಗ್ರಹದ ಪ್ರಾಣಪ್ರತಿಷ್ಠೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Advertisement

ಅಮೆರಿಕದ ವಾಷಿಂಗ್ಟನ್‌, ಚಿಕಾಗೋ, ಕ್ಯಾಲಿಪೋರ್ನಿಯಾ, ಹ್ಯೂಸ್ಟನ್‌ ಸಹಿತ ವಿವಿಧ ನಗರಗಳಲ್ಲಿ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಪ್ರಚಾರಾರ್ಥ ಕಾರು ರ್ಯಾಲಿ, ಬೈಕ್‌ ರ್ಯಾಲಿಗಳನ್ನು ನಡೆಸಲಾಗಿದ್ದರೆ ವಿವಿಧೆಡೆ ಬೃಹತ್‌ ಜಾಹೀರಾತು ಫ‌ಲಕಗಳು, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಇನ್ನು ಫ್ರಾನ್ಸ್‌ನ ಪ್ಯಾರಿಸ್‌ನ ಐಫೆಲ್‌ ಟವರ್‌ ಸನಿಹವೇ ರಾಮ ರಥ ಯಾತ್ರಾವನ್ನು ಹಮ್ಮಿಕೊಳ್ಳಲಾಗಿದೆ.

ವಿಶ್ವದ ಸುಮಾರು 50 ದೇಶಗಳಲ್ಲಿ ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಯುಕೆಯಲ್ಲಿ 25, ಆಸ್ಟ್ರೇಲಿಯಾದಲ್ಲಿ 30, ಕೆನಡಾದಲ್ಲಿ 30 ಮತ್ತು ಮಾರಿಷಸ್‌ನಲ್ಲಿ 100 ಸ್ಥಳಗಳಲ್ಲಿ ಬೃಹತ್‌ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡ ಲಾಗುವುದು. ಅಮೆರಿಕದ 10 ರಾಜ್ಯಗಳಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಯಲ್ಲಿ ನಿರ್ಮಿಸಲಾಗಿರುವ ನೂತನ ರಾಮ ಮಂದಿರ ಮತ್ತು ಶ್ರೀರಾಮನ ಚಿತ್ರವನ್ನು ಒಳಗೊಂಡ 40 ಎಲ್‌ಇಡಿ ಜಾಹೀರಾತು ಫ‌ಲಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಜ. 22ರಂದು ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಶುಭಕೋರಲಾಗಿದೆ.

ವಿಶ್ವಹಿಂದೂ ಪರಿಷತ್‌ನ ಅಮೆರಿಕ ಘಟಕವು, ಅಮೆರಿಕದ ಹಿಂದೂ ಸಂಘಸಂಸ್ಥೆಗಳ ಸಹಯೋಗದಲ್ಲಿ ಈ ಜಾಹೀರಾತು ಫ‌ಲಕಗಳನ್ನು ಅಳವಡಿಸಿದೆ. ಟೆಕ್ಸಾಸ್‌, ಇಲಿನಾಯ್ಸ, ನ್ಯೂಯಾರ್ಕ್‌, ನ್ಯೂಜೆರ್ಸಿ, ಜಾರ್ಜಿಯಾ, ಅರಿಜೋನಾ, ಮಿಸೊÕàರಿ ಸಹಿತ 10 ರಾಜ್ಯಗಳಲ್ಲಿ ಈ ಜಾಹೀರಾತು ಫ‌ಲಕಗಳನ್ನು ಅಳವಡಿಸಲಾಗಿದೆ. ಇದೇ ವೇಳೆ ಅಮೆರಿಕದ ವಿವಿಧೆಡೆಗಳಲ್ಲಿ ನೆಲೆಸಿರುವ ಹಿಂದೂ ಬಾಂಧವರು ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಗಳು, ರಾಮಾಯಣದ ಕುರಿತಾಗಿನ ಸಾಕ್ಷ್ಯಚಿತ್ರಗಳ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಐತಿಹಾಸಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ಸಂಭ್ರಮದಲ್ಲಿ ಭಾಗಿಗಳಾಗಿದ್ದಾರೆ.

ವಿ.ಹಿಂ.ಪ.ನ ಅಮೆರಿಕ ಘಟಕವು ಮೇರಿಲ್ಯಾಂಡ್‌ನ‌ಲ್ಲಿ ಟೆಸ್ಲಾ ಮ್ಯೂಸಿಕಲ್‌ ಲೈಟ್‌ ಶೋ ಅನ್ನು ಆಯೋಜಿಸಿತ್ತು. ಶ್ರೀರಾಮನ ಚಿತ್ರವುಳ್ಳ ಕೇಸರಿ ಧ್ವಜವನ್ನು ಹಿಡಿದು “ಜೈ ಶ್ರೀರಾಮ್‌’ ಘೋಷಣೆಗಳನ್ನು ಕೂಗುತ್ತ ನೂರಾರು ಸಂಖ್ಯೆಯಲ್ಲಿ ಅಮೆರಿಕನ್‌ ಹಿಂದೂ ಸಮುದಾಯದವರು ಈ ಪ್ರದರ್ಶನದಲ್ಲಿ ಪಾಲ್ಗೊಂಡರು.

Advertisement

ರಾಮಾಯಣ ಯುದ್ಧ ನಡೆದಿದ್ದು ಶೂರ್ಪನಖಿಗಾಗಿ!
ರಾಮಾಯಣ ಯುದ್ಧ ನಡೆದಿದ್ದು ಸೀತೆಗಾಗಿ ಎಂದು ಬಹುತೇಕರು ಭಾವಿಸಿದ್ದಾರೆ. ಅಲ್ಲ ಶೂರ್ಪನಖೀಗಾಗಿ! ರಾಮ-ಲಕ್ಷ್ಮಣರನ್ನು ಕಂಡು ಮೋಹಿತಳಾದ ಶೂರ್ಪನಖಿ, ಅವರಿಬ್ಬರನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾಳೆ. ಇಬ್ಬರೂ ನಿರಾಕರಿಸುತ್ತಾರೆ, ಲಕ್ಷ್ಮಣ ಆಕೆಯ ಕಿವಿಯನ್ನು ಕತ್ತರಿಸಿ ಕಳಿಸುತ್ತಾನೆ. ಇದನ್ನು ದುಃಖದಿಂದ ಶೂರ್ಪನಖೀ ರಾವಣನಿಗೆ ಹೇಳುತ್ತಾಳೆ. ತಂಗಿಯ ಮಾತುಗಳನ್ನು ಕೇಳಿ ಆಕ್ರೋಶಗೊಂಡ ರಾವಣ, ಸೀತೆಯನ್ನು ಅಪಹರಿಸಲು ನಿರ್ಧರಿಸುತ್ತಾನೆ. ಅನಂತರವೇ ದೊಡ್ಡ ಯುದ್ಧಕ್ಕೆ ವೇದಿಕೆ ಸಿದ್ಧವಾಗಿದ್ದು.

Advertisement

Udayavani is now on Telegram. Click here to join our channel and stay updated with the latest news.

Next