“ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸೂಯೆ ಮತ್ತು ಹೊಟ್ಟೆ ಉರಿ ಮತ್ತು ಅಸೂಯೆ ಕಾರಣದಿಂದಲೇ ಕಾಂಗ್ರೆಸ್ ರಾಮಮಂದಿರ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ. ದೇಶವನ್ನು ವಿರೋಧಿಸುವ ಮಟ್ಟಕ್ಕೆ ಹೋಗಿದ್ದ ಕಾಂಗ್ರೆಸ್, ಈಗ ದೇವರನ್ನು ವಿರೋಧಿಸುವ ಮಟ್ಟಕ್ಕೆ ಹೋಗಿದೆ’ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ದೂರಿದ್ದಾರೆ.
“ಒಂದು ಕಾಲದಲ್ಲಿ ರಾಮಮಂದಿರ ವಿರೋಧಿಸಿ, ಬಾಬ್ರಿ ಮಸೀದಿ ಪರವಾಗಿ ಕೋರ್ಟ್‌ನಲ್ಲಿ ವ್ಯಾಜ್ಯ ಹೂಡಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ಮಂದಿರ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿದೆ. ಇದು ಹಿಂದೂಗಳ ಉದಾರತೆಯನ್ನು ತೋರಿಸುತ್ತದೆ. ಆಹ್ವಾನವನ್ನು ಇಕ್ಬಾಲ್ ಅನ್ಸಾರಿ ಸ್ವೀಕರಿಸಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ’ ಎಂದು ಕಿಡಿಕಾರಿದ್ದಾರೆ.
Advertisement
“ರಾಮ ಮಂದಿರ ಕಾರ್ಯಕ್ರಮವನ್ನು ನಾವು ರಾಜಕೀಯ ಕಾರ್ಯಕ್ರಮವಾಗಿ ಮಾಡುತ್ತಿಲ್ಲ. ಕಾಂಗ್ರೆಸ್ ತನ್ನ ಅತಿಯಾದ ಓಲೈಕೆ ರಾಜಕಾರಣದಿಂದ ಸಮಾರಂಭವನ್ನು ಬಹಿಷ್ಕರಿಸಿದೆ. ಈ ಹಿಂದೆ ಸೋಮನಾಥ ದೇಗುಲದ ಪುನರ್‌ನವೀಕರಣ ಮತ್ತು ಉದ್ಘಾಟನೆಯನ್ನು ಜವಾಹರ್ ಲಾಲ್ ನೆಹರೂ ವಿರೋಧಿಸಿದ್ದರು. ಗೋಹತ್ಯೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂತರ ಮೇಲೆ ಇಂದಿರಾ ಗಾಂಧಿ ಗೋಲಿಬಾರ್ ಮಾಡಿಸಿದ್ದರು. ಅಲ್ಲದೇ “ಶ್ರೀರಾಮ ಒಬ್ಬ ಕಾಲ್ಪನಿಕ ಪುರುಷ’ ಎಂದು ಅನೇಕ ಬಾರಿ ಕಾಂಗ್ರೆಸ್ ಪ್ರತಿಪಾದಿಸಿದೆ. ಕಾಂಗ್ರೆಸ್‌ನ ಇತಿಹಾಸವೇ ಹೀಗಿದೆ’ ಎಂದು ಸುಧಾಂಶು ತ್ರಿವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂದಿರ ಲೋಕಾರ್ಪಣೆ ನಿಮಿತ್ತ ಉತ್ತರ ಪ್ರದೇಶ ದಲ್ಲಿ ರವಿವಾರದಿಂದ ರಾಜ್ಯಾದ್ಯಂತ ಶುಚಿತ್ವದ ಅಭಿಯಾನ ಕೈಗೊಳ್ಳಲು ತೀರ್ಮಾ ನಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಲಿ ದ್ದಾರೆ. ಉತ್ತರ ಪ್ರದೇ ಶದ ಪ್ರತಿಯೊಂದು ಗ್ರಾಮ, ನಗರ, ಪಟ್ಟಣಗಳಲ್ಲಿ ಅಭಿಯಾನ ಕೈಗೊಳ್ಳಲು ಏರ್ಪಾಡು ಮಾಡಲಾ ಗಿದೆ. ಶುಚಿತ್ವ ಅಭಿಯಾನ ವೇಳೆ ರಸ್ತೆಯನ್ನು ಸರಿಯಾದ ರೀತಿಯಲ್ಲಿ ಗುಡಿಸಬೇಕು, ತೆಗೆಯುವಂತೆ ಸಿಬಂದಿ ಆದೇಶ ನೀಡಲಾಗಿದೆ. ಆಮಂತ್ರಣ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮೆಸೇಜ್ ಕ್ಲಿಕ್ ಬೇಡ: ತಜ್ಞರ ಎಚ್ಚರಿಕೆ
ವಾಟ್ಸ್‌ಆ್ಯಪ್‌ನಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಆಹ್ವಾನ ಪತ್ರಿಕೆ ನೆಪವೊಡ್ಡಿ ಕೈಚಳ ತೋರಿಸಲು ಮುಂದಾಗುತ್ತಿದ್ದಾರೆ. ಜ.22ರ ಕಾರ್ಯ ಕ್ರಮ ಉದ್ಘಾಟನೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಆಮಂತ್ರಣ ನೀಡ ಲಾಗುತ್ತದೆ ಎಂದು ಮೋಸ ಮಾಡುವ ಪ್ರಯತ್ನ ನಡೆದಿದೆ. ವೈಯಕ್ತಿಕ ವಿವರಗಳನ್ನು ನಮೂದಿಸಿ ವಂಚನೆ ಮಾಡುವ ಪ್ರಯತ್ನಗಳು ನಡೆದಿವೆ. ರಾಮಜನ್ಮಭೂಮಿ ಗೃಹ ಸಂಪರ್ಕ ಅಭಿಯಾನ.ಎಪಿಕೆ ಹೆಸರಿಲ್ಲಿ ಮೆಸೇಜ್‌ಗಳು ಹರಿದಾಡುತ್ತಿವೆ.
Related Articles
ಗುಜರಾತ್‌ನ ಅಹ್ಮದಾಬಾದ್‌ನಿಂದ ಉತ್ತರ ಪ್ರದೇಶದ ಅಯೋ ಧ್ಯೆಗೆ ಮೊದ ಲ ವಿಮಾನ ಹಾರಾಟ ಗುರುವಾರ ಪ್ರಾರಂಭ ಗೊಂ ಡಿದ್ದು, ಪ್ರಯಾಣಿ ಕರು ರಾಮ, ಸೀತೆ, ಲಕ್ಷ್ಮಣ ಹಾಗೂ ಹನು ಮಂತನ ವೇಷಧಾರಿಗಳಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ದ್ದಾರೆ. ಈ ಸಂರ್ಭದಲ್ಲಿ ಅವ ರನ್ನು ಇತರ ಸಹ ಪ್ರಯಾಣಿಕರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಅಹ್ಮದಾಬಾದ್‌ನಿಂದ ಇಂಡಿ ಗೋದ ಮೊದಲ ವಿಮಾನ ಹಾರಾಟ ಆರಂಭಿಸಿದೆ. ಅದರಲ್ಲಿ ಪ್ರಯಾಣಿಸುವ ಕೆಲವರು ರಾಮ ಭಕ್ತರು ರಾಮ, ಲಕ್ಷ್ಮಣ, ಸೀತೆ, ಹನುಮನ ವೇಷಭೂಷಣದಲ್ಲೇ ಬಂದು ಟಿಕೆಟ್ ಪಡೆದಿ ದ್ದಾರೆ. ಅಲ್ಲದೇ, ಇಂಡಿಗೋ ಸಿಬಂದಿ ಕೂಡ ನಿಲ್ದಾಣದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
Advertisement