Advertisement
ಈಶಾನ್ಯ ರಾಜ್ಯಗಳಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ ರಾಮ್ ಮಾಧವ್ ಅವರನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೇ ಕರ್ನಾಟಕಕ್ಕೆ ಕಳುಹಿಸಿದ್ದಾರೆಂದು ಹೇಳಲಾಗಿದೆ. ರಾಜ್ಯ ನಾಯಕರಿಗೆ ಯಾವುದೇ ಮುನ್ಸೂಚನೆ ನೀಡದೆ ಬಂದಿರುವ ಅವರು ಮೊದಲಿಗೆ ಆರ್‌ಎಸ್‌ಎಸ್ ನಾಯಕರ ಜತೆ ಚರ್ಚಿಸಿ ನಂತರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪ ಖ್ಯಮಂತ್ರಿಗಳಾದಕೆ.ಎಸ್. ಈಶ್ವರಪ್ಪ, ಆರ್.ಅಶೋಕ್ ಜತೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಕೇಂದ್ರದ ಸಚಿವರಾದ ಅನಂತಕುಮಾರ್,
ಡಿ.ವಿ.ಸದಾನಂದಗೌಡ ಅವರ ಜತೆಗೂ ಚುನಾವಣಾ ಕಾರ್ಯತಂತ್ರ ಕುರಿತು ರಾಮ್ ಮಾಧವ್ ಮಾತನಾಡಲಿದ್ದಾರೆ.
ಆರ್‌ಎಸ್‌ಎಸ್‌ನಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿರುವ ರಾಮ್ ಮಾಧವ್, ರಾಜ್ಯದ ಆರ್‌ಎಸ್‌ಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಚಿರಪರಿಚಿತರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದರ ರೂಪು ರೇಷೆ ಸಹ ಹಾಕಿಕೊಡಲಿದ್ದಾರೆಂದು ತಿಳಿದು ಬಂದಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿ
ಬೆಂಗಳೂರು: ಪ್ರಸಕ್ತ ವಿಧಾನಸಭೆ ಚುನಾವಣೆ ಅತ್ಯಂತ ಮಹತ್ವವಾಗಿದ್ದು ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಗುರಿಯಾಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸಂಸ್ಥಾಪನಾ
ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ರಾಜ್ಯದಲ್ಲೂ ಬಿಜೆಪಿ ಸರ್ಕಾರ ತರಬೇಕು. ಮಿಷನ್ 150 ಗುರಿ ಮುಟ್ಟಲು ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮಿಸಬೇಕೆಂದು ಕರೆ ನೀಡಿದರು.
Related Articles
Advertisement
ಪಕ್ಷದ ವಕ್ತಾರ ಸುರೇಶ್‌ಕುಮಾರ್, ಅಂದು ವಾಜಪೇಯಿ ಮಾಡಿದ ಸಂಕಲ್ಪ ಇಂದು ನರೇಂದ್ರಮೋದಿ ನಾಯಕತ್ವದಿಂದ ಬಿಜೆಪಿ ಜನರವಿಶ್ವಾಸಪಾತ್ರ ಪಕ್ಷವಾಗಿ ಎತ್ತರಕ್ಕೆ ಬೆಳೆದಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಜನಪರ ಸರ್ಕಾರ ರಚನೆಯಾಗಲು ಕಾರ್ಯಕರ್ತರು ಸಂಕಲ್ಪ ತೊಡಗಬೇಕು ಎಂದು ಹೇಳಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ರವಿಕುಮಾರ್, ಸಂಸದ ಭಗವಂತ್ ಖೂಬಾ ಉಪಸ್ಥಿತರಿದ್ದರು.