ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿಗೆ ರಾಣಾ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಇದನ್ನೂ ಓದಿ:ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು
ತನ್ನ ಕಿರಿಯ ಸಹೋದರ ಅಕ್ಬರುದ್ದೀನ್ ಒವೈಸಿ ಫಿರಂಗಿ ಇದ್ದಂತೆ, ಆತನನ್ನು ನಾನು ಹಿಡಿತದಲ್ಲಿ ಇಟ್ಟುಕೊಂಡಿದ್ದೇನೆ ಎಂಬ ಅಸಾದುದ್ದೀನ್ ಒವೈಸಿ ಹೇಳಿಕೆಗೆ ತಿರುಗೇಟು ನೀಡಿರುವ ರಾಣಾ, ಬಾರತದ ಪ್ರತಿ ಮೂಲೆಯಲ್ಲೂ ರಾಮ ಭಕ್ತರು ತಿರುಗಾಡುತ್ತಿದ್ದಾರೆ. ನೀವು ಹೇಳುವ ಫಿರಂಗಿಗಳನ್ನು ನಾವು ನಮ್ಮ ಮನೆಯ ಹೊರಭಾಗದಲ್ಲಿ ಅಲಂಕಾರಕ್ಕಾಗಿ ಇಟ್ಟಿರುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಒವೈಸಿ, ನಾನು ನನ್ನ ಸಹೋದರನನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇನೆ. ಆತ ಫಿರಂಗಿ ಇದ್ದಂತೆ ಎಂಬುದಾಗಿ ಹೇಳಿದ್ದರು. ಆದರೆ ರಾಮಭಕ್ತರು ಎಲ್ಲೆಡೆ ಇದ್ದಾರೆ. ಮೋದಿಜೀಯವರ ಸಿಂಹಗಳು ಪ್ರತಿ ಬೀದಿ, ಬೀದಿಯಲ್ಲೂ ಸುತ್ತಾಡುತ್ತಿವೆ.
“ನಾನು ಹೈದರಾಬಾದ್ ಗೆ ಬರುತ್ತಿದ್ದೇನೆ. ಯಾರು ನನ್ನ ತಡೆಯುತ್ತಾರೋ ಎಂದು ನೋಡಬೇಕು ಎಂದು ರಾಣಾ ಎಕ್ಸ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ” ಒವೈಸಿಗೆ ಸವಾಲೊಡ್ಡಿದ್ದಾರೆ.
ಹೈದರಾಬಾದ್ ಅನ್ನು ಪಾಕಿಸ್ತಾನವನ್ನಾಗಿ ಬದಲಾಯಿಸುವುದನ್ನು ಮಾಧವಿ ಲತಾ ಅವರು ಖಂಡಿತವಾಗಿಯೂ ತಡೆಯುತ್ತಾರೆ. ನೀವು ಯಾರಾದರೂ ಕಾಂಗ್ರೆಸ್ ಅಥವಾ ಎಐಎಂಐಎಂ ಮತ ಚಲಾಯಿಸಿದರೆ ಅದು ಪಾಕಿಸ್ತಾನಕ್ಕೆ ಬೆಂಬಲ ನೀಡಿದಂತೆ ಎಂಬುದಾಗಿ ರಾಣಾ ಹೇಳಿದರು.
ನವನೀತ್ ರಾಣಾ ಮಹಾರಾಷ್ಟ್ರ ಅಮರಾವತಿ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆಯಾಗಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ವೋಟು ಹಾಕಿದ್ರೆ ಪಾಕಿಸ್ತಾನಕ್ಕೆ ಮತ ಚಲಾಯಿಸಿದಂತೆ” ಎಂಬುದಾಗಿ ಹೇಳಿಕೆ ನೀಡಿದ್ದ ರಾಣಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿತ್ತು.